ಬಾಣಸಿಗರ ದಂಡು ಭೋಜನ ಹಾಳುಗೆಡವಿತು
ಅನೇಕರು ಸೇರಿ ಕೆಲಸ ಮಾಡಿದರೆ ಕೆಲಸದ ಭಾರ ಕಡಿಮೆಯಾಗುತ್ತದೆ, ನಿಜ. ಆದರೆ ಒಂದೇ ಪದಾರ್ಥವನು ತಯಾರಿಸಲು ಹತ್ತಾರು ಮಂದಿ ಕೈ ಹಾಕಿದರೆ, ಪ್ರತಿಯೊಬ್ಬರೂ ಸ್ವಂತಿಕೆ ಮೆರೆಯಲು ಹೋದರೆ ಭೋಜನ ಬಾಯಿಗಿಡಲಾಗದಷ್ಟು ಹಾಳಾಗುವುದಂತೂ ಖಂಡಿತ. ಸಹಮತವಿಲ್ಲದೆ ಅನೇಕರು ಒಂದೇ ಕೆಲಸ ಮಾಡಲಾಗದು.
- ಸಂಪಟೂರು