ಭರವಸೆಯ ಬುನಾದಿ
ಮನುಷ್ಯ ಚರಿತ್ರೆ ಎಂದರೆ ಅದು ಆತನ ಹೋರಾಟಗಳ ಚರಿತ್ರೆಯೇ ಆಗಿದೆ. ಕಷ್ಟಗಳಿಂದ ಮೇಲೆ ಬರಲು, ಬಡತನದಿಂದ ಉದ್ಧಾರವಾಗಲು, ಸ್ವಂತ ಸೂರೊಂದನು ಕಟ್ಟಿಕೊಳ್ಳಲು, ಕಳೆದುಹೋದ ಘನತೆಯನು ಮತ್ತೆ ಪಡೆದುಕೊಳ್ಳಲು, ಮಣ್ಣು ಮುಕ್ಕಿದರೂ ಮತ್ತೆ ಮೇಲೆದ್ದು ನಿಲ್ಲಲು, ನೆಮ್ಮದಿಯ ಭವಿಷ್ಯವನು ರೂಪಿಸಲು ಆತ ಮಾಡಿದ ಹೋರಾಟ. ಈ ನಿರಂತರ ಹೋರಾಟದಲ್ಲಿ ಆತನಿಗೆ ಜತೆಯಾಗಿ ನಿಂತಿರುವುದು ಯಾವುದು? ಅದಕ್ಕೆ ಹೆಸರು ಭರವಸೆ!
ರಾಮ ಏಕಾಂಗಿಯಾಗಿದ್ದಾನೆ. ಮಡದಿಯನು ಕಳೆದುಕೊಂಡಿದ್ದಾನೆ. ಸೀತೆಯನು ಕದ್ದೊಯ್ದ ರಾವಣ ಮಹಾ ಬಲಶಾಲಿ ಎಂಬುದು ಗೊತ್ತು. ಅತನನು ಗೆಲ್ಲಲು ಸಮುದ್ರ ದಾಟಬೇಕು ಎಂಬುದೂ ಗೊತ್ತು. ಆತನನು ಮುನಡೆಸಿದ್ದು ಯಾವುದು? ಮಹಾತ್ಮ ಗಾಂಧಿಯ ಮುಂದೆ ಬೃಹತ್ ಬ್ರಿಟಿಷ್ ಸಾಮ್ರಾಜ್ಯವೇ ಗನು ಹಿಡಿದು ನಿಂತಿತ್ತು. ಆ ರಾಕ್ಷಸ ಬಲದ ಮುಂದೆ ತೊಡೆ ತಟ್ಟಲು ಅವರನು ಪ್ರೇರೇಪಿಸಿದ್ದಾದರೂ ಯಾವುದು? ಭರವಸೆ ಎಂಬುದೊಂದೇ ಉತ್ತರ.
ಒಳ್ಳೆಯ ಕಾರ್ಯಗಳಿಗಾಗಿ ಹೋರಾಡುತ್ತಿರುತ್ತಾರಲ್ಲ, ಅಂಥವರ ಪ್ರಮುಖ ಬಲವೇ ಭರವಸೆ. ಭರವಸೆಯ ಮೇಲೆ ನಂಬಿಕೆ ಇಡದಿದ್ದರೆ ಈ ಲೋಕವೇ ನಡೆಯದು. ವೈದ್ಯರ ಮೇಲೆ ನಂಬಿಕೆ ಇಲ್ಲದಿದ್ದರೆ ಅವರು ಎಂಥ ಮಹಾ ಮದ್ದು ಕೊಟ್ಟರೂ ಫಲಿಸದು. ಅಪ್ಪನ ಕೈಗಳು ತನನು ಹಿಡಿದುಕೊಳ್ಳುತ್ತವೆ ಎಂಬ ಸಂಪೂರ್ಣ ಭರವಸೆಯನಿಟ್ಟುಕೊಂಡೇ ಮಗು ಎತ್ತರದಿಂದ ಜಿಗಿಯುತ್ತದೆ. ಪ್ರೀತಿಸಿದವನು ಕೈಬಿಡುವುದಿಲ್ಲ ಎಂಬ ನಂಬಿಕೆಯ ಮೇಲೇ ಆಕೆ ಸಪ್ತಪದಿ ತುಳಿಯುತ್ತಾಳೆ. ಭರವಸೆ ಎಂಬುದು ಆತ್ಮವಿಶ್ವಾಸವನು ಸೃಷ್ಟಿಸುವ ಶಕ್ತಿ. ಆತ್ಮವಿಶ್ವಾಸ ಕುಸಿಯಲು ಕಾರಣವೇ ಭರವಸೆಯಲ್ಲಿ ಕುಸಿತ.
ನೀವು ಕೈಗೊಂಡ ಕೆಲಸ ಫಲಪ್ರದವಾಗುತ್ತದೆ ಎಂಬ ಸಂಪೂರ್ಣ ಭರವಸೆಯನಿಡಿ. ಅದಕ್ಕೆ ತಕ್ಕಂತೆ ನಿಮ್ಮ ಪ್ರಜ್ಞೆ ಅವಕಾಶಗಳನು ಸೃಷ್ಟಿಸಿಕೊಂಡು ಬೆಳೆಯುತ್ತ ಹೋಗುತ್ತದೆ. ನಿಮ್ಮ ಮೇಲೆ ಸಂಪೂರ್ಣ ಭರವಸೆಯಿಡಿ. ಅದು ಆತ್ಮವಿಶ್ವಾಸ ಗಟ್ಟಿಗೊಳಿಸಿಕೊಳ್ಳುವ ಮೊದಲ ಹಂತ. ಭರವಸೆಗೂ ಪ್ರಕೃತಿಗೂ ವಿಚಿತ್ರವಾದ ನಂಟಿದೆ. ಭರವಸೆಯಿಟ್ಟು ಬೀಜ ಬಿತ್ತುವವನನು ಪ್ರಕೃತಿ ಎಂದೂ ನಿರಾಸೆಗೊಳಿಸುವುದೇ ಇಲ್ಲ. ಸಂಕಲ್ಪ, ಉನತ ಉದ್ದೇಶ ಹಾಗೂ ಭರವಸೆಗಳು ಮಾನವತೆಯನು ಮೇಲೆತ್ತುವ ಮಹಾನ್ ಬುನಾದಿ ಕಲ್ಲುಗಳು.
-ಸಹನೆ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.