ವಿಷವೈದ್ಯ
ಹಾವು ಕಚ್ಚಿಸಿಕೊಂಡವರು, ಸರ್ಪಸುತ್ತು ಕಾಯಿಲೆಯಿರುವವರು, ಅಲರ್ಜಿಯಾದ...
ಪಶ್ಚಿಮ ಘಟ್ಟದ ತಪ್ಪಲಿನ ಸನಿಹದಲ್ಲಿರುವ ಗ್ರಾಮ ಪಿಲ್ಯ. ಬೆಳ್ತಂಗಡಿ, ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ಸಿಗುವ ಈ ಊರು ಬೆಳ್ತಂಗಡಿಯಿಂದ 12 ಕಿ.ಮೀ ದೂರದಲ್ಲಿದೆ. ಅಲ್ಲಿನ ಪುನ್ಕೆತ್ಯಾರು ಹೊಸಮನೆಯಲ್ಲಿ ವಿಶಿಷ್ಟ ಪ್ರತಿಭೆಯ ವ್ಯಕ್ತಿಯೊಬ್ಬರಿದ್ದಾರೆ. ಹಾವು ಕಚ್ಚಿಸಿಕೊಂಡವರು, ಸರ್ಪಸುತ್ತು ಕಾಯಿಲೆಯಿರುವವರು, ಅಲರ್ಜಿಯಾದ ಮಕ್ಕಳು, ವಾತ, ಮುಟ್ಟುದೋಷವಿದ್ದವರು, ಜಾನುವಾರುಗಳಿಗೆ ಕಾಯಿಲೆಯಾದವರು ಇವರಲ್ಲಿಗೆ ಬಂದು ರೋಗವನು ವಾಸಿ ಮಾಡಿಕೊಂಡು ಧನ್ಯತೆಯಿಂದ ಮರಳುತ್ತಾರೆ.
ಬೇಬಿ ಪೂಜಾರಿ ಇದಕ್ಕೆ ಹಣದ ಬಿಲ್ಲು ತಳ್ಳುವುದಿಲ್ಲ. ಬಂದವರು ತೆಗೆದುಕೊಳ್ಳಿ ಅಂತ ಒತ್ತಾಯಿಸಿದಾಗಲೆಲ್ಲ ಅಲ್ಲಿಯೇ ಮೇಜಿನ ಮೇಲಿರುವ ತಟ್ಟೆಯತ್ತ ಬೆರಳು ತೋರಿಸುತ್ತಾರೆ. ಗುಣಮುಖರಾದವರು ನೂರೋ ಇನೂರೋ ಇಟ್ಟು ನಮಸ್ಕರಿಸಿ ತೆರಳುತ್ತಾರೆ. ಕಡುಬಡವರಾಗಿದ್ದರೆ ವಾಹನದ ವ್ಯವಸ್ಥೆ ತಾವೇ ಮಾಡಿ ಹಣ ಕೊಟ್ಟು ಕಳುಹಿಸಿಕೊಡುತ್ತಾರೆ.
ವಿಷ ಚಿಕಿತ್ಸೆಯ ಧನ್ವಂತರಿ ಎಂದೇ ತಾಲೂಕಿನಾದ್ಯಂತ ಪ್ರಖ್ಯಾತರಾಗಿರುವ ಬೇಬಿ ಪೂಜಾರಿ ತಾವು ಮಾಡಿದ ಯಾವುದೇ ಚಿಕಿತ್ಸೆ ವಿಫಲವಾದದ್ದೇ ಇಲ್ಲವೆಂದು ತುಂಬು ವಿಶ್ವಾಸದಿಂದ ನುಡಿಯುತ್ತಾರೆ. ವಿಷದ ಹಾವಿನ ಕಡಿತಕ್ಕೊಳಗಾದವರು ಹೆಚ್ಚಾಗಿ ಸೀದಾ ಹೋಗುವುದು ಆಸ್ಪತ್ರೆಗೆ. ಹೀಗೆ ಹೋದ ಅನೇಕರು ಆಧುನಿಕ ಚಿಕಿತ್ಸೆ ಫಲಕಾರಿಯಾಗದೆ ಇವರಲ್ಲಿಗೆ ಬಂದದ್ದೂ ಉಂಟು. ಪಿಲ್ಯದ ಪರಿಸರದಲ್ಲಿ ಬಹುಕಾಲದ ಹಿಂದೆ ವಾಸವಾಗಿದ್ದ ದಾಸಯ್ಯನೊಬ್ಬನಿಂದ ಈ ನಾಟಿವೈದ್ಯ ಪದ್ಧತಿಯನು ಹೆನ್ಕಲ ತಿಮ್ಮಪ್ಪ ಪೂಜಾರಿ ಕಲಿತು ಪಂಡಿತರಾದರು. ಇವರ ಪುತ್ರ ಬೇಬಿ ಪೂಜಾರಿ ತಮ್ಮ ಹದಿನಾರನೇ ವರ್ಷದಿಂದಲೇ ತಂದೆಯೊಂದಿಗೆ ಚಿಕಿತ್ಸೆಗಾಗಿ ಹೋಗಲು ಆರಂಭಿಸಿ ಅವರು ನೀಡುತ್ತಿದ್ದ ಎಲ್ಲ ಚಿಕಿತ್ಸಾ ವಿಧಾನಗಳನು ಕಲಿತುಕೊಂಡರು. 1985ರಲ್ಲಿ ತಂದೆಯವರು ತೀರಿದ ಮೇಲೆ ಇವರ ಕೈಗುಣ ಸುತ್ತಮುತ್ತ ಹರಡತೊಡಗಿತು. ಸಾವಿರಕ್ಕೂ ಮಿಕ್ಕಿ ಜನ ಜಾನುವಾರುಗಳಿಗೆ ಔಷಧ ನೀಡಿ ಕಲಿತ ವಿದ್ಯೆಯನು ಧಾರೆಯೆರೆದು ಹಸನ್ಮುಖರಾಗುವಂತೆ ಮಾಡಿದರು. ನಾಗರಹಾವಿನಂತಹ ವಿಷಕಾರಿ ಹಾವುಗಳ ಕಡಿತವುಂಟಾದವರಲ್ಲಿಗೇ ತೆರಳಿ ಧೈರ್ಯದ ಮಾತು ಆಡಿ ವಾರದೊಳಗೆ ಗಾಯದ ಗುರುತು ಕೂಡಾ ಇಲ್ಲದಂತೆ ಮಾಡಿದ್ದು ಹಲವು ಬಾರಿ. ಹಾವು ಕಡಿತಕ್ಕೊಳಗಾದವರು ಮನೆಗೇ ಬಂದರೆ ವಿಷದ ಹಂತವನು ಗುರುತಿಸುತ್ತಾರೆ. ವಿಷ ಮೈಯಿಡೀ ಹರಡಿದ್ದರೆ ಅಂಥವರನು ಗುಣಮುಖರಾಗುವ ತನಕ ಮನೆಯಲ್ಲೇ ಇಟ್ಟುಕೊಂಡು ಗಾಯಕ್ಕೆ ವಿಷ ಹೀರುವ ಕಲ್ಲನು ಕಟ್ಟಿ ಶುಶ್ರೂಷೆ ನಡೆಸುತ್ತಾರೆ.
ಸದಾ ನಗುಮೊಗದ 61 ವರ್ಷ ಪ್ರಾಯದ ಬೇಬಿ ಪೂಜಾರಿ ಮೂಲಿಕೆ, ಮಂತ್ರ, ವೈದ್ಯ, ಪ್ರಥಮ ಚಿಕಿತ್ಸೆ, ಜಾನುವಾರು ಚಿಕಿತ್ಸೆಗಳನು ಕರಗತ ಮಾಡಿಕೊಂಡವರು. ತಮ್ಮ ನಾಟಿ ವಿದ್ಯೆಯನು ಮಗ ಸತೀಶನಿಗೂ ಕಲಿಸಿದ್ದಾರೆ. ತಮ್ಮ ವೈದ್ಯಕ್ಕೆ ಬೇಕಾದ ಸುಮಾರು ಎಪ್ಪತ್ತು ಗಿಡಮೂಲಿಕೆಗಳನು ಮನೆಯ ಸುತ್ತುಮುತ್ತ ಬೆಳೆಸಿಕೊಂಡಿದ್ದಾರೆ. ಮನೆಯಂಗಳದಲ್ಲಿ ಇಲ್ಲದ್ದನು ಕಾಡಿನೊಳಗಿಂದ ಸಲೀಸಾಗಿ ಆಯ್ದುಕೊಂಡು ತರುತ್ತಾರೆ. ಮೂಲಿಕೆ ವಿಜ್ಞಾನದ ಅಭಿವೃದ್ಧಿಯ ಕುರಿತು ಇವರಲ್ಲಿ ವಿಶೇಷ ಆಸಕ್ತಿ ಇದೆ.
-ದೀಪಕ್ ಅಳದಂಗಡಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.