ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಜಾಹಿರಾಯ್ತು

ಬ್ಯಾಂಕ್, ವಾಣಿಜ್ಯ ವಹಿವಾಟುಗಳಿಗೆ ಜಾಹಿರಾತೇ ಬಂಡವಾಳ. ಪುಟಗಟ್ಟಲೆ ಜಾಹಿರಾತು, ಕರಪತ್ರಗಳು, ಗ್ಲಾಸಿ ಪೇಪರ್‌ನಲ್ಲಿ...

Rashmi Kasaragodu
Updated On : 25 Sept 2013, 1:53 am

ಬ್ಯಾಂಕ್, ವಾಣಿಜ್ಯ ವಹಿವಾಟುಗಳಿಗೆ ಜಾಹಿರಾತೇ ಬಂಡವಾಳ. ಪುಟಗಟ್ಟಲೆ ಜಾಹಿರಾತು, ಕರಪತ್ರಗಳು, ಗ್ಲಾಸಿ ಪೇಪರ್‌ನಲ್ಲಿ ಮುದ್ರಣಗೊಂಡ ಬ್ರೋಷರ್‌ಗಳು ಹೀಗೆ ವಿವಿಧ ಹಂತಗಳ ಮೂಲಕ ಜನರಿಗೆ ಮಾಹಿತಿ, ಅವರನ್ನು ಆಕರ್ಷಿಸುವ ಯತ್ನ ನಡೆಯುತ್ತಿದೆ. ಇಂಥ ಮಾದರಿ ಏನಿದ್ದರೂ ಹಳೆಯ ಕ್ರಮ ಎಂದು ಪರಿಗಣಿಸಬಹುದು. ಈಗ ಜಮಾನಾ ಬದಲಾಗಿದೆ. ವ್ಯಾಪಾರೋದ್ದಿಮೆ ನಡೆಸುವವರ ಚಿಂತನೆಗಳೂ ಬದಲಾಗಿವೆ.
ಟಿವಿ, ಮುದ್ರಣ ಮಾಧ್ಯಮ ಜತೆಗೆ ಸಾಮಾಜಿಕ ಜಾಲ ತಾಣಗಳಲ್ಲಿಯೂ ಜಾಹಿರಾತು ನೀಡಲಾರಂಭಿಸಿದ್ದಾರೆ. ಇದು ಅಗ್ಗವಾದ್ದರಿಂದ ಈ ಟ್ರೆಂಡ್ ಕಳೆದ 2 ವರ್ಷಗಳಿಂದ ಜನಪ್ರಿಯವಾಗುತ್ತಿದೆ. ಮುದ್ರಣ ಮತ್ತು ಟಿವಿಗಳಲ್ಲಿ ಜಾಹಿರಾತಿಗಾಗಿ ಕೋಟಿಗಟ್ಟಲೆ ಹಣ ವೆಚ್ಚ ಮಾಡಬೇಕು. ಇಲ್ಲಿ ಅಂಥ ಮೊತ್ತ ಬೇಕಾಗಿಯೇ ಇಲ್ಲ.

ಎಲ್ಲೆಲ್ಲಿ ಜಾಹೀರಾತು?
ಯುವಜನರು ಸೇರಿದಂತೆ ಎಲ್ಲ ಮನಗೆದ್ದಿರುವ (ಮುರಿದಿರುವ ಕೂಡ ಹೌದು) ಫೇಸ್‌ಬುಕ್, ಲಿಂಕ್ಡ್ ಇನ್, ಹೈ5 ಸೇರಿದಂತೆ ಪ್ರಮುಖ ಸಾಮಾಜಿಕ ಜಾಲತಾಣಗಳಲ್ಲಿ ಈಗ ಸಣ್ಣ ಪ್ರಮಾಣದ ಜಾಹಿರಾತುಗಳನ್ನು ಕಾಣಬಹುದು. ಏಕೆಂದರೆ ಕೋಟ್ಯಂತರ ಜನರ ಪೈಕಿ ಒಬ್ಬರು ಇಲ್ಲದಿದ್ದರೆ ಮತ್ತೊಬ್ಬರು ಆನ್‌ಲೈನ್‌ನಲ್ಲಿ ಇದ್ದೇ ಇರುತ್ತಾರೆ. ಹೀಗಾಗಿ ಕಂಪನಿಗಳ ಪ್ರಾಡಕ್ಟ್‌ಗಳ ಬಗ್ಗೆ ಜನರಿಗೆ ಮಾಹಿತಿ ನಿರಂತರವಾಗಿ ತಲಪುತ್ತದೆ. ಇದರಿಂದಾಗಿ ಅವುಗಳಿಗೆ ಮುದ್ರಣ ಮಾಧ್ಯಮ ಮತ್ತು ಟಿವಿಗಳಲ್ಲಿ ನೀಡಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರಚಾರ ಸಿಕ್ಕಿದಂತಾಗುತ್ತದೆ.

ಹೆಚ್ಚಾಗುತ್ತಿದೆ
ಸಾಮಾಜಿಕ ಜಾಲತಾಣಗಳಲ್ಲಿ ಜಾಹಿರಾತು ನೀಡುವುದರಿಂದ ಅನನುಕೂಲಗಳು ಏನಿದ್ದರೂ, ಅದನ್ನು ಪಕ್ಕಕ್ಕಿಟ್ಟು ಉದ್ದಿಮೆಗಳು ಹೆಚ್ಚಿನ ಪ್ರಮಾಣದಲ್ಲಿ ಜಾಹಿರಾತು ನೀಡುತ್ತಿವೆ. ಹಲವು ಕಂಪನಿಗಳ ಪ್ರಕಾರ ಡಿಜಿಟಲ್ ಜಾಹಿರಾತಿಗಿಂತ ಜಾಲತಾಣಗಳಲ್ಲಿ ಪ್ರಚಾರ ನಡೆಸುವುದೇ ಅಗ್ಗ.

ನೇರ ಮಾಹಿತಿ
ಗ್ರಾಹಕರು ಆನ್‌ಲೈನ್‌ನಲ್ಲೇ ಸಿಗುವ ಕಾರಣದಿಂದ ವಿವಿಧ ಕಂಪನಿಗಳು ಅವರ ಜತೆ ಯಾವ ರೀತಿಯ ಉತ್ಪನ್ನಗಳು, ಪ್ಯಾಕೆಟ್‌ನ ವಿನ್ಯಾಸ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾಹಿತಿ ಪಡೆದುಕೊಂಡು ಅವರ ಇಚ್ಛೆಗೆ ತಕ್ಕಂತೆ ಸೇವೆಗಳನ್ನು ಒದಗಿಸಲು ಮನಸ್ಸು ಮಾಡಿವೆ.

ಸೋಶಿಯಲ್ ಮೀಡಿಯಾ ಯುನಿಟ್
ಬೃಹತ್ ಕಂಪನಿಗಳು ಈಗೀಗ ಜಾಲತಾಣಗಳ ನಿರ್ವಹಣೆಗೆಂದೇ ತಂಡಗಳನ್ನು ನಿಯೋಜಿಸುತ್ತಿವೆ. ಆನ್‌ಲೈನ್‌ನಲ್ಲಿರುವ ಗ್ರಾಹಕರನ್ನು ಅವರ ಅನುಮತಿ ಪಡೆದು ಸಂಪರ್ಕಿಸಿ ವಸ್ತುಗಳ ಬಗ್ಗೆ ವಿವರಣೆ, ಜಾಹಿರಾತು ನೀಡುವ ಕೆಲಸವನ್ನು ಈ ತಂಡ ನಿರ್ವಹಿಸುತ್ತಿವೆ. ನವದೆಹಲಿ, ಚೆನ್ನೈನಂಥ ಮೆಟ್ರೋ ನಗರಗಳಿಗೆ, ಎರಡನೇ, ಮೂರನೇ ಮತ್ತು ನಾಲ್ಕನೇ ಹಂತದ ನಗರಗಳಿಗೆ ಸಂಬಂಧಿಸಿ ಈ ತಂಡಗಳು ವೆಬ್‌ನಲ್ಲಿ ಜಾಹಿರಾತುಗಳನ್ನು ರೂಪಿಸಲಾರಂಭಿಸಿವೆ.

ಯಾವ ರೀತಿ ಪ್ರಚಾರ?
ಸುಖಾಸುಮ್ಮನೆ ಪ್ರಚಾರ ನೀಡಿದರೆ ಯಾರೂ ಅದರತ್ತ ಗಮನಿಸುವುದಿಲ್ಲ. ತಮಾಷೆಯಾಗಿರುವ ಮತ್ತು ಮನಸ್ಸಿಗೆ ಮುದ ನೀಡುವಂಥ ಸ್ಪರ್ಧೆಗಳನ್ನು ಆಯೋಜಿಸಬೇಕಾಗುತ್ತದೆ. ಉದಾಹರಣೆಗೆ ಟಾಟಾ ಕಂಪನಿಯ ತನಿಷ್ಕ್ ಸಾಮಾಜಿಕ ಜಾಲತಾಣದಲ್ಲಿ ಹೊಸ ಪೇಜ್ ಕ್ರಿಯೇಟ್ ಮಾಡಿತು. ಆರಂಭದಲ್ಲಿ ಕೆಲವು 'ಲೈಕ್‌' ಇತ್ತು. ಇದೀಗ ನಾಲ್ಕು ಲಕ್ಷಕ್ಕೂ ಅಧಿಕ 'ಲೈಕ್‌'ಗಳು ಬಂದಿವೆ. ಟ್ವಿಟರ್‌ನಲ್ಲಿ ಅಕೌಂಟ್ ಕ್ರಿಯೇಟ್ ಮಾಡಿದ ಬಳಿಕ 3,000ಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ. ಜತೆಗೆ ಗ್ರಾಹಕರ ಸಮಸ್ಯೆ, ಸಂಶಯ ನಿವಾರಣೆಗೂ ಜಾಲತಾಣದ ಮೂಲಕವೇ ಹೆಚ್ಚು ಆದ್ಯತೆ ಕೊಡುತ್ತಿರುವುದೂ ಈ ಬೆಳವಣಿಗೆಗೆ ಕಾರಣ.

ಉದ್ಯೋಗ ಸೃಷ್ಟಿ
ಹೆಚ್ಚುತ್ತಿರುವ ಜಾಹಿರಾತು ಸ್ಪರ್ಧೆಯಿಂದಾಗಿ ಕೆಲವು ಕಂಪನಿಗಳು ಇದಕ್ಕಾಗಿಯೇ ಹೊಸ ವಿಭಾಗಗಳನ್ನು ಸೃಷ್ಟಿಸಿವೆ. ಇದು ಕೂಡ ಒಂದು ಧನಾತ್ಮಕ ಅಂಶವೇ. ಇದರಿಂದಾಗಿ ಒಂದಷ್ಟು ಮಂದಿಗೆ ಕೆಲಸ ಕೂಡ ಸಿಗುವಂತಾಗುತ್ತದೆ. <

ಅನುಕೂಲಗಳೇನು?

ಅನನುಕೂಲಗಳೇನು?

Advertisement

Advertisement

ಪ್ರಮುಖ ತಾಣಗಳು
ಸದಾಶಿವ ಕೆ.
khandige29@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments