ತಂತ್ರಜ್ಞಾನ ಪ್ರದರ್ಶನ
ಕರ್ನಾಟಕ ಮುದ್ರಕರ ಸಂಘದವತಿಯಿಂದ ಅರಮನೆ ಮೈದಾನದಲ್ಲಿ ಇದೇ ತಿಂಗಳ (ಸೆಪ್ಟೆಂಬರ್) 27ರಿಂದ 30ರವರೆಗೆ 'ಪ್ರಿಂಟ್ ಮತ್ತು ಪ್ಯಾಕ್‌ಟೆಕ್ ವರ್ಲ್ಡ್ ಎಕ್ಸ್‌ಪೊ-2013' ಮೇಳವನ್ನು ಆಯೋಜಿಸಲಾಗಿದೆ. ಭಾರತವು ವಿಶ್ವ ಮಾರುಕಟ್ಟೆಯಲ್ಲಿ ನಾಲ್ಕನೇ ಅತಿ ದೊಡ್ಡ ಸ್ಥಾನವನ್ನು ದಾಖಲಿಸಲಿದೆ. ಉದ್ಯಮವು ಅತ್ಯಂತ ತ್ವರಿತವಾಗಿ ಅನಾವರಣಗೊಳ್ಳುತ್ತಿದ್ದು, ಅತ್ಯಾಧುನಿಕವಾಗಿ ಕಟ್ಟಕಡೆಯ ಗ್ರಾಹಕರ ಬೇಡಿಕೆಗೆ ತಕ್ಕಂತೆ ಸ್ಪಂದಿಸುತ್ತಿದೆ. ದೇಶಾದ್ಯಂತ ಸುಮಾರು 3 ಲಕ್ಷ ಸಣ್ಣ, ಮಧ್ಯಮ ಮತ್ತು ದೊಡ್ಡ ಪ್ರಮಾಣದ ಮುದ್ರಕರಿದ್ದಾರೆ.
ಭಾರತೀಯ ಪತ್ರಿಕೆಗಳ/ನಿಯತಕಾಲಿಕೆಗಳ ಮಾರುಕಟ್ಟೆ ಬೆಳೆಯುತ್ತಿದ್ದು ತಮ್ಮ ಪ್ರಾಬಲ್ಯವನ್ನು ಮರುಸ್ಥಾಪಿಸಬೇಕಾದರೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿರುವಂತೆ ಮುದ್ರಣ ಮತ್ತು ಪ್ಯಾಕೇಜಿಂಗ್‌ನ ಅಗ್ರ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕಿದೆ. ಈ ರೀತಿಯ ಪ್ರದರ್ಶನವು ಮೂರು ವರ್ಷಗಳ ನಂತರ ಬೆಂಗಳೂರಿನಲ್ಲಿ ಜರುಗುತ್ತಿದೆ. ಕರ್ನಾಟಕದಿಂದ ಮಾತ್ರವಲ್ಲದೆ ದೇಶಾದ್ಯಂತ ಇರುವ ತಂತ್ರಜ್ಞರು ತಮ್ಮ ಇತ್ತೀಚಿನ ತಂತ್ರಜ್ಞಾನವನ್ನು ಈ ಮೇಳದಲ್ಲಿ ಪ್ರದರ್ಶಿಸಲಿದ್ದಾರೆ. ಈ ಮೇಳದಿಂದ ಆರ್ಥಿಕ ವಲಯಕ್ಕೂ ಹೆಚ್ಚಿನ ಪ್ರಯೋಜನವಾಗಲಿದೆ.
ದಿನಾಂಕ: 27ರಿಂದ 30 ಸೆಪ್ಟೆಂಬರ್ 2013
ಸ್ಥಳ: ಅರಮನೆ ಮೈದಾನ, ಬೆಂಗಳೂರು