ಏನು ಮಾಡೋದು?
'ಸಕಲಗುಣಸಂಪನ್ನ ಏಕಗುಣಹೀನ' ಎಂಬ ಮಾತನ್ನು ನೀವು ಕೇಳಿರಬಹುದು. ಮದುವೆ ಗಂಡಾಗಿ ಕೂತಿದ್ದಾನೆ. ಆದರೆ ಇರಬೇಕಾದ್ದೇ ಇಲ್ಲ ಎಂದರೆ! ಶ್ರೀಮಂತ, ಆದರೆ ...
'ಸಕಲಗುಣಸಂಪನ್ನ ಏಕಗುಣಹೀನ' ಎಂಬ ಮಾತನ್ನು ನೀವು ಕೇಳಿರಬಹುದು. ಮದುವೆ ಗಂಡಾಗಿ ಕೂತಿದ್ದಾನೆ. ಆದರೆ ಇರಬೇಕಾದ್ದೇ ಇಲ್ಲ ಎಂದರೆ! ಶ್ರೀಮಂತ, ಆದರೆ ದಾನಗುಣವಿಲ್ಲ. ಸುಂದರಿ, ಆದರೆ ಚಾರಿತ್ರ್ಯವೇ ಇಲ್ಲ. ಅಂಥವರನ್ನು ಒಮ್ಮೆ ನೋಡಿದರೆ ಅಂತರಂಗ ಗೊತ್ತಾಗುವುದಿಲ್ಲ. ಒಮ್ಮೆ ಗೊತ್ತಾದರೆ ಮತ್ತೆ ಬಳಿ ಸುಳಿಯಬೇಕೆನಿಸುವುದಿಲ್ಲ.
ನಿತಂಬೋ ವಿಶಾಲಃ ಕಟಿರ್ಮಧ್ಯಶೂನ್ಯಾ
ಕುಚದ್ವಂದ್ವಮತ್ಯಂತಭವ್ಯಂ ಮುಖಂ ಚ
ವಚಶ್ಚೇನ್ನ ಕಿಂಚಿದ್ರಸಾಲಂ ರಮಣ್ಯಾಃ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಂ
ವರ ಮತ್ತು ವಧು, ವಧುಪರೀಕ್ಷೆ ಸಂದರ್ಭ ದೂರದಿಂದ ನೋಡಿದ್ದೆಷ್ಟೋ ಅಷ್ಟೇ. ವಧು ಚೆಲುವೆ. ಮಾತನಾಡಲು ಸಂಪ್ರದಾಯಜಡರಾದ ಮಾವನ ಮನೆಯವರು ಈತನಿಗೆ ಬಿಟ್ಟರೆ ತಾನೆ? ಅಂತೂ ಮದುವೆಯಾಯಿತು. ವಿವಾಹ ಮುಗಿಸಿ ಕೋಣೆ ಸೇರಿಕೊಂಡ ವರನಿಗೆ ಅವಳನ್ನು ರಸಿಕ ಮಾತುಗಳಿಂದ ವಶಪಡಿಸಿಕೊಳ್ಳುವ ಹುಕ್ಕಿ. ವಧು ಸುಮ್ಮನಿರಬೇಕೆ? 'ಇಂವ ಗಲೀಜು ಮಾತಾಡ್ತಾನೆ, ನನ್ನ ಮೈಕೈ ಎಲ್ಲ ಮುಟ್ತಾನೆ!' ಎಂದು ಕೋಣೆಯಾಚೆಗೆ ಕೇಳುವಂತೆ ಕೂಗು ಹಾಕುತ್ತಾಳೆ!
ಇದನ್ನು ನೋಡಿ ತಲೆ ತಲೆ ಚಚ್ಚಿಕೊಂಡ ವರ ಹೀಗೆ ಹೇಳಿಕೊಂಡ: ಈಕೆಗೆ ವಿಶಾಲ ನಿತಂಬಗಳಿವೆ. ಸೊಂಟ ಸಪೂರವಾಗಿ ಚೆಲುವಾಗಿದೆ. ಎದೆಯ ಸಂಪತ್ತಿನ ಬಗ್ಗೆ ಪ್ರಶ್ನೆ ಮಾಡುವಂತೆಯೇ ಇಲ್ಲ. ಮುಖವನ್ನು ಚಂದ್ರನಿಗೆ ಹೋಲಿಸಬಹುದು. ಆದರೇನು, ಕರ್ಮ! ಈಕೆಗೆ ರಸಿಕತನದ ಮಾತಾಡಲು, ರಸಿಕತೆಯಿಂದ ನಡೆದುಕೊಳ್ಳಲು ಗೊತ್ತೇ ಇಲ್ಲ. ಇವಳನ್ನು ಕಟ್ಟಿಕೊಂಡೇನು ಮಾಡಲಿ!?
- ಹರಿಹರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.