ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಕೊಬ್ಬಿನ ಕಿತಾಪತಿ

ನಿನ್ನೆ (ಸೆ.29) ವಿಶ್ವ ಹೃದಯ ದಿನ. ಕೊಬ್ಬೆನ್ನುವುದು ಹೃದಯಕ್ಕೆರಗುವ ಮೊದಲ ಆಘಾತ. ರಕ್ತನಾಳಗಳಲ್ಲಿ ಕೊಬ್ಬು ಶೇಖರಣೆಗೊಂಡರೆ 'ಪರಿಧಮನಿ ಕಾಯಿಲೆ'ಗೆ ನಾಂದಿ...

Rashmi Kasaragodu
Updated On : 30 Sept 2013, 12:12 pm

ನಿನ್ನೆ (ಸೆ.29) ವಿಶ್ವ ಹೃದಯ ದಿನ. ಕೊಬ್ಬೆನ್ನುವುದು ಹೃದಯಕ್ಕೆರಗುವ ಮೊದಲ ಆಘಾತ. ರಕ್ತನಾಳಗಳಲ್ಲಿ ಕೊಬ್ಬು ಶೇಖರಣೆಗೊಂಡರೆ 'ಪರಿಧಮನಿ ಕಾಯಿಲೆ'ಗೆ ನಾಂದಿ. ಅದಕ್ಕಿರುವ ಚಿಕಿತ್ಸಾ ವಿಧಾನಗಳು ಏನು?

ತಡೆ ಎನ್ನುವುದು ಎಲ್ಲೆಡೆ ಇದ್ದಿದ್ದೆ. ನಮ್ಮ ಹಾರ್ಟಿನಲ್ಲೂ! ಹೃದಯ ಸ್ನಾಯುಗಳಿಗೆ ರಕ್ತ ಸರಬರಾಜು ಮಾಡುವ ರಕ್ತನಾಳಗಳಲ್ಲಿ ಉಂಟಾಗುವ ತಡೆ ಸಾಮಾನ್ಯದ್ದೇನಲ್ಲ. ಇದನ್ನು 'ಪರಿಧಮನಿ ಕಾಯಿಲೆ' ಎನ್ನುವರು. ಇದರಿಂದ ಸಾವೂ ಬರಬಹುದು.
ಇದನ್ನು ಕೇಳಿ ನೀವೇನೂ ದಿಗಿಲಾಗುವ ಅಗತ್ಯವಿಲ್ಲ. ಏಕೆಂದರೆ, ಇದಕ್ಕೂ ವೈದ್ಯಕೀಯ ಪರಿಹಾರವಿದೆ. percutaneous coronary intervention (PCI) ಚಿಕಿತ್ಸೆಯು ರಕ್ತನಾಳಗಳಲ್ಲಿ ಕೊಬ್ಬು ಶೇಖರಣೆಗೊಂಡು ಅದು ಕಿರಿದಾಗುವುದನ್ನು ಅಥವಾ ಮುಚ್ಚಿಹೋಗುವುದನ್ನು ತೆರೆಯಲು ನೆರವಾಗುತ್ತದೆ. ಹೃದಯದ ಬೈಪಾಸ್ ಸರ್ಜರಿಗೆ ಪರ್ಯಾಯ ಚಿಕಿತ್ಸೆ ಇದು. ಶೇ.95 ವ್ಯಕ್ತಿಗಳನ್ನು ಈ ಚಿಕಿತ್ಸೆಯ ಮೂಲಕ ಪಾರುಮಾಡಬಹುದು. ಈ ಚಿಕಿತ್ಸೆಯ ಒಂದು ವಿಧಾನ ಬಲೂನ್ ಆಂಜಿಯೋಪ್ಲಾಸ್ಟಿ. ಕೊಬ್ಬಿನಂಶ ತುಂಬಿದ ರಕ್ತನಾಳಗಳ ಒಳಗೆ ಬಲೂನನ್ನು ತೂರಿಸಿ, ಕೊಬ್ಬನ್ನು ಕರಗಿಸಲಾಗುತ್ತದೆ. ಆದರೆ, ಈ ವಿಧಾನ ತಾತ್ಕಾಲಿಕ. ಇದಕ್ಕಿಂತ ಉತ್ತಮ ಹಾಗೂ ಶಾಶ್ವತ ಚಿಕಿತ್ಸೆಯೆಂದರೆ, ಪರಿಧಮನಿಯ ನಳಿಕೆ (coronary stenting). ಅಂದರೆ ರಕ್ತನಾಳ ತಡೆಯಾದ ಜಾಗದಲ್ಲಿ ಲೋಹದ ಪೈಪನ್ನು ಅಳವಡಿಸುವುದು.  2002ರಲ್ಲಿ ಪಿಸಿಐ ಚಿಕಿತ್ಸೆಯಲ್ಲಿ ಕ್ರಾಂತಿಕಾರಿ ಬೆಳವಣಿಗೆಯಾಯಿತು. ರಕ್ತನಾಳಗಳ ತಡೆ ಪುನರಾವರ್ತನೆಯಾಗುವ ಸಂಭವನೀಯತೆ ಕಡಿಮೆಮಾಡಲು ಮಾರ್ಗ ಕಂಡುಕೊಳ್ಳಲಾಯಿತು. ಲೋಹದ ನಳಿಕೆ, ಪಾಲಿಮರ್ ಕವಚ, ಹಾಗೂ ಅಂಗವಿಭಜನೆ ವಿರೋಧಿ ರಾಸಾಯನಿಕ ವಿಧಾನಗಳು ಈ ನಿಟ್ಟಿನಲ್ಲಿ ಹೆಚ್ಚು ಕೆಲಸಮಾಡಿದವು.
ಸಮಕಾಲೀನ ವೈದ್ಯಕೀಯ ಚಿಕಿತ್ಸೆಯಲ್ಲಿ ಬಳಸಲಾಗುತ್ತಿರುವ ನಳಿಕೆಗಳ ಅಭಿವೃದ್ಧಿಯಲ್ಲಿ everolimus-eluting stent, zotarolimus-eluting stent ಮತ್ತು Sirolimus Elluting Stentಸೇರಿವೆ. ಈ ಎಲ್ಲಾ ಚಿಕಿತ್ಸೆಗಳಲ್ಲಿ ಜೈವಿಕ ಹೊಂದಾಣಿಕೆಯಾಗುವ ಪಾಲಿಮರ್ ಹಾಗೂ ತೆಳ್ಳಗಿನ ಕೊಬಾಲ್ಟ್ ಕ್ರೋಮಿಯಂ ಅಳವಡಿಸಲಾಗಿದೆ. ಔಷಧೀಯ ನಳಿಕೆಗಳಲ್ಲಿ ಜೈವಿಕ ಪಾಲಿಮರ್‌ಗಳನ್ನು ಬಳಸಲಾಗಿದ್ದು, ಇವುಗಳು ದೇಹದಲ್ಲಿ ಬಳಸಿಕೊಂಡ 6ರಿಂದ 9 ತಿಂಗಳುಗಳಲ್ಲಿ ಕರಗಿಹೋಗುತ್ತವೆ.
ಹಲವು ನಳಿಕೆಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, Bioabsorbable Vascular Scaffold ಅತಿ ಪರಿಣಾಮಕಾರಿ. ಇದು ಪ್ರಪ್ರಥಮ ಜೈವಿಕ ನಳಿಕೆ. ಇಂದು ಬೇಡಿಕೆಯಲ್ಲಿರುವ ನಳಿಕೆಯೂ ಹೌದು. ಭರವಸೆ ಮೂಡುವ ರೀತಿಯಲ್ಲಿ ಹೊಸ ಹೊಸ ಸಂಶೋಧನೆಗಳು ಹೃದಯ ನಳಿಕೆ ಅಭಿವೃದ್ಧಿಯಲ್ಲಿ ನಡೆಯುತ್ತಿದ್ದು, ರೋಗಪೀಡಿತರಲ್ಲಿ ಆಶಾಕಿರಣ ಮೂಡಿಸುವಲ್ಲಿ ಯಶಸ್ವಿಯಾಗುತ್ತಿವೆ. ಹೀಗಾಗಿ, ಹೃದಯಲ್ಲಾಗುವ ಎಂಥ ಟ್ರಾಫಿಕ್ ಜಾಮಿಗೂ ನೀವು ಕಂಪಿಸುವುದು ಬೇಡ.

- ಡಾ. ಕಿಶೋರ್, ಹೃದ್ರೋಗ ತಜ್ಞರು
-ಕನ್ನಡಕ್ಕೆ: ಸುಮನಾ ಉಪಾಧ್ಯಾಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement