ಚಿತ್ರಕಲಾ ಸ್ಪರ್ಧೆ
ಆರ್ಟ್‌ವಿಲ್ಲಾವು ಮಹಾತ್ಮ ಗಾಂಧೀಜಿಯ 144ನೇ ಹುಟ್ಟುಹಬ್ಬದ ಪ್ರಯುಕ್ತ ಬೆಂಗಳೂರಿನ 144 ಚಿತ್ರಕಲಾವಿದರಿಂದ ಸ್ಥಳದಲ್ಲೇ ಚಿತ್ರಬಿಡಿಸುವ ಸ್ಪರ್ಧೆಯನ್ನು ಆಯೋಜಿಸಿದೆ...
ಆರ್ಟ್‌ವಿಲ್ಲಾವು ಮಹಾತ್ಮ ಗಾಂಧೀಜಿಯ 144ನೇ ಹುಟ್ಟುಹಬ್ಬದ ಪ್ರಯುಕ್ತ ಬೆಂಗಳೂರಿನ 144 ಚಿತ್ರಕಲಾವಿದರಿಂದ ಸ್ಥಳದಲ್ಲೇ ಚಿತ್ರಬಿಡಿಸುವ ಸ್ಪರ್ಧೆಯನ್ನು ಆಯೋಜಿಸಿದೆ. ಪ್ರತಿ ವರ್ಷ ನಡೆಸಲಾಗುವ ಈ ಕಾರ್ಯಕ್ರಮ ಈ ವರ್ಷ ಬೆಂಗಳೂರಿನ ಒರಾಯನ್ ಮಾಲ್‌ನಲ್ಲಿ ಆಯೋಜನೆಗೊಂಡಿದೆ. ಸ್ಪರ್ಧೆಯ ಫಲಿತಾಂಶವನ್ನು ಅಕ್ಟೋಬರ್ 2, ಗಾಂಧಿ ಜಯಂತಿಯಂದು ಅನಾವರಣಗೊಳಿಸಲಾಗುವುದು. ಅಂದು ಪೇಂಟಿಂಗ್ ಪ್ರದರ್ಶನವನ್ನು ಸಾರ್ವಜನಿಕರು ವೀಕ್ಷಿಸಬಹುದು ಹಾಗೂ ಖರೀದಿಸಲೂ ಅವಕಾಶ ಮಾಡಿಕೊಡಲಾಗುವುದು. ಸ್ಪರ್ಧಿಸಲಿಚ್ಛಿಸುವ ಕಲಾವಿದರು ಮಾಹಿತಿಗಾಗಿ 9742020666 ಸಂಪರ್ಕಿಸಬಹುದು ಅಥವಾ ಆನ್‌ಲೈನ್ ಮೂಲಕ www.artville.in ನಲ್ಲಿ ಅರ್ಜಿ ಸಲ್ಲಿಸಬಹುದು.
12 ವರ್ಷ ಮೇಲ್ಪಟ್ಟ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಅನೇಕ ಹಿರಿಯ ಕಲಾವಿದರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.