ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಹಿಂದೂ ರಾಷ್ಟ್ರದ ಮೂಲೋದ್ಧಾರಕ

Rashmi Kasaragodu
Updated On : 30 Sept 2013, 12:14 pm

ಹಿಂದೂರಾಷ್ಟ್ರದ ಜ್ವಲಂತ ಸಮಸ್ಯೆಗಳಿಗೆ ಮೂಲದಲ್ಲಿಯೇ ಪರಿಹಾರಗಳನ್ನು ಹುಡುಕಿ ರಾಷ್ಟ್ರೀಯ ಶ್ರೇಯೋಭಿವೃದ್ಧಿಗೆ ನಾಂದಿ ಹಾಡಿದ ಮೂಲಪುರುಷರಲ್ಲಿ ಸ್ವಾಮಿ ವಿವೇಕಾನಂದರೇ ಮೊದಲಿಗರು. ಪರಿವ್ರಾಜಕರಾಗಿ ದೇಶಾದ್ಯಂತ ಸಂಚರಿಸುವ ಕಾಲದಲ್ಲಿ ರಾಷ್ಟ್ರಕ್ಕಂಟಿರುವ ಸಮಸ್ಯೆಗಳನ್ನು ಕಂಡುಂಡ ಅವರು ಭಾರತೀಯರನ್ನು ಸಮಸ್ಯೆಗಳ ವಜ್ರಶೃಂಖಲೆಯಿಂದ ಬಿಡುಗಡೆಗೊಳಿಸಲು ಇಡೀ ಜೀವನವನ್ನೇ ಸವೆಸಿದ ರಾಷ್ಟ್ರಪ್ರೇಮಿಗಳಲ್ಲಿ ಮೊದಲಿಗರು.
ಕೇರಳದಲ್ಲಿ ಪ್ರಚಲಿತವಿದ್ದ ಜಾತಿಪದ್ಧತಿಯಿಂದ ಕ್ರೈಸ್ತ ಮತ ಪ್ರಚಾರಕರು ಕೆಳಜಾತಿಯ ಜನರನ್ನು ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಮತಾಂತರಿಸಿದರು. ಒಬ್ಬ ಶೂದ್ರನು ಹತ್ತಿರ ಬಂದರೆ ಅವನನ್ನು ದೂರವಿಡುತ್ತಿದ್ದವರು ಕ್ರೈಸ್ತನೊಬ್ಬ ಬಂದರೆ ಕೈಕುಲುಕುತ್ತಿದ್ದರು. ಇಂತಹ ಹಾಸ್ಯಾಸ್ಪದವೂ, ಹೀನವೂ ಆದ ಸ್ಥಿತಿಯನ್ನು ಕುರಿತು ಸ್ವಾಮೀಜಿಯನ್ನು ಕೇಳಿದಾಗ, 'ನೀವೆಲ್ಲಾ ಮೇಲ್ಜಾತಿಯವರ ಹಿಂದೆ ಅಂಗಲಾಚಿಕೊಂಡು ಹೋಗುವುದೇಕೆ? ನಿಮ್ಮಲ್ಲೇ ಉನ್ನತ ಮಟ್ಟದ ಯೋಗ್ಯ ವ್ಯಕ್ತಿಯೊಬ್ಬನನ್ನು ನಾಯಕನನ್ನಾಗಿ ಮಾಡಿಕೊಂಡು ಎಲ್ಲರೂ ಅವನನ್ನು ಅನುಸರಿಸಿ. ಆಗ ನಿಮ್ಮ ಎಷ್ಟೋ ಸಮಸ್ಯೆಗಳು ಪರಿಹಾರವಾಗುತ್ತವೆ' ಎಂದರು.
ಈ ಸಲಹೆಯನ್ನು ತುಂಬ ಗಂಭೀರವಾಗಿ ಸ್ವೀಕರಿಸಿದ ಜನರು ಅಂತಹ ವ್ಯಕ್ತಿಗಾಗಿ ಹುಡುಕಾಟ ನಡೆಸಿ ಶ್ರೀ ನಾರಾಯಣ ಗುರುವನ್ನು ತಮ್ಮ ಮಾರ್ಗದರ್ಶಕರಾಗಿ ಸ್ವೀಕರಿಸಿದರು. ವಿಶೇಷವೆಂದರೆ ಸ್ವಾಮಿ ವಿವೇಕಾನಂದರ ಶಿಷ್ಯರಲ್ಲಿ ಶ್ರೀ ನಾರಾಯಣ ಗುರುಗಳೂ ಒಬ್ಬರು.

- ಆನಂದ ಎಸ್.ಎನ್.
anandsn193@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement