ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಗಸ್ತು ತಿರುಗಲು ವಾಹನ

Mainashree
Updated On : 30 Sept 2013, 5:59 am

ಪ್ರತಿ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ತಮ್ಮ ವ್ಯಾಪ್ತಿಯಲ್ಲಿನ ಆಗುಹೋಗುಗಳ ಬಗ್ಗೆ ಗಮನಿಸಲು/ತಿಳಿಯಲು ಗಸ್ತು ತಿರುಗಬೇಕಾಗುತ್ತದೆ. ಹಾಗಾಗಿ ತಮಗೆ ನಿಗದಿಪಡಿಸಿದ ಸ್ಥಳಗಳಲ್ಲಿ ರಾತ್ರಿ-ಹಗಲು ಗಸ್ತಿನಲ್ಲಿರುತ್ತಾರೆ. ಅದೇ ರೀತಿ ಪೊಲೀಸ್ ಸಿಬ್ಬಂದಿ ಗಸ್ತು ತಿರುಗಲು ಪ್ರತ್ಯೇಕ ವಾಹನಗಳಿರುತ್ತವೆ. ಸಂಚಾರ ಪೊಲೀಸ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸರಿಗೆ ಪ್ರತ್ಯೇಕ ವಾಹನಗಳಿರುತ್ತವೆ. ಅವುಗಳೆಂದರೆ ಹೊಯ್ಸಳ, ಚೀತಾ ಹಾಗೂ ಕೋಬ್ರಾ. ಸಿಲಿಕಾನ್ ಸಿಟಿಯಲ್ಲಿ ಜೀಪಿಗೆ ಹೊಯ್ಸಳ ಎಂದು ಹಾಗೂ ದ್ವಿಚಕ್ರ ವಾಹನಗಳಿಗೆ ಚೀತಾ ಹಾಗೂ ಕೋಬ್ರಾ ಎಂದು ಹೆಸರಿಡಲಾಗಿದೆ.
ಹಲವು ವರ್ಷಗಳಿಂದ ಈ ವಾಹನಗಳು ರಾಜ್ಯಾದ್ಯಂತ ಕೆಲಸ ನಿರ್ವಹಿಸುತ್ತಿವೆ. ಕೆಲವು ಜಿಲ್ಲೆಗಳಲ್ಲಿ ಅಲ್ಲಿಗನುಗುಣವಾಗಿ ಆ ವಾಹನಗಳಿಗೆ ಬೇರೆ ಹೆಸರು ಇಡಲು ಅವಕಾಶವಿದ್ದು, ಕೆಲವು ಜಿಲ್ಲೆಗಳಲ್ಲಿ ಗಸ್ತು ವಾಹನಗಳಿಗೆ ಬೇರೆ ಹೆಸರು ಇಟ್ಟಿರುವ ಉದಾಹರಣೆಗಳಿವೆ. ಪ್ರತಿಯೊಂದು ಠಾಣೆಯಲ್ಲಿ ಕನಿಷ್ಠ 2 ಹೊಯ್ಸಳ ವಾಹನ, ಹಳ್ಳಿಗಾಡಿನಲ್ಲಿ ಠಾಣೆಗೆ ಒಂದು ಇರುತ್ತದೆ. ಪೊಲೀಸ್ ಇನ್ಸ್‌ಪೆಕ್ಟರ್(ಠಾಣಾಧಿಕಾರಿ), ಎಸಿಪಿ, ಡಿಸಿಪಿ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಪ್ರತ್ಯೇಕ ವಾಹನಗಳಿರುತ್ತವೆ. ಇನ್ನೂ ಚೀತಾ ಹಾಗೂ ಕೋಬ್ರಾ ವಾಹನಗಳು ಒಂದು ಠಾಣೆಗೆ ಆರು ಅಥವಾ ಏಳು ಇರುತ್ತವೆ. ಹಳ್ಳಿಗಳ ಠಾಣೆಗಳಲ್ಲಿ ಈ ವಾಹನಗಳ ಸಂಖ್ಯೆ ಕಡಿಮೆ ಇರುತ್ತರೆ.
ಅಲ್ಲಿ ಕಡಿಮೆ ಸಿಬ್ಬಂದಿ, ಅಪರಾಧ ಸಂಖ್ಯೆ ಕಡಿಮೆ ಇರುವ ಹಿನ್ನೆಲೆಯಲ್ಲಿ ಗಸ್ತು ವಾಹನಗಳನ್ನೂ ಕಡಿಮೆ ನಿಯೋಜಿಸಲಾಗಿರುತ್ತದೆ. ಚೀತಾ ವಾಹನಗಳು ಚಿರತೆ ಚರ್ಮದ ಬಣ್ಣ ಹೊಂದಿದ್ದು, ಕೋಬ್ರಾ ಬಿಳಿ ಬಣ್ಣದಿಂದ ಕೂಡಿರುತ್ತದೆ. ಈ ವಾಹನಗಳಿಗೆ ಪೆಟ್ರೋಲ್ ಹಾಗೂ ಡೀಸೆಲ್ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ.

-  ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement