ಜನರಲ್ ಸ್ಟೋರ್
ಹೆಚ್ಚು ಕಡಿಮೆ ಎಲ್ಲಾ ಹಕ್ಕಿಗಳೂ ತಮ್ಮ ಕೊಕ್ಕಿನಿಂದ ಗರಿಗಳನ್ನು ಸವರಿಕೊಳ್ಳುತ್ತವೆ. ಹೀಗೆ ಕುಕ್ಕಿಕೊಳ್ಳುವು ದರಿಂದ ಅವುಗಳ ದೈಹಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪುಕ್ಕಗಳನ್ನು ಸಹ ಸ್ವಚ್ಛವಾಗಿಡುತ್ತದೆ. ಕೊಕ್ಕಿನಿಂದ ಪುಕ್ಕಗಳನ್ನು ಕುಟುಕಿಕೊಳ್ಳುವುದರಿಂದ ಪುಕ್ಕಗಳು ಸದಾ ಕೋಮಲವಾಗಿರುತ್ತವೆ. ತೋಕೆಯ ಮೇಲ್ಭಾಗದಲ್ಲಿರುವ ಈ ಗ್ರಂಥಿಗಳನ್ನು ಕೊಕ್ಕಿನಿಂದ ಕುಕ್ಕಿದಾಗ ಅವುಗಳಿಂದ ಎಣ್ಣೆ ಹೊರಬರುತ್ತದೆ ಮತ್ತು ಅದು ರೆಕ್ಕೆಗಳಿಗೆ ಹರಡಿಕೊಳ್ಳುತ್ತದೆ. ಈ ಎಣ್ಣೆಯು ರೆಕ್ಕೆಗಳನ್ನು ಶುಭ್ರವಾಗಿ ಮತ್ತು ಹೊಳಪಾಗಿ ಇಡುತ್ತದೆ. ಎಣ್ಣೆ ಇರುವುದರಿಂದಲೇ ಅವುಗಳ ಪುಕ್ಕಗಳು ನೀರಿನಲ್ಲಿ ತೋಯುವುದಿಲ್ಲ. ಪಕ್ಷಿಯ ದೇಹಕ್ಕೆ ವಿಟಮಿನ 'ಡಿ' ರೂಪದಲ್ಲಿ ಹೆಚ್ಚಿನ ಶಕ್ತಿ ಆ ಎಣ್ಣೆಯಿಂದ ಸಿಗುತ್ತದೆ ಹೀಗಾಗಿ ಅವು ಆಗಾಗ ಕುಕ್ಕಿಕೊಂಡು ರೆಕ್ಕೆಗಳನ್ನು ಶುಭ್ರವಾಗಿಯೂ,ಹೊಳ ಪಾಗಿಯೂ ಇಟ್ಟುಕೊಳ್ಳುತ್ತವೆ.
- ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.