ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ದರಿದ್ರ ದೇವೋಭವ!

Mainashree
Updated On : 30 Sept 2013, 5:58 am

ಸ್ವಾಮಿ ವಿವೇಕಾನಂದರು ತಿರುವನಂತಪುರಂನಲ್ಲಿ ಪ್ರೊ. ಕೆ. ಸುಂದರರಾಮ ಅಯ್ಯರ್ ಅವರ ಅತಿಥಿಯಾಗಿದ್ದಾಗ ಸ್ವಾಮೀಜಿ ಪ್ರಭಾವಕ್ಕೊಳಗಾಗಿ ಅವರನ್ನು ಇತರರಿಗೂ ಪರಿಚಯಿಸಲು ಕ್ಲಬ್‌ಗೆ ಕರೆದೊಯ್ದರು. ಅಲ್ಲಿ ಸುಪ್ರಸಿದ್ಧ ಪ್ರಾಚಾರ್ಯರು, ಗಣ್ಯರು, ದಿವಾನರು ಸೇರಿದ್ದರು. ಇವರೆಲ್ಲ ಸ್ವಾಮೀಜಿಯೊಡನೆ ಮಾತನಾಡುತ್ತಿರುವಾಗ ಅಲ್ಲೊಂದು ಕೂತೂಹಲಕರ ಘಟನೆ ನಡೆಯಿತು.
ಗಣ್ಯರೊಬ್ಬರು ಮನೆಗೆ ಹೊರಟರು. ಹೊರಡುವ ಮುನ್ನ ದಿವಾನರಿಗೆ ಕೈಮುಗಿದು ನಮಸ್ಕರಿಸಿದರು. ದಿವಾನರು ತಮ್ಮ ಎಡಗೈಯನ್ನು ಸ್ವಲ್ಪಮಾತ್ರ ಮೇಲೆತ್ತಿ ಪ್ರತಿನಮಸ್ಕರಿಸಿದರು. ಸ್ವಾಮೀಜಿ ಇದನ್ನು ಸೂಕ್ಷ್ಮವಾಗಿ ಗಮನಿಸಿದರು. ವಿಷಯವೇನೆಂದು ಅವರಿಗೆ ಕ್ಷಣಮಾತ್ರದಲ್ಲಿ ಅರಿವಾಯಿತು.
ಸ್ವಲ್ಪ ಸಮಯದ ಬಳಿಕ ಅಲ್ಲಿಂದ ಹೊರಟ ದಿವಾನರು ಸ್ವಾಮೀಜಿಗೆ ಕೈಮುಗಿದರು. ಆಗ ಸ್ವಾಮೀಜಿ 'ನಾರಾಯಣ!' ಎಂದಷ್ಟೇ ಹೇಳಿ ಸುಮ್ಮನಾದರು. ದಿವಾನರಿಗೆ ಅಸಮಾಧಾನವಾಯಿತು. ಸ್ವಾಮೀಜಿ ಪ್ರತಿನಮಸ್ಕರಿಸುತ್ತಾರೆಂದು ಅವರು ನಿರೀಕ್ಷಿಸಿದ್ದರು. ಅದೂ ತಮ್ಮಂತಹ ಹಿರಿಯ, ಗೌರವಾನ್ವಿತ ವ್ಯಕ್ತಿಗೆ ಈ ಅಪರಿಚಿತ ಯುವಸನ್ಯಾಸಿ ಹೀಗೆ ಪ್ರತಿವಂದಿಸಿದ್ದು ಅವಮಾನಕರ ಎಂದು ಭಾವಿಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಆಗ ಸ್ವಾಮೀಜಿ 'ಅಲ್ಲ, ನೀವು ಮಾತ್ರ ಆ ಗಣ್ಯರಿಗೆ ನಿಮ್ಮ ಸಂಪ್ರದಾಯದಂತೆ ಪ್ರತಿವಂದಿಸಬಹುದು! ನಾನು ಹಿಂದೂ ಸನ್ಯಾಸಿಗಳ ಸಂಪ್ರದಾಯದಂತೆ 'ನಾರಾಯಣ' ಎಂದರೆ ಅದಕ್ಕೇಕೆ ಮುನಿಸಿಕೊಳ್ಳುತ್ತೀರಿ' ಎಂದರು. ಇದು ಅವರನ್ನು ಮುಟ್ಟಿತು.ದಿವಾನರು ಮರುದಿನ ತಮ್ಮ ವರ್ತನೆಗಾಗಿ ಕ್ಷಮೆ ಯಾಚಿಸಿದರು.

- ಆನಂದ ಎಸ್.ಎನ್.
anandsn193@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement