ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಹೊಸ ತಪ್ಪು ಮಾಡಿ

Mainashree
Updated On : 30 Sept 2013, 5:59 am

ಹಾಗೆಯೇ ಇದ್ದು ಬಿಡಿ. ಖಂಡಿತಾ ಮನಸ್ಸು ಮಾಡಿದರೆ ಅದು ಸಾಧ್ಯ. ಒಂದಷ್ಟು ಕಷ್ಟವಾಗಬಹುದು. ಆದರೆ ಅಸಾಧ್ಯವೇನಲ್ಲ. ಮನಸ್ಸನ್ನು ಹೇಳಿದಂತೆ ಕೇಳುತ್ತ ಹೋದರೆ ಅದು ನಿಮಗೆ ಯಾವುದನ್ನೂ ಆಗಗೊಡದು. ನಾವು ಹೇಳಿದಂತೆ ಮನಸ್ಸನ್ನು ಕೇಳಿಸಬೇಕು. ಅದರ ಮೇಲೊಂದು ಬಿಗಿ ಹಿಡಿತ ಸಾಧಿಸಲಾಗದಿದ್ದರೆ ಅದು ಕೋತಿಯಂತಾಡುತ್ತದೆ. ಅದು ಯಾವುದೇ ವಿಚಾರವಿರಬಹುದು, ಆ ಕ್ಷಣದಲ್ಲಿ ಒಂದು ತೀರ್ಮಾನಿಸಿ ನಾನು ಹೀಗೆ ಮಾಡುವುದೇ ಸರಿಯೆಂದು ಹೊರಟಿರೆಂದುಕೊಳ್ಳಿ. ಮರುಕ್ಷಣದಲ್ಲೇ ಮನಸು ಹಿಂದಕ್ಕೆ ಮರಳುತ್ತದೆ. ಹಾಗೆ ಬೇಡ, ಹೀಗೆ ಮಾಡೆಂದು ಉಪದೇಶಿಸುತ್ತದೆ. ಸರಿ ಎಂದುಕೊಂಡು ಹೊರಟರೆ ಮತ್ತೇನೋ ಸಲಹೆ ಮುಂದಿಡುತ್ತದೆ. ಒಟ್ಟಾರೆ ಗೊಂದಲಕ್ಕೆ ನಿಮ್ಮನ್ನು ತಳ್ಳುವುದೇ ಮನಸ್ಸಿನ ಕೆಲಸ. ಹೀಗೆ ಹೊರಟರೆ ಕೊನೆಯವರೆಗೂ ಯಾವೊಂದೂ ತೀರ್ಮಾನಕ್ಕೆ ಬರಲಾಗದೇ ಹೊಯ್ದಾಟ ಹೆಚ್ಚುತ್ತಲೇ ಸಾಗುತ್ತದೆ.
ಇದಕ್ಕಿರುವ ಒಂದೇ ಪರಿಹಾರವೆಂದರೆ, ಏನಾದರಾಗಲಿ ನಾನು ಹೀಗೆಯೇ ಮಾಡುವುದು ಎಂಬ ನಿರ್ಧಾರಕ್ಕೆ ಬಂದು ಬಿಡಬೇಕು. ಎಷ್ಟೋ ಸಂದರ್ಭದಲ್ಲಿ ನಮ್ಮ ನಿರ್ಧಾರ ತಪ್ಪೇ ಆಗಿರುತ್ತದೆ. ಹಾಗೆಂದು ನಿರ್ಧಾರ ಕೈಗೊಳ್ಳಲು ಹಿಂಜರಿಕೆ ಮಾಡುತ್ತ ಕುಳಿತರೆ ಕೊನೆಯವರೆಗೂ ನಿಮ್ಮದು ಗೊಂದಲದ ವ್ಯಕ್ತಿತ್ವ ಆಗಿಯೇ ಉಳಿದು ಬಿಡುತ್ತದೆ. ವಿಶೇಷವೆಂದರೆ ಹಾಗೆ ಕೈಗೊಂಡ ತಪ್ಪು ನಿರ್ಧಾರಗಳ ಅನುಭವದ ಆಧಾರದ ಮೇಲೆಯೇ ಪಾಠ ಕಲಿಯುತ್ತ ಹೋಗಿ ಕೊನೆಗೊಮ್ಮೆ ಯಾವುದೇ ನಿರ್ಧಾರ ಕೈಗೊಂಡರೂ ಅದು ಸರಿಯಾಗಿಯೇ ಇರುತ್ತದೆ ಎಂಬ ವಿಶ್ವಾಸದ ಹಂತಕ್ಕೆ ತಲುಪುತ್ತೀರಿ. ಇಷ್ಟು ತಿಳಿದುಕೊಳ್ಳಿ, ಜೀವನದಲ್ಲಿ ತಪ್ಪು ನಿರ್ಧಾರ ಎನ್ನುವುದು ಇರುವುದೇ ಇಲ್ಲ. ಅಂಥ ನಿರ್ಧಾರದಿಂದ ನಮಗೆ ನಷ್ಟವಾದಾಗ ಅದನ್ನು ನಾವು ತಪ್ಪು ಎಂದುಕೊಳ್ಳುತ್ತೇವಷ್ಟೇ. ಆದರೆ, ಅಂಥ ತಪ್ಪೇ ನಮ್ಮನ್ನು ಮುಂದೆ ಸರಿದಾರಿಗೆ ಕೊಂಡೊಯ್ಯುತ್ತದೆ. ತಪ್ಪು ಮಾಡಲು ಹಿಂಜರಿಕೆ ಏಕೆ? ಆದರೆ, ನೆನಪಿಡಿ... ಪ್ರತಿ ಬಾರಿ ಹೊಸ ತಪ್ಪು ಮಾಡಿ. ಹಿಂದೆ ಮಾಡಿದ ತಪ್ಪಿನ ಪುನರಾವರ್ತನೆ ಬೇಡ.

-  ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement