ಲೇಡಿಸ್ಗೆ ನಾವಷ್ಟು ಚಾನ್ಸ್ ಕೊಟ್ಟಿಲ್ಲ!
ಇಂದಿರಾಗಾಂಧಿ ಪ್ರಧಾನಿ ಆದಳು ಅಂತೀವಿ, ಮಾಯಾವತಿ- ಜಯಲಲಿತಾ- ಮಮತಾ ಬ್ಯಾನರ್ಜಿ- ಶೀಲಾದೀಕ್ಷಿತ್- ಸುಷ್ಮಾ ಸ್ವರಾಜ್ ಸಿಎಂ ಆಗಿದ್ದರು ಅಂತಲೂ ಹೇಳಿಕೊಳ್ತೀವಿ. ಭಾರತದಲ್ಲಿ ಇಷ್ಟೆಲ್ಲ ಸ್ತ್ರೀ ಪವರ್ ಪರಂಪರೆ ಇದ್ದರೂ ಜಗತ್ತಿನ ದೃಷ್ಟಿಯಲ್ಲಿ ಇದು ಲೆಕ್ಕಕ್ಕೇ ಇಲ್ಲ. ರಾಷ್ಟ್ರ ರಾಜಕಾರಣದಲ್ಲಿ ಹೆಚ್ಚು ಅಧಿಕಾರ ಹಿಡಿದಿರುವ ಜಗತ್ತಿನ ಟಾಪ್ 10 ದೇಶಗಳಲ್ಲಿ ಭಾರತವೇ ಇಲ್ಲ!
ಇಲ್ಲಿ ಭಾರತದ ಸ್ಥಾನ 46ನೆಯದ್ದು. ಹಾಗಾದರೆ, ಮಹಿಳೆಯನ್ನು ಅಟ್ಟಕ್ಕೆ ಏರಿಸಿರುವ ದೇಶ ಯಾವುದು? 'ಕತ್ತಲ ಖಂಡ'ದ ರವಾಂಡ. ಅದು ಮಹಿಳೆಯರಿಗೆ ಅತಿ ಹೆಚ್ಚು ಪ್ರಾತಿನಿಧ್ಯ ನೀಡಿದೆ. ಆ ದೇಶದ ಪಾರ್ಲಿಮೆಂಟ್ನ ಒಟ್ಟು 80 ಸ್ಥಾನಗಳಲ್ಲಿ 51 ಸ್ಥಾನಗಳನ್ನು ಮಹಿಳೆಯರೇ ಅಲಂಕರಿಸಿದ್ದಾರೆ. ಮಿಕ್ಕಂತೆ ಕೆಲವೊಂದು ದೇಶಗಳಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯವೇ ಇಲ್ಲ.
ಬೇರೆ ಬೇರೆ ದೇಶಗಳ ಪ್ರಾತಿನಿಧ್ಯ ಪಟ್ಟಿ ಇಲ್ಲಿದೆ...
ರವಾಂಡ 63.8
ಅಡೋರಾ 50
ಕ್ಯೂಬಾ 48.9
ಸ್ವೀಡನ್ 45
ಸೆಷಿಲ್ಸ್ 43.8
ಫಿನ್ಲೆಂಡ್ 42.5
ಸೆನೆಗಲ್ 42.7
ದಕ್ಷಿಣ ಆಫ್ರಿಕ 42.3
ನಿಕರಾಗ್ವ 40.2
ಐಸ್ಲೆಂಡ್ 39.7
ಅಮೆರಿಕ 17.8
ಮಹಿಳಾ ಪ್ರಾತಿನಿಧ್ಯ
ದೇಶ : ಭಾರತ
ಸ್ಧಾನ : 108
ಪ್ರಾತಿನಿಧ್ಯ : 11
ದೇಶ : ಚೀನಾ
ಸ್ಥಾನ : 56
ಪ್ರಾತಿನಿಧ್ಯ : 23.4
ದೇಶ : ಆಫ್ಘಾನಿಸ್ತಾನ
ಸ್ಥಾನ : 37
ಪ್ರಾತಿನಿಧ್ಯ : 27.7
ದೇಶ : ಪಾಕಿಸ್ತಾನ
ಸ್ಥಾನ : 66
ಪ್ರಾತಿನಿಧ್ಯ: 20.7
ದೇಶ : ಬಾಂಗ್ಲಾದೇಶ
ಸ್ಥಾನ : 71
ಪ್ರಾತಿನಿಧ್ಯ : 19.7
-ಕೇಶು