ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಕಲಹದ ಈ ಪರಿ

Mainashree
Updated On : 4 Apr 2014, 12:59 pm

ಯುದ್ಧಕಾಲ. ಎದುರಿಗೆ ರಣರಂಗ. ಕಲಹದಿಂದ ಉನ್ಮತ್ತವಾಗಿರುವ ಪಕ್ಷಗಳು. ಇತ್ತ ಬಿಡಾರದಲ್ಲಿ ಯುವಸೈನಿಕನೊಬ್ಬ ವಿರಹತಪ್ತನಾಗಿದ್ದಾನೆ. ಮನೆಯಲ್ಲಿ ಬಿಟ್ಟುಬಂದ ಚೆಲುವೆ ಹೆಂಡತಿ. ಅವಳ ಜತೆ ಕಳೆದ ರತಿಕ್ಷಣಗಳು ಬೇಡಬೇಡವೆಂದರೂ ನೆನಪಾಗುತ್ತಿವೆ. ಕಣ್ಣಿಗೆ ಕಾಣುವ ಯುದ್ಧರಂಗವೂ ಅಂತರಂಗದ ಮಧುಕಲಹವೂ ಕಲಸುಮೇಲೋಗರವಾಗಿ ಅವನಿಗೆ ಕಾಣಿಸುವುದು ಹೀಗೆ.

ಅದ್ಯಾಪಿ ತತ್ಸುರತಕೇಲಿನಿರಸ್ತ್ರಯುದ್ಧಂ
ಬಂಧೋಪಬಂಧಪತನೋತ್ಥಿತ ಶೂನ್ಯಹಸ್ತಂ
ದಂತೋಷ್ಠಪೀಡನನಖಕ್ಷತರಕ್ತಸಿಕ್ತಂ
ತಸ್ಯಾಃ ಸ್ಮರಾಮಿ ರತಿಬಂಧುರನಿಷ್ಠುರತ್ವಂ

ಶಸ್ತ್ರಗಳಿಲ್ಲದೆ ನಾವು ಯುದ್ಧದಲ್ಲಿ ತೊಡಗಿದ್ದೆವು. ಕೈಕಾಲುಗಳಿಂದ ಬಿಗಿಯಾಗಿ ಬಂಧಿಸಿಕೊಂಡಿದ್ದೆವು. ರತಿಕೇಳಿಯ ಉನ್ಮತ್ತತೆಯಲ್ಲಿ ಪರಸ್ಪರ ಹೊಡೆದುಕೊಳ್ಳುತ್ತಿದ್ದೆವು. ಬೀಳುತ್ತ, ಏಳುತ್ತಿದ್ದೆವು. ಹಲ್ಲುಗಳಿಂದ ಕಚ್ಚುತ್ತಿದ್ದೆವು(ದಂತಕ್ಷತ). ಉಗುರಿನಿಂದ ಗೀರಿಕೊಳ್ಳುತ್ತಿದ್ದೆವು (ನಖಕ್ಷತ). ಈ ಗೀರಿನ ಗಾಯಗಳಿಂದ ನೆತ್ತರು ಜಿನುಗಿ ಮೈ ರಣರಂಗದಂತೆ ರಕ್ತರಂಜಿತವಾಗಿತ್ತು.
ರಣರಂಗದ ಸನ್ನಿಧಿಯಲ್ಲಿರುವ ತರುಣನಿಗೆ ಚೆಲುವೆ ಹೆಂಡತಿಯ ನೆನಪಾಗುವುದು ಸಹಜವೇ. ಪ್ರಾಯದ ಕಾವಿನಲ್ಲಿದ್ದಾಗ ಕೇಳಿ ಕೂಡ ಹೀಗೆ ಹಿಂಸಾತ್ಮಕವಾಗಿರುವುದೂ ಸಹಜ. ಹೋಲಿಕೆ ಇಷ್ಟಕ್ಕೇ ಮುಗಿಯುತ್ತದೆ. ವ್ಯತ್ಯಾಸ ಇಷ್ಟೆ: ಯುದ್ಧರಂಗದಲ್ಲಿ ಪಡೆಯುವ ನೋವೇ ಬೇರೆ, ರತಿರಂಗದಲ್ಲಿ ಪಡೆಯುವ ನೋವೇ ಬೇರೆ!

ಹರಿಹರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments