ಸಂಭವಾಮಿ ಉಗೀ..ಉಗೀ...
ಚುನಾವಣೆ ಬಂತೆಂದರೆ ಹಾಗೆಯೇ! ವಾಕ್ಸಮರಗಳು ಸಾಮಾನ್ಯ ಎನಿಸಿದರೂ ಅಲ್ಲಿ ಇಲ್ಲಿ ಬೇಡದ್ದು ಆಡುವ ಅಸಾಮಾನ್ಯರೂ ಪ್ರತ್ಯಕ್ಷವಾಗುತ್ತಾರೆ. ವಿರೋಧಿಗಳ ಯಶಸ್ಸನ್ನು ಸಹಿಸದಾದಾಗ ದ್ವೇಷಪೂರಿತ ಹೇಳಿಕೆಗಳಿಗೆ ಮೊರೆ ಹೋಗುತ್ತಾರೆ. ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದೇವೆ ಎಂಬುದನ್ನೂ ಮರೆತು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಸಾರ್ವಜನಿಕವಾಗಿ ಅವಹೇಳನಕಾರಿ ಹೇಳಿಕೆ ನೀಡುವ ರಾಜಕಾರಣಿಗಳು ಇನ್ನು ಖಾಸಗಿಯಾಗಿ ಎಷ್ಟು ಬೈದುಕೊಳ್ಳಬಹುದು? ಊಹಿಸಿದರೆ ಅಸಹ್ಯ ಮೂಡುತ್ತದೆ. ನಾಲಿಗೆ ಮೇಲೆ ಹಿಡಿತ ಇಲ್ಲದವನು, ಅಸಭ್ಯರಾಗಿ ಭಾಷಣ ಮಾಡುವವನು ಎಂದಿಗೂ ಜನನಾಯಕನಾಗಲು ಅನರ್ಹನೇ.
ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧಿಸಿರುವ ಡಾ. ಜಿ. ಪರಮೇಶ್ವರ್ ಮತದಾರರನ್ನು ಜೆಡಿಎಸ್ ವಿರುದ್ಧ ಎತ್ತಿಕಟ್ಟಲು ದೇವೇಗೌಡರ ಹಳೆಯ ಹೇಳಿಕೆಯನ್ನು ಕೆದಕಿದ್ದು ದ್ವೇಷ ರಾಜಕಾರಣಕ್ಕೆ ಸದ್ಯದ ಸ್ಪಷ್ಟ ಉದಾಹರಣೆ. ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟಲು ಬಯಸುತ್ತೇನೆ ಎಂದಿದ್ದ ದೇವೇಗೌಡರಿಗೆ 'ತಾಕತ್ತಿದ್ದರೆ ಈ ಜನ್ಮದಲ್ಲಿ ಮುಸ್ಲಿಂ ಆಗಿ ಮತಾಂತರಗೊಳ್ಳಲಿ' ಎಂದು ಉದ್ರೇಕಕಾರಿ ಪಂಥಾಹ್ವಾನ ನೀಡಿದ್ದರು. ಅಂತಹ 'ನಾನ್ಸೆನ್ಸ್' ಹೇಳಿಕೆಗಳು ರಾಜಕೀಯ ವಲಯದಲ್ಲಿ ಆಗಾಗ ಕೇಳಿಬರುತ್ತಲೇ ಇರುತ್ತವೆ. ದೊಡ್ಡ ಸೌಂಡ್ ಮಾಡಿದ ಶಬ್ದಗಳ ಸುತ್ತ ಸುತ್ತಿದಾಗ 'ಹಿಂಗೂ ಮಾತಾಡ್ತಾರಾ? ಛೀ ಥೂ..!' ಎನ್ನದಿರಲು ಸಾಧ್ಯವೇ ಇಲ್ಲ.
ಹೇಳಿಕೆಯನ್ನು ಹಿಂಪಡೆದವರೂ ಇದ್ದಾರೆ, ಕ್ಷಮೆ ಯಾಚಿಸಿದವರೂ ಇದ್ದಾರೆ. ಹಾಗಂತ ಸಿಡಿದ ಬಾಂಬಿನಿಂದಾದ ಹಾನಿಯನ್ನು ಸರಿಪಡಿಸಲು ಸಾಧ್ಯವೇ? 'ನಾಲಿಗೆ ಮೇಲೆ ಹಿಡಿತವಿರಲಿ' ಎಂದು ಜನನಾಯಕರಿಗೇ ಉಪದೇಶ ಮಾಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ಮಾತ್ರ ವಿಪರ್ಯಾಸವೇ ಸರಿ. ಅಂಥ ಒಂದಷ್ಟು ಪ್ರಚೋದನಕಾರಿ ಹೇಳಿಕೆಗಳ ಝಲಕ್ ಇಲ್ಲಿದೆ. ಅಚ್ಚರಿಯೇನೆಂದರೆ, ಕೋಮುವಾದಿ, ಹಿಂದೂ ಉಗ್ರವಾದಿ, ಪ್ರತಿ ಭಾಷಣದಲ್ಲೂ ಜನರನ್ನು ರೊಚ್ಚಿಗೆಬ್ಬಿಸುತ್ತಾರೆ ಎಂಬಿತ್ಯಾದಿ ಆರೋಪಗಳಿಗೆ ಗುರಿಯಾಗಿರುವ ನರೇಂದ್ರ ಮೋದಿಯವರ ವಿರುದ್ಧವೇ ಇತರರ ನೂರಾರು ಪ್ರಚೋದನಕಾರಿ ಭಾಷಣಗಳು ಹಾಗೂ ಹೇಳಿಕೆಗಳು ವರದಿಯಾಗಿವೆ.
ಮೋದಿ ಒಬ್ಬ ಸಾಮೂಹಿಕ ಹಂತಕ. ಅವರಿಗೆ ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಅಗತ್ಯವಿದೆ.
- ಶರದ್ ಪವಾರ್
ಮೋದಿ ವಿಷ!
- ಜಯಮಾಲಾ
ನಮ್ಮ ತಂಟೆಗೇನಾದರೂ ಬಂದರೆ ಮೋದಿ ಅವರನ್ನು ತುಂಡು ತುಂಡಾಗಿ ಕತ್ತರಿಸುವೆ!
- ಇಮ್ರಾನ್ ಮಸೂದ್
ಮೋದಿ ವಾಚ್ಮನ್, ಅಡಾಲ್ಫ್ ಹಿಟ್ಲರ್!
- ರಾಹುಲ್ ಗಾಂಧಿ
ದೇವೇಗೌಡ ಹಿಟ್ಲರ್!
ಮೋದಿ ನರಹಂತಕ, ಮುಸೋಲನಿ, ಹಿಟ್ಲರ್!
- ಸಿದ್ದರಾಮಯ್ಯ
ನನ್ನ ವಿರುದ್ಧ ಯಾರಾದರೂ ಟೀಕೆ ಮಾಡಿದರೆ ಅವರ ನಾಲಿಗೆ ಸೀಳುತ್ತೇನೆ!
- ಬಿ.ಎಸ್. ಯಡಿಯೂರಪ್ಪ
ಮೋದಿ ಸರ್ವಾಧಿಕಾರಿ. ರಾಜನಾಥ್ ಸಿಂಗ್ ನರಿ!
-ಸುಧೀಂದ್ರ ಕುಲಕರ್ಣಿ
ಭಾರತ ಭಯೋತ್ಪಾದಕ ದೇಶ. ನರೇಂದ್ರ ಮೋದಿ ಕೊಲೆಗಡುಕ.
-ಹಫೀಜ್ ಸಯೀದ್
ರಮ್ಯಾ ಅಪ್ಪ, ಜಾತಿ ಗೊತ್ತಿಲ್ಲದ ಪ್ರನಾಳ ಶಿಶು!
- ಶ್ರೀನಿವಾಸ್
ಭ್ರಷ್ಟರಿಗೆ ಗುಂಡಿಕ್ಕಿ!
- ಶಂಕರ್ ಬಿದರಿ
ಮೋದಿ ಒಬ್ಬ ಭಸ್ಮಾಸುರ!
- ಜೈ ರಾಮ್ ರಮೇಶ್
ದೇವೇಗೌಡ ಒಬ್ಬ ಜೋಕರ್!
- ಡಿ. ಬಿ ಚಂದ್ರೇಗೌಡ
ಕರ್ನಾಟಕ ಸರ್ಕಾರಕ್ಕೆ ಚಟ್ಟಾ ಕಟ್ಟುತ್ತೇನೆ!
- ಸಂಬಾಜಿ ಪಾಟೀಲ್
ಮೋದಿ ಒಬ್ಬ ನಪುಂಸಕ!
- ಸಲ್ಮಾನ್ ಖುರ್ಷಿದ್
ಮೋದಿ ನಾಯಿಮರಿ!
- ಆಜಂ ಖಾನ್
ಮೋದಿ ಒಬ್ಬ ವಿಲನ್!
- ವೀರಪ್ಪ ಮೊಯ್ಲಿ
ರಾಹುಲ್ ಕಾಲಿಟ್ಟಲ್ಲೆಲ್ಲಾ ಕಾಂಗ್ರೆಸ್ ಸೋಲುತ್ತಾ ಬಂದಿದೆ. ಆತ ಒಬ್ಬ ವಿಫಲ ನಾಯಕ!
- ಅನಂತ ಕುಮಾರ್
ನನ್ನ ಆಸ್ತಿ ಯಾವುದೂ ನನ್ನ ಸ್ವಂತದ್ದಲ್ಲ
- ರಾಖೀ ಸಾವಂತ್
ಇದು ನೀವು ಹೇಳದೇ ಹೋದ್ರೂ ನಿಮ್ಮ ಅಭಿಮಾನಿಗಳಿಗೆ ಗೊತ್ತಿರೋ ವಿಷಯ ಬಿಡಿ!
ರಾಹುಲ್ ಇಟಲಿ ಪ್ರಾಡಕ್ಟು. ವಿದೇಶಿಯರನ್ನು ದೂರವಿಡಿ
- ಸ್ಮೃತಿ ಇರಾನಿ
ಸ್ಮೃತಿ ಕೂಡಾ ವಿದೇಶೀ ಪ್ರಾಡಕ್ಟೇ. ಹೆಸರಲ್ಲೇ ಇರಾನಿ ಅಂತಿದೆಯಲ್ಲ!!
- ರಾಹುಲ್
= ಮಂಜುನಾಥ್ ಎಲ್.ಕೆ