ಕೋಪದ ಕಲೆ
ಪ್ರಣಯ ಪ್ರಕರಣಗಳಲ್ಲಿ, ಕೋಪಕ್ಕೇ ಪ್ರಮುಖ ಭಾಗವೊಂದನ್ನು ಮೀಸಲಿಡುವ ಅಗತ್ಯವಿದೆ. ಪ್ರಣಯ ಕಾವ್ಯಗಳು ಕೂಡ ಹುಸಿಕೋಪ, ರಮ್ಯಕೋಪ, ಕಡುಗೋಪ, ವಿರಸ, ಕೋಪಗೃಹಾದಿ ವರ್ಣನೆಗಲಿಂದ ತುಂಬಿಹೋಗಿವೆ. ಅನ್ಯ ತರುಣಿಯ ಮೇಲೆ ಮನಸ್ಸನ್ನಿಟ್ಟಿರುವ ನಲ್ಲನಲ್ಲಿ ಕೋಪ ಮಾಡಿಕೊಳ್ಳುವುದೂ ಒಂದು ಕಲೆ. ಆ ಕಲೆಯನ್ನು ಕಲಿಸುವ ಪರಿಣಿತ ಸಖಿಯರೇ ಇದ್ದರು ಎಂದರೆ ಆಶ್ಚರ್ಯವಾಗುತ್ತದೆಯೆ? ಅಂಥ ಒಂದು ಸಂದರ್ಭ ಇಲ್ಲಿದೆ.
ಸಖ್ಯಸ್ತಾನಿ ವಚಾಂಸಿ ಯಾನಿ ಬಹುಶೋಧೀತಾನಿ ಯುಷ್ಮನ್ಮುಖಾ
ದ್ವಕ್ಷ್ಯೇಹಂ ಬಹುಶಿಕ್ಷಿತಾ ಕ್ಷಣಮಿತಿ ಧ್ಯಾತ್ವಾಪಿ ಮೌನಂ ಶ್ರಿತಾ
ಧೂರ್ತೇನೈತ್ಯ ಚ ಮಂಡಲೀಕೃತಕುಚಂ ಗಾಢಂ ಪರಿಷ್ವಜ್ಯ ಮಾಂ
ಪಿತಾನ್ಯೇವ ಸಹಾಧರೇಣ ಹಸತಾ ವಕ್ರಸ್ಥಿತಾನ್ಯೇವ ಮೇ
ವಂಚನೆ ಮಾಡುತ್ತಿರುವ ಪ್ರಿಯತಮ ಬಳಿಗೆ ಬಂದಿದ್ದಾನೆ. ನಲ್ಲೆ ಈಗ ಸಿಟ್ಟನ್ನು ತೋರಿಸಲೆಂದು, ಸಖಿಯರು ಹೇಳಿಕೊಟ್ಟ ಸಿಟ್ಟಿನ ಪಾಠಗಳನ್ನು ನೆನಪು ಮಾಡಿಕೊಳ್ಳುತ್ತಿರುತ್ತಾಳೆ. ಆದರೆ ನಲ್ಲ ಅದಕ್ಕೆ ಅವಕಾಶವನ್ನೇ ಕೊಡದೆ, ಆಕೆ ಯನ್ನು ಗಟ್ಟಿ ಯಾಗಿ ಅಪ್ಪಿ ಕೊಂಡುಬಿಡುತ್ತಾನೆ. ಆ ಗಾಢಾಲಿಂಗನದಿಂದ ಆಕೆಯ ದುಂಡುಕುಚಗಳು ಮಂಡಲಾಕೃತಿಗೆ ತಿರುಗಿಬಿಟ್ಟವು! ಅಧರವನ್ನು ಗಟ್ಟಿಯಾಗಿ ಚಂಬಿಸುತ್ತಾ, ಅಲ್ಲಿ ಹೊರಬರಲಿದ್ದ ಸಿಟ್ಟಿನ ಮಾತುಗಳನ್ನೂ ಅವನೇ ಕುಡಿದುಬಿಟ್ಟ!
ನಲ್ಲೆಯ ಕೋಪ ಮಟಾಮಾಯವಾಯಿತೆಂದು ಬೇರೆ ಹೇಳಬೇಕೆ? ಎಷ್ಟು ಕೋಪ ಮಾಡಿದರೂ ಶರೀರ ಧರ್ಮವನ್ನು ಮೀರುವುದಕ್ಕುಂಟೆ?
- ಹರಿಹರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.