ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಜಗುಲಿ

Vishwanath S
Updated On : 6 Apr 2014, 2:55 am

ನಮ್ಮ ಹಿತದೃಷ್ಟಿಯಿಂದ ಸ್ಥಳೀಯ ಅಭ್ಯರ್ಥಿಯನ್ನೇ ಪರಿಗಣನೆಗೆ ತೆಗೆದುಕೊಳ್ಳುವುದು ಹೆಚ್ಚು ಸೂಕ್ತ. ಮತಕ್ಷೇತ್ರದ ಜನರ ಕುಂದು ಕೊರತೆಗಳನ್ನು ಅಲ್ಲಿನ ಚುನಾಯಿತ ಜನಪ್ರತಿನಿಧಿಯೇ ಬಗೆಹರಿಸಬೇಕು. ಜತೆಗೆ ಪ್ರಧಾನಿ ಅಭ್ಯರ್ಥಿಯ ನಡಾವಳಿ ಉತ್ತಮವಾಗಿರಬೇಕು. ಜಾತಿ, ಧರ್ಮ, ಪಕ್ಷವನ್ನು ಪರಿಗಣನೆಗೆ ತೆಗೆದುಕೊಳ್ಳದೇ ಸಮಾಜದ ಶ್ರೇಯೋಭಿವೃದ್ದಿಗಾಗಿ ಪ್ರಾಮಾಣಿಕ, ಪಾರದರ್ಶಕತೆಯಿಂದ ಜವಾಬ್ದಾರಿ ನಿರ್ವಹಿಸಬೇಕು. ರಾಷ್ಟ್ರದಲ್ಲಿ ಹಲವಾರು ಜ್ವಲಂತ ಸಮಸ್ಯೆಗಳು ತಾಂಡವಾಡುತ್ತಿದ್ದು ಅವುಗಳನ್ನು ಪರಿಹರಿಸಿ ನೆಮ್ಮದಿಯ ಜೀವನ ಕೊಡುವ ಸ್ಥಳೀಯ ಅಭ್ಯರ್ಥಿಯೊಂದಿಗೆ ಪ್ರಧಾನಿ ಅಭ್ಯರ್ಥಿಯನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.
-ಮಹಾಂತೇಶ.  ಎಂ. ರಾಜಗೋಳಿ, ಬೈಲಹೊಂಗಲ

ಸ್ಥಳೀಯ ಅಭ್ಯರ್ಥಿಯೇ ಸೂಕ್ತ
ಮತ ಚಲಾಯಿಸುವಾಗ ನಾವು ಸ್ಥಳೀಯ ಅಭ್ಯರ್ಥಿಗಳನ್ನು ಪರಿಗಣಿಸುತ್ತೇವೆ. ಏಕೆಂದರೆ ನಾವು ಪ್ರಧಾನಿ ಅಭ್ಯರ್ಥಿಯನ್ನು ಪರಿಗಣಿಸಿ ಮತ ಚಲಾಯಿಸಿದ ಮೇಲೆ ಆತ ಆಯ್ಕೆಯಾದರೂ ನಮ್ಮ ಕ್ಷೇತ್ರದ ಮೂಲಭೂತ ಸಮಸ್ಯೆಗಳು ಆತನ ಅರಿವಿಗೆ ಬರುವುದಿಲ್ಲ. ಈ ಸ್ಥಳೀಯ ಅಭ್ಯರ್ಥಿಯು ಕ್ಷೇತ್ರದ ಬಗ್ಗೆ ಪೂರ್ಣ ಪ್ರಮಾಣದಲ್ಲಿ ಅಲ್ಲದಿದ್ದರೂ ಅಲ್ಪ-ಸ್ವಲ್ಪವಾದರೂ ತಿಳಿದುಕೊಂಡಿರುತ್ತಾನೆ. ಇದಲ್ಲದೆ ನಮ್ಮ ಕಷ್ಟಗಳನ್ನು ತಕ್ಷಣವೇ ಖುದ್ದಾಗಿ ತಿಳಿಸಲು ಸ್ಥಳೀಯ ಅಭ್ಯರ್ಥಿಗಳೇ ಬೇಕಾಗುತ್ತಾರೆ. ಹಾಗಾಗಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಸಂಸದರ ಅಥವಾ ಶಾಸಕರ ಅನುದಾನಗಳಂತೂ ಬಂದೇ ಬರುತ್ತವೆ. ಅವುಗಳನ್ನು ಪ್ರಾಮಾಣಿಕವಾಗಿ ಬಳಸುವಂತಹ ಜಾಣ್ಮೆಯುಳ್ಳ ಸ್ಥಳೀಯ ಅಭ್ಯರ್ಥಿಗಳನ್ನು ಪರಿಗಣಿಸುವುದು ಹೆಚ್ಚು ಸೂಕ್ತ.
-ರವಿಕುಮಾರ್. ವಿ. ಹೊಸದುರ್ಗ

ಪ್ರಧಾನಿ ಅಭ್ಯರ್ಥಿಯನ್ನೇ ಪ್ರೋತ್ಸಾಹಿಸಿ
ನಮ್ಮದು ಸಂವಿಧಾನಾತ್ಮಕ ಸಂಸದೀಯ ಪ್ರಜಾಪ್ರಭುತ್ವದ ಮಾದರಿ ವ್ಯವಸ್ಥೆ ಆಗಿರುವುದರಿಂದ ಪ್ರಧಾನಿ ಅಭ್ಯರ್ಥಿಯನ್ನು ಚುನಾವಣೆಯಲ್ಲಿ ಬಹುಮತ ಪಡೆದ ಪಕ್ಷದ ಚುನಾಯಿತ ಸದಸ್ಯರು ಆರಿಸುವುದು ವಾಡಿಕೆ. ಆದರೆ ಇತ್ತೀಚೆಗೆ ರಾಷ್ಟ್ರೀಯ ಪಕ್ಷಗಳು ಪ್ರಧಾನಿ ಅಭ್ಯರ್ಥಿಗಳನ್ನು ಚುನಾವಣೆಗೆ ಮೊದಲೇ ಅಧಿಕೃತವಾಗಿ ಘೋಷಣೆ ಮಾಡುತ್ತಿರುವುದರಿಂದ ಚುನಾವಣೆ ವ್ಯಕ್ತಿ ಕೇಂದ್ರಿತವಾಗುತ್ತಿವೆ. ಸ್ಥಳೀಯ ಅಭ್ಯರ್ಥಿ ಕೂಡ ಪ್ರಧಾನಿಯ ಹೆಸರಿನ ಪರವಾಗಿಯೇ ಪ್ರಚಾರ ಮಾಡುತ್ತಿದ್ದಾನೆ. ಇದರಿಂದ ಮತದಾರರೂ ಪ್ರಧಾನಿ ಅಭ್ಯರ್ಥಿಯನ್ನೆ ಪ್ರೋತ್ಸಾಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಮತದಾರರು ಪ್ರಧಾನಿ ಅಭ್ಯರ್ಥಿಯನ್ನೇ ಗಮನದಲ್ಲಿಟ್ಟುಕೊಂಡು ಮತ ನೀಡಬೇಕಾಗಿದೆ.
-ವಿಶ್ವನಾಥ, ಮೈಸೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments