ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಜೀವಕೆ ಇಂಧನ ಇಚ್ಛಾಶಕ್ತಿ!

Vishwanath S
Updated On : 6 Apr 2014, 2:56 am

ಸ್ವಾಮಿ ವಿವೇಕಾನಂದರು ಇದ್ದಾರೆಂದರೆ ಅಲ್ಲೊಂದು ಲವಲವಿಕೆಯ ವಾತಾವರಣ ನಿರ್ಮಾಣವಾಗುತ್ತಿತ್ತು. ಸಾಮಾನ್ಯರಲ್ಲಿ ಸಾಮಾನ್ಯರಾಗಿ ಖುಷಿ, ಸಂತೋಷ, ಉಲ್ಲಾಸಗಳಿಂದ ಕೂಡಿದ ಅವರ ಬದುಕೇ ಆನಂದಮಯ!
ಸ್ವಾಮೀಜಿ ಕೋಲ್ಕತಾದಲ್ಲಿದ್ದಾಗ ಅವರ ಆರೋಗ್ಯ ಅಪಾಯಕಾರಿಮಟ್ಟ ತಲುಪಿತು. ಮಠದ ಗುರುಭಾಯಿ ಸನ್ಯಾಸಿಗಳೆಲ್ಲ ಆತಂಕಗೊಂಡಿದ್ದರು. ಪಂಡಿತರೊಬ್ಬರು ಸ್ವಾಮೀಜಿಗೆ ಕಠಿಣ ಪಥ್ಯ ಪಾಲಿಸಲು ಹೇಳಿದರು. ಹನಿ ನೀರನ್ನೂ ಕುಡಿಯುವಂತಿರಲಿಲ್ಲ. ಬದಲಿಗೆ ಹಾಲು ಕುಡಿಯಬಹುದಿತ್ತು. ಸ್ವಾಮೀಜಿ ಪಥ್ಯವನ್ನು ಕಟ್ಟಿನಿಟ್ಟಾಗಿ ಪಾಲಿಸತೊಡಗಿದರು. ಇದನ್ನು ಕಂಡು ಅವರ ಶಿಷ್ಯರೊಬ್ಬರು, 'ಸ್ವಾಮೀಜಿ ನೀವು ಗಂಟೆಗೊಮ್ಮೆ ನೀರು ಕುಡಿಯುತ್ತಿದ್ದವರು. ಅದರಲ್ಲೂ ಈಗ ಸೆಕೆಗಾಲ. ಹೀಗಿದ್ದರೂ ಅದು ಹೇಗೆ ನೀರನ್ನೇ ಕುಡಿಯದೆ ಇದ್ದುಬಿಟ್ಟಿರಿ?' ಎಂದು ಕೇಳಿದರು. ಅದಕ್ಕೆ ಸ್ವಾಮೀಜಿ, 'ಇದಕ್ಕೆ ಎರಡು ಕಾರಣಗಳಿವೆ. ಒಂದು, ಸನ್ಯಾಸಿ ಬಂಧುಗಳ ಅಪೇಕ್ಷೆಯಂತೆ ನಡೆದುಕೊಂಡು ಅವರಿಗೆ ಸಂತೋಷವನ್ನುಂಟುಮಾಡುವುದು. ಏಕೆಂದರೆ, ಅವರೆಲ್ಲ ನನ್ನನ್ನು ತುಂಬಾ ಪ್ರೀತಿಸುತ್ತಾರೆ'. ಇನ್ನೊಂದು ಕಾರಣ, 'ನಮ್ಮ ಇಚ್ಛಾಶಕ್ತಿಯು ದೇಹದ ಮೇಲೆ ಹೇಗೆ ಪರಿಣಾಮ ಬೀರಬಲ್ಲದೆಂದು ನೋಡುವ ಕುತೂಹಲದಿಂದ. ಈಗ ನೋಡು, ಈ ಚಿಕಿತ್ಸೆಗೆ ಒಪ್ಪಿಕೊಂಡಾಗಲೇ ನಾನು ನೀರು ಕುಡಿಯುವುದಿಲ್ಲವೆಂದು ಶಪಥ ಮಾಡಿಬಿಟ್ಟೆ. ಈಗ ನಾನು ಬಾಯಿ ಮುಕ್ಕಳಿಸಲು ಹೋದರೂ, ಗಂಟಲೊಳಗಿನ ಮಾಂಸಖಂಡಗಳು ತಾವಾಗಿಯೇ ಮುದುಡಿಕೊಂಡು ತೊಟ್ಟು ನೀರೂ ಗಂಟಲಲ್ಲಿಳಿಯದಂತೆ ಮಾಡುತ್ತವೆ. ಎಷ್ಟಾದರೂ ಈ ಶರೀರ ಮನಸ್ಸಿನ ಅಡಿಯಾಳಲ್ಲವೆ? ಮನಸ್ಸು ಆಜ್ಞೆ ಮಾಡಿದ್ದನ್ನು ಶರೀರ ವಿಧೇಯವಾಗಿ ಪಾಲಿಸಲೇಬೇಕು!' ಎಂದರು.


-ಆನಂದ ಎಸ್.ಎನ್.
anandsn193@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement