ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಪ್ರಧಾನಿ ಅಭ್ಯರ್ಥಿ ದಕ್ಷನಾಗಿರಬೇಕು

ನಾವು ನಮ್ಮ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸ್ಥಳೀಯ ಮಟ್ಟದ ಜನಪ್ರತಿನಿಧಿಗಳಿಗೆ ಮತ ನೀಡಬೇಕು...

Rashmi Kasaragodu
Updated On : 7 Apr 2014, 2:59 am

ನಾವು ನಮ್ಮ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸ್ಥಳೀಯ ಮಟ್ಟದ ಜನಪ್ರತಿನಿಧಿಗಳಿಗೆ ಮತ ನೀಡಬೇಕು. ಅವರಿಗೆ ನಮ್ಮ ಕಷ್ಟ-ಸುಖಗಳು ಬೇಗ ತಲುಪುತ್ತವೆ. ಹೀಗೆಯೇ ನಮ್ಮ ದೇಶದ ಸಮಸ್ಯೆಗಳನ್ನು ಪರಿಹರಿಸಬೇಕಾದ್ದು ಹಾಗೂ ನಮ್ಮ ದೇಶವನ್ನು ಪ್ರಗತಿಪಥದತ್ತ ಕೊಂಡೊಯ್ಯಬೇಕಾದ್ದು ಪ್ರಧಾನಮಂತ್ರಿಯ ಕಾರ್ಯ. ಆ ಸ್ಥಾನಕ್ಕೆ ದಕ್ಷ ಆಡಳಿತಗಾರನ ಅವಶ್ಯಕತೆ ಹೆಚ್ಚಾಗಿದೆ. ಹಾಗಾಗಿ ನಾವು ಪ್ರಧಾನ ಮಂತ್ರಿ ಅಭ್ಯರ್ಥಿಯನ್ನು ಪ್ರೋತ್ಸಾಹಿಸುವ ಸ್ಥಳೀಯ ಅಭ್ಯರ್ಥಿಗೆ ಮತ ಹಾಕಬೇಕು. ಆಗ ಪ್ರಧಾನಿ ಅಭ್ಯರ್ಥಿಯನ್ನು ಪರಿಗಣಿಸಿದಂತೆಯೂ ಆಗುತ್ತದೆ, ಸ್ಥಳೀಯ ಅಭ್ಯರ್ಥಿಯನ್ನು ಪ್ರೋತ್ಸಾಹಿಸಿದಂತೆಯೂ ಆಗುತ್ತದೆ.
ಟಆರ್. ಸಿ. ಪರಶುರಾಮ್, ಶಿಕಾರಿಪುರ

ಅಭ್ಯರ್ಥಿಗಳ ಹಿನ್ನೆಲೆಯನ್ನು ಅರಿಯಿರಿ
ಈಗ ದೇಶದಾದ್ಯಂತ ಪ್ರಧಾನಿ ಅಭ್ಯರ್ಥಿಯ ಬಗ್ಗೆ ಚರ್ಚೆಯಾಗುತ್ತಿದೆ. ಕೇವಲ ಪ್ರಧಾನಿ ಅಭ್ಯರ್ಥಿಯನ್ನು ಮಾತ್ರ ಪರಿಗಣಿಸಿ ಮತ ಹಾಕುವುದು ಎಷ್ಟು ಸರಿ? ಪ್ರಧಾನಿ ಅಭ್ಯರ್ಥಿ ಒಬ್ಬರು ಸರಿಯಿದ್ದು ಉಳಿದವರು ಅನರ್ಹರಾದರೆ ಇಡೀ ವ್ಯವಸ್ಥೆಯೇ ಹಾಳಾಗುವುದಿಲ್ಲವೇ? ಅಗ ಒಬ್ಬ ಪ್ರಧಾನಿಯಿಂದ ಏನು ಮಾಡಲು ಸಾಧ್ಯ? ಇಂದು ಎಲ್ಲ ಪಕ್ಷಗಳಲ್ಲಿ ಕ್ರಿಮಿನಲ್ ಹಿನ್ನೆಲೆಯ ಅಭ್ಯರ್ಥಿಗಳು ಇಲ್ಲದಿಲ್ಲ! ದೇಶದ ಬಗ್ಗೆ ಕನಿಷ್ಠ ಮಟ್ಟದ ತಿಳುವಳಿಕೆ ಇರದ ಅಭ್ಯರ್ಥಿಗಳೇ ನಮಗೆ ಕಾಣಸಿಗುತ್ತಾರೆ. ಅನೇಕ ಬಾರಿ ವಿಧಾನಸಭೆಯಲ್ಲಿ ಕನಿಷ್ಠ ಮಾತನಾಡಲೂ ಬಾರದೆ ಪಕ್ಕದಲ್ಲಿದ್ದ ಶಾಸಕರಿಂದ ಹೇಳಿಸಿಕೊಂಡು ಮಾತನಾಡುವ ವ್ಯಕ್ತಿಗಳು ಈ ಕಣದಲ್ಲಿ ಇದ್ದಾರೆ. ಹಾಗಾಗಿ ಸ್ಥಳೀಯ ಅಭ್ಯರ್ಥಿಗಳ ಹಿನ್ನೆಲೆಯನ್ನು ತಿಳಿದು ಅರ್ಹ ವ್ಯಕ್ತಿಯನ್ನು ಆಯ್ಕೆ ಮಾಡಬೇಕಿದೆ.
ಟಎನ್. ಚಂದ್ರಶೇಖರ್, ಚಿಕ್ಕಬಳ್ಳಾಪುರ
ತುಲನಾತ್ಮಕ ದೃಷ್ಟಿ ಬೆಳಸಿಕೊಳ್ಳಿ
ಆಯಾ ಸಂದರ್ಭಕ್ಕೆ ತಕ್ಕಂತೆ ಎರಡೂ ಆಯ್ಕೆಗಳನ್ನ ಪರಿಗಣಿಸಲಾಗುತ್ತದೆ. ಸ್ಥಳೀಯ ಹಾಗೂ ಪ್ರಧಾನಿ ಅಭ್ಯರ್ಥಿಯ ಯೋಗ್ಯತೆ, ವರ್ಚಸ್ಸು, ಚುನಾವಣೆಗೆ ಮಾನದಂಡವಾಗಲಿದೆ. ಜನರಲ್ಲಿ ಹಿಂದಿಗಿಂತಲೂ ಈಗ ಮತದಾನದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿದೆ. ಕೆಲವರು ಸ್ಥಳೀಯ ಅಭ್ಯರ್ಥಿಯ ಜಾತಿ, ವರ್ಚಸ್ಸನ್ನು ನೋಡಿ ಮತ ಹಾಕುತ್ತಾರೆ. ಇನ್ನೂ ಕೆಲವರು ಪ್ರಧಾನಿ ಅಭ್ಯರ್ಥಿಯನ್ನೇ ಪ್ರೋತ್ಸಾಹಿಸಿ ಸ್ಥಳೀಯ ಅಭ್ಯರ್ಥಿಯನ್ನು ಗೌಣವಾಗಿಸುತ್ತಾರೆ. ಕಣದಲ್ಲಿರುವವರು ಹಂಚುವ ಹಣ, ಹೆಂಡ, ಖಂಡಗಳು ಕೂಡ ಒಮ್ಮೊಮ್ಮೆ ಪ್ರಮುಖ ಪಾತ್ರ ವಹಿಸುತ್ತವೆ. ಇದನ್ನು ತಿಳಿದು ಅರ್ಹ ಅಭ್ಯರ್ಥಿಗಳು ಕೂಡ ಇಂತಹ ಕೃತ್ಯಕ್ಕೆ ಕೈಹಾಕುತ್ತಾರೆ. ಆದ್ದರಿಂದ ಮತದಾರರು ತುಲನಾತ್ಮಕ ದೃಷ್ಟಿಯಿಂದ ಸರಿಯಾದ ನಿರ್ಣಯ ತೆಗೆದುಕೊಳ್ಳಬೇಕು.
ಟಶ್ರೀಧರ್ ಡಿ. ರಾಮಚಂದ್ರಪ್ಪ, ತುರುವನೂರು



'ಜಗುಲಿ'ಯಲ್ಲಿ ಈ ಸಲದ ವಿಷಯ 'ನೀವು ಮತ ಚಲಾಯಿಸುವಾಗ ಸ್ಥಳೀಯ ಅಭ್ಯರ್ಥಿಗಳನ್ನು ಪರಿಗಣಿಸುತ್ತೀರೋ? ಪ್ರಧಾನಿ ಅಭ್ಯರ್ಥಿಯನ್ನು ಪರಿಗಣಿಸುತ್ತೀರೋ?'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement