ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಅವರ ಬದುಕು ನಮಗೆ ಬೆಳಕು!

ಶ್ರೀರಾಮಕೃಷ್ಣರ ನೆನಪಿಗಾಗಿ ಗಂಗಾನದಿಯ ದಡದಲ್ಲಿ ಸ್ಥಾಪಿಸಲಾದ ಮಠದ ಮುಂಭಾಗದಲ್ಲಿ ಹುಲ್ಲಿನ ಹಾಸು. ಇಲ್ಲಿ ಸ್ವಾಮೀಜಿ ...

Rashmi Kasaragodu
Updated On : 8 Apr 2014, 3:38 am

ಶ್ರೀರಾಮಕೃಷ್ಣರ ನೆನಪಿಗಾಗಿ ಗಂಗಾನದಿಯ ದಡದಲ್ಲಿ ಸ್ಥಾಪಿಸಲಾದ ಮಠದ ಮುಂಭಾಗದಲ್ಲಿ ಹುಲ್ಲಿನ ಹಾಸು. ಇಲ್ಲಿ ಸ್ವಾಮೀಜಿ ಮುದ್ದಿನಿಂದ ಸಾಕಿದ ಪ್ರಾಣಿಗಳು ಓಡಾಡಿಕೊಂಡಿವೆ. ಹುಲ್ಲುಹಾಸಿನ ಪಕ್ಕದಲ್ಲಿ ಸ್ವಾಮಿ ಬ್ರಹ್ಮಾನಂದರ ವಿಶೇಷ ಕಾಳಜಿಯಿಂದ ಹೂವು ತರಕಾರಿಗಳ ತೋಟ ಎದ್ದಿದೆ. ಈ ಹುಲ್ಲುಹಾಸು ಮತ್ತು ತೋಟದ ಮಧ್ಯೆ ಬೇಲಿಯೂ ಇದೆ. ಆದರೆ ಒಂದೊಂದು ಸಲ ಸ್ವಾಮೀಜಿಯವರ ಮುದ್ದಿನ ಪ್ರಾಣಿಗಳಾದ ಮೇಕೆಮರಿಯೊ, ಜಿಂಕೆಮರಿಯೊ ಬೇಲಿ ಹಾರಿ ಹೂವಿನಗಿಡ, ತರಕಾರಿ ಗಿಡಗಳನ್ನು ತಿಂದುಬಿಡುತ್ತಿದ್ದವು. ಇಂತಹ ಅತಿಕ್ರಮ ಪ್ರವೇಶಗಳಾದಾಗ ಈ ಇಬ್ಬರೂ ಮಹಾಸ್ವಾಮಿಗಳ ನಡುವೆ ವಾಕ್ಸಮರ ಪ್ರಾರಂಭವಾಗುತ್ತಿತ್ತು. ಇದು ಆಗಿಂದಾಗ್ಗೆ ನಡೆಯುತ್ತಿತ್ತು.
ಹೀಗೊಮ್ಮೆ ಜಗಳವೆದ್ದಿದೆ. ಇಬ್ಬರೂ ಸಿಟ್ಟಿನಿಂದ ಕೂಗಾಡುತ್ತಿದ್ದರು. 'ಇನ್ನೊಂದು ಸಲ ನಿನ್ನ ಜಿಂಕೆಯೇನಾದರೂ ನನ್ನ ತೋಟದೊಳಕ್ಕೆ ನುಗ್ಗಿದರೆ ಅದರ ಕಾಲು ನೆಟ್ಟಗಿರಲಿಕ್ಕಿಲ್ಲ' ಎಂದು ಬ್ರಹ್ಮಾನಂದರೆಂದರೆ, 'ನಿನ್ನ ಸೌತೆಬಳ್ಳಿ ನನ್ನ ಹುಲ್ಲುಹಾಸಿನ ಮೇಲೆ ಬರಲಿ, ಅದನ್ನು ಬೇರುಸಹಿತ ಕಿತ್ತುಹಾಕುತ್ತೇನೆಯೋ ಇಲ್ಲವೋ ನೋಡು' ಎಂದು ಸ್ವಾಮೀಜಿ ಆರ್ಭಟಿಸುತ್ತಿದ್ದರು. ಇವರಿಬ್ಬರ ಜಗಳ ಉಳಿದವರಿಗೆ ಮೋಜು.
ಶುದ್ಧ ಮನಸ್ಸುಗಳು ಆಡುವ ಜಗಳಗಳೂ ನಗುವಿನ ಹೊಳೆಯನ್ನು ಹರಿಸಬಲ್ಲವು. ಏಕೆಂದರೆ ಆ ಮನಸ್ಸುಗಳ ಒಳಗೆ ದ್ವೇಷವಿಲ್ಲ. ಅಂತರಾಳ ಖಾಲಿಯಾದಷ್ಟೂ ಬಹಿರ್ಬದುಕು ಸಂತಸದಾಯಕ. ಅಂತಹ ಶುದ್ಧ ಮನಸ್ಸುಗಳು ಸ್ವಚ್ಛಂದ ಲಹರಿಯಲ್ಲಿ ವಿಹರಿಸುವಾಗ ಬಾಹ್ಯಜಗತ್ತಿಗೆ ಅದೊಂದು ಅಚ್ಚರಿಯೆನಿಸದಿರದು. ಸ್ವಾಮಿ ವಿವೇಕಾನಂದರು ಶುದ್ಧಾತ್ಮರು! ಬುದ್ಧಾತ್ಮರು! ಮುಕ್ತಾತ್ಮರು! ಮಾನವರೆಲ್ಲರ ಬದುಕಿನಲ್ಲಿ ಬೆಳಕು ತರಲೆಂದೇ ಬದುಕಿ ತೋರಿದವರು!

-ಆನಂದ ಎಸ್.ಎನ್.
anandsn193@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement