ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಆಕೆಯುಟ್ಟ ನಾರುಮಡಿ

ದುಷ್ಯಂತ ಮಹಾರಾಜ ಬೇಟೆಗಾಗಿ ಬಂದವನು ಕಣ್ವ ಮಹರ್ಷಿಗಳ ಆಶ್ರಮದಲ್ಲಿ ವಿಶ್ರಮಿಸಿಕೊಳ್ಳುತ್ತಿದ್ದಾನೆ. ...

Rashmi Kasaragodu
Updated On : 7 Apr 2014, 2:58 am

ದುಷ್ಯಂತ ಮಹಾರಾಜ ಬೇಟೆಗಾಗಿ ಬಂದವನು ಕಣ್ವ ಮಹರ್ಷಿಗಳ ಆಶ್ರಮದಲ್ಲಿ ವಿಶ್ರಮಿಸಿಕೊಳ್ಳುತ್ತಿದ್ದಾನೆ. ಆಗ ಗಿಡಗಳಿಗೆ ನೀರು ಹನಿಸುತ್ತಿರುವ ಶಕುಂತಲೆ ಆತನ ಕಣ್ಣಿಗೆ ಬೀಳುತ್ತಾಳೆ. ಆಕೆಯೇನೂ ಅರಮನೆಯ ಸುಖದಲ್ಲಿ ಹುಟ್ಟಿ ಬೆಳೆದವಳಲ್ಲ. ಅಲ್ಲಿನ ರಂಗುರಂಗಾದ ಉಡುಗೆತೊಡುಗೆಗಳೂ ಆಕೆಯ ಮೈಮೇಲಿಲ್ಲ. ಆದರೆ ಆಕೆಯ ಈ ಅನಾಚ್ಛಾದಿತ ಸೌಂದರ್ಯವೇ ಆತನನ್ನು ಆಕೆಯತ್ತ ಸೆಳೆಯುತ್ತದೆ.

ಸರಸಿಜಮನುವಿದ್ಧಂ ಶೈವಲೇನಾಪಿ ರಮ್ಯಂ
ಮಲಿನಮಪಿ ಹಿಮಾಂಶೋಃ ಲಕ್ಷ್ಮ ಲಕ್ಷ್ಮೀಂ ತನೋತಿ
ಇಯಮಧಿಕಮನೋಜ್ಞಾ ವಲ್ಕಲೇನಾಪಿ ತನ್ವೀ
ಕಿಮಿವ ಹಿ ಮಧುರಾಣಾಂ ಮಂಡನಂ ನಾಕೃತೀನಾಂ

ಸರೋವರದಲ್ಲಿ ಹುಟ್ಟಿ ಬೆಳೆದು ರಂಜಿಸುತ್ತಿರುವ ಕಮಲಪುಷ್ಪದ ಬುಡದಲ್ಲಿ ಪಾಚಿಯಿರಬಹುದು, ಅದೇನೂ ದೊಡ್ಡದಲ್ಲ. ಆಗಸವನ್ನು ಬೆಳಗುವ ಚಂದ್ರನಲ್ಲಿ ಕಲೆಯಿಲ್ಲವೆ? ಇದೆ. ಆದರೂ ಚಂದ್ರನು ಸುಂದರ. ಹಾಗೇ ಈ ಚೆಲುವೆಗೆ ನಾರುಮಡಿಯೆಂಬುದು ಕಳಂಕವೆನಿಸಿಲ್ಲ. ಆದೂ ಆಕೆಗೆ ಸುಂದರವಾಗಿಯೇ ಒಪ್ಪುತ್ತದೆ. ಚೆಲುವಾದ ಅಂಗಸೌಷ್ಟವ ಇದ್ದವರಿಗೆ ಯಾವುದು ತಾನೇ ಭೂಷಣವಾಗುವುದಿಲ್ಲ?
ಫ್ಯಾಶನ್ ಶೋಗಳಲ್ಲಿ ಅಕರಾಳ ವಿಕರಾಳ ದಿರಿಸು ಧರಿಸಿದ ಲಲನೆಯರನ್ನು ನೋಡಿದ್ದೀರಾ? ಹುಡುಗಿ ಚೆಲುವಾಗಿದ್ದರೆ ಅವಳುಟ್ಟ ಬಟ್ಟೆ ಉದ್ಧಾರವಾಗುತ್ತದೆ. ಇಲ್ಲದಿದ್ದರೆ ಮಟಾಷ್. 'ರೀ, ಇವತ್ತು ಯಾವ ಸೀರೆ ಉಡಲಿ?' ಎಂದು ತಲೆ ತಿನ್ನುವ ಪತ್ನಿಯರೂ 'ನೀನು ಯಾವ ಸೀರೆ ಉಟ್ಟರೂ ಚೆನ್ನಾಗಿರುತ್ತೆ ಕಣೆ' ಎಂದು ಪಾರಾಗುವ ಪತಿಯರೂ ನಮ್ಮಲ್ಲಿ ಸಾಮಾನ್ಯವಷ್ಟೆ. ಅಂಥ ಗಂಡಂದಿರು ಈ ಶ್ಲೋಕವನ್ನು ಗುರಾಣಿಯಾಗಿ ಪ್ರಯೋಗಿಸಬಹುದು.ಟಿ


-ಹರಿಹರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement