ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ರಂಜನಾಳ ರಂಗಪ್ರವೇಶ

ಬೆಂಗಳೂರಿನ ಎ.ಡಿ.ಎ ರಂಗಮಂದಿರದಲ್ಲಿ ಏಪ್ರಿಲ್ 11ರಂದು ಸಂಜೆ 6ಕ್ಕೆ ರಂಜನಾಳ 'ನೃತ್ಯಾಂಜನ', ಭರತನಾಟ್ಯ ರಂಗಪ್ರವೇಶ...

Rashmi Kasaragodu
Updated On : 8 Apr 2014, 3:32 am

ಬೆಂಗಳೂರಿನ ಎ.ಡಿ.ಎ ರಂಗಮಂದಿರದಲ್ಲಿ ಏಪ್ರಿಲ್ 11ರಂದು ಸಂಜೆ 6ಕ್ಕೆ ರಂಜನಾಳ 'ನೃತ್ಯಾಂಜನ', ಭರತನಾಟ್ಯ ರಂಗಪ್ರವೇಶವಿದೆ. ಬಸವೇಶ್ವರ ನಗರದಲ್ಲಿನ ಸಾಧನ ಸಂಗಮ ನೃತ್ಯ ಕೇಂದ್ರದಲ್ಲಿ ತರಬೇತು ಪಡೆದಿರುವ ರಂಜನಾ ಇಲ್ಲಿನ ಕರ್ನಾಟಕ ಕಲಾಶ್ರೀ ನೃತ್ಯ ಗುರುಗಳಾದ ಜ್ಯೋತಿ ಪಟ್ಟಾಭಿರಾಮ್ ಅವರ ಶಿಷ್ಯೆಯಾಗಿ ಭರತನಾಟ್ಯ ಕಲಿತು ಇಂದು ರಂಗಪ್ರವೇಶ ಮಾಡುತ್ತಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕ. ರಾ. ಸೇ. ನಿರ್ದೇಶಕ ಕೆ. ಎ. ದಯಾನಂದ, ಮೈಸೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ್ ಕಾರ್ಯಕ್ರಮಕ್ಕೆ ಆಗಮಿಸಿ ಸಾಕ್ಷಿಯಾಗಲಿದ್ದಾರೆ. ತಂದೆ ಎಚ್. ಎಸ್. ನಾಗರಾಜ್ ಮತ್ತು ತಾಯಿ ಭಾಗ್ಯರ ಪ್ರೋತ್ಸಾಹ, ಅಕ್ಕ ರಚನಾಳ ಸಹಕಾರದಿಂದ ತನ್ನ 10ನೇ ವಯಸ್ಸಿನಿಂದಲೇ ಪೂರ್ಣಿಮಾ ಭಾಗವತ್ ಅವರಲ್ಲಿ ನೃತ್ಯ ಕಲಿಯಲು ಪ್ರಾರಂಭಿಸಿದ ರಂಜನಾ ಶಿಲ್ಪಕಲೆಯನ್ನೂ ಅಭ್ಯಾಸ ಮಾಡುತ್ತಿದ್ದಾಳೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement