ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಸಾವಿರ ನಾಲಗೆ ಬೇಕು

ಪ್ರಣಯದ ಆರಂಭಕಾಲದಲ್ಲಿ ಎಲ್ಲವೂ ಉತ್ಕಟವೇ. ಎಲ್ಲವೂ ಉತ್ಪ್ರೇಕ್ಷೆಯೇ. ನಲ್ಲೆಯ ಮುಂಗುರುಳು ದುಂಬಿಯಾಗಿ...

Rashmi Kasaragodu
Updated On : 8 Apr 2014, 3:37 am

ಪ್ರಣಯದ ಆರಂಭಕಾಲದಲ್ಲಿ ಎಲ್ಲವೂ ಉತ್ಕಟವೇ. ಎಲ್ಲವೂ ಉತ್ಪ್ರೇಕ್ಷೆಯೇ. ನಲ್ಲೆಯ ಮುಂಗುರುಳು ದುಂಬಿಯಾಗಿ, ತುಟಿ ತೊಂಡೆಯಾಗಿ, ಹಲ್ಲುಗಳು ದಾಳಿಂಬೆ ಬೀಜಗಳಾಗಿ ಕಾಣುವುದೆಲ್ಲವೂ ಇದರಿಂದಲೇ. ನೋಡಿದರೆ ನೋಡುತ್ತಲೇ ಇರುವ, ಕೂಡಿದರೆ ಕೂಡುತ್ತಲೇ ಇರುವ ಬಯಕೆ. ಇಲ್ಲಿ ಒಂದಕ್ಕೆ ಒಂದು ಸೇರಿದರೆ ಎರಡಲ್ಲ, ಮೂರು! ಅಂಥ ಆತುರಭಾವದ ಮಹಾರಸಿಕನೊಬ್ಬನ ಮನೋವಾಂಛಿತ ಇಲ್ಲಿದೆ.

ಬಾಲೇ ತವಾಧರಸುಧಾರಸಪಾನಕಾಲೇ
ಚೇತೋ ಮದೀಯಮಭಿವಾಂಛತಿ ಶೇಷಭಾವಮ್
ಆಲಿಂಗನೇ ತವ ವಿರೋಚನಪೌತ್ರಭಾವ
ಮಾಖಂಡಲತ್ವಮಖಿಲಾಂಗನಿರೀಕ್ಷಣೇ ತೇ


'ನಲ್ಲೆ, ನಿನ್ನ ಅಧರದ ಸುಧಾರಸ ಪಾನ ಮಾಡುತ್ತಿರುವಾಗ ನಾನು ಮಹಾಶೇಷನಾಗಿರಬೇಕಿತ್ತು ಎಂಬ ಬಯಕೆ! ನಿನ್ನನ್ನು ಅಪ್ಪಿಕೊಳ್ಳುವಾಗ ನಾನು ಬಾಣಾಸುರನಾಗಿರಬೇಕಿತ್ತು ಎಂಬ ಹುಚ್ಚು ಆಸೆ. ನಿನ್ನನ್ನು ನೋಡುತ್ತಾ ಇರುವಾಗ ನಾನು ಇಂದ್ರನಾಗಿರಬೇಕಿತ್ತು ಎಂಬ ವಾಂಛೆ.'
ಇದರ ಹಿಂದಿರುವ ಪುರಾಣ ಪಾತ್ರಗಳ ಹಿನ್ನೆಲೆ ಅರಿಯದಿದ್ದರೆ ಈ ಹೋಲಿಕೆಗಳ ಸ್ವಾರಸ್ಯ ಅರ್ಥವಾಗದು. ಮಹಾಶೇಷನಿಗೆ ಸಾವಿರ ಬಾಯಿ, ನಾಲಿಗೆ. ಪ್ರೇಯಸಿಯ ಅಧರಸುಧೆ ಸವಿಯಲು ಸಾವಿರ ತುಟಿಗಳಿದ್ದರೆ ಅನುಕೂಲವೇ ತಾನೆ! ಬಾಣಾಸುರನೆಂಬವನು ಬಲಿಯ ಪುತ್ರ. ಈತನಿಗೆ ಸಾವಿರ ತೋಳುಗಳು. ನಲ್ಲೆಯನ್ನು ಅಪ್ಪಿಕೊಳ್ಳಲು ಸಾವಿರ ಬಾಹುಗಳಿದ್ದರೆ ಯಾಕೆ ಬೇಡ? ಇನ್ನು ಇಂದ್ರನಿಗೋ, ಮೈಯೆಲ್ಲ ಕಣ್ಣುಗಳು. ಈ ನಲ್ಲನಿಗೆ ಸುಂದರಿಯ ಚೆಲುವನ್ನು ಸಂಪೂರ್ಣ ಆಸ್ವಾದಿಸಲು ಎರಡು ಕಣ್ಣುಗಳು ಸಾಲದಂತೆ.

-ಹರಿಹರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement