ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಗಿಣಿ ಕೇಳಿಸಿಕೊಂಡ ಮಾತು

ಪ್ರೀತಿಸುವವರು ಏಕಾಂತದಲ್ಲಿದ್ದಾಗ ಸುತ್ತ ಯಾರಾದರೂ ಇದ್ದಾರೋ ಇಲ್ಲವೋ ಎಂದು ಗಮನಿಸಿಕೊಳ್ಳುವುದು ಮುಖ್ಯ. ಇಲ್ಲದಿದ್ದರೆ...

Rashmi Kasaragodu
Updated On : 9 Apr 2014, 1:00 am

ಪ್ರೀತಿಸುವವರು ಏಕಾಂತದಲ್ಲಿದ್ದಾಗ ಸುತ್ತ ಯಾರಾದರೂ ಇದ್ದಾರೋ ಇಲ್ಲವೋ ಎಂದು ಗಮನಿಸಿಕೊಳ್ಳುವುದು ಮುಖ್ಯ. ಇಲ್ಲದಿದ್ದರೆ ಅವಾಂತರವಾಗುತ್ತದೆ. ತಾರುಣ್ಯ ಕಳೆದು ಮುದುಕರಾದವರು ತಮ್ಮ ತಾರುಣ್ಯದ ಸಾಹಸಗಳನ್ನು ನೆನೆದು ಪಬ್ಲಿಕ್ಕಿನಲ್ಲಿ ತಮ್ಮನ್ನು ತಾವೇ ಹಾಸ್ಯ ಮಾಡಿಕೊಳ್ಳುವುದುಂಟು. ಆದರೆ ನವದಂಪತಿಗಳಿಗೆ ಹೀಗಲ್ಲ. ಅವರಿಗೆ ತಮ್ಮ ಒಂದೊಂದು ಕ್ಷಣವೂ ಅತ್ಯಂತ ಖಾಸಗಿ. ನವದಂಪತಿಯ ಲಜ್ಜೆಯ ಸ್ವರೂಪವನ್ನು ಅಮರುಕನ ಅಮರುಶತಕದಲ್ಲಿ ಬರುವ ಈ ಸೊಗಸಾದ ಶ್ಲೋಕವು ತೋರುತ್ತದೆ.

ದಂಪತ್ಯೋರ್ನಿಶಿ ಜಲ್ಪತೋರ್ಗೃಹಶುಕೇನಾಕರ್ಣಿತಂ ಯದ್
ವಚಸ್ತತ್ಪ್ರಾರ್ಗುರುಸನ್ನಿಧೌ ನಿಗದತಃ ಶ್ರುತ್ವೈವ ತಾರಂ ವಧೂಃ
ಕರ್ಣಾಲಂಬಿತ ಪದ್ಮರಾಗಶಕಲಂ ವಿನ್ಯಸ್ಯ ಚಂಚ್ವಾಃ ಪುರಾ
ವ್ರೀಡಾರ್ತಾ ಪ್ರಕರೋತಿ ದಾಡಿಮಫಲವ್ಯಾಜೇನ ವಾಗ್ಬಂಧನಂ


ನವದಂಪತಿ ಕೋಣೆಯಲ್ಲಿ ಪ್ರಣಯನಿರತರಾಗಿದ್ದಾರೆ. ಅವರ ಮಾತುಗಳನ್ನೆಲ್ಲ ಪಂಜರದಲ್ಲಿದ್ದ ಗಿಣಿ ಕೇಳಿಸಿಕೊಂಡಿದೆ. ಇರುಳು ಕಳೆದು ಬೆಳಗಾದ ಮೇಲೆ ಅವೇ ಮಾತುಗಳನ್ನು ಮನೆಯ ಹಿರಿಯರ ಮುಂದೆ ಗಿಣಿ ರಿಪೀಟ್ ಮಾಡುತ್ತಿದೆ. ಇದರಿಂದ ಲಜ್ಜೆಗೊಳಗಾದ ವಧು, ಅರ್ಜೆಂಟಾಗಿ ಗಿಣಿಯ ಬಾಯಲ್ಲಿಡಲು ಏನಾದರೂ ಇದೆಯೋ ಹುಡುಕುತ್ತಾಳೆ. ಸಿಗಬೇಕಲ್ಲ! ಬುದ್ಧಿವಂತೆ, ಕಿವಿಯೋಲೆಯಲ್ಲಿರುವ ಪದ್ಮರಾಗ ಹರಳನ್ನು ದಾಳಿಂಬೆ ಬೀಜವೋ ಎಂಬಂತೆ ಗಿಣಿಯ ಬಾಯಲ್ಲಿ ತುರುಕಿ ಸುಮ್ಮನಾಗಿಸುತ್ತಾಳೆ. ಹಿರಿಯರು ಈಕೆ ದಾಳಿಂಬೆಯನ್ನೇ ಇಕ್ಕಿದ್ದಾಳೆಂದು ಭ್ರಮಿಸಬೇಕು!
ಹಾಗೆ ಹಿರಿಯರ ಮುಂದೆ ನಾಚಿಕೊಳ್ಳುವಂಥ ಯಾವ ಮಾತುಗಳನ್ನು ಅವರು ಆಡಿಕೊಂಡಿರಬಹುದು, ನೀವೇ ಊಹಿಸಿ!

-ಹರಿಹರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement