ಕಾಡಿನ ರಾಜನ ನ್ಯಾಯ
ಒಮ್ಮೆ ಕಾಡಿನ ರಾಜ ಸಿಂಹಕ್ಕೆ ತುಂಬಾ ಬೇಸರವಾಗಿತು. ಬೇಸರ ಕಳೆಯಲು ಪ್ರಾಣಿಗಳನ್ನೆಲ್ಲ ಒಂದು ಕಡೆ ಸೇರಿಸಿತು. 'ಪ್ರತಿಯೊಬ್ಬರೂ ಒಂದೊಂದು ಜೋಕ್ ಹೇಳಬೇಕು. ಆ ಜೋಕು ಕೇಳಿ ಎಲ್ಲರೂ ನಗಬೇಕು. ಯಾರೇ ಒಬ್ಬ ನಗದಿದ್ದರೂ ಜೋಕ್ ಹೇಳಿದವನಿಗೆ ಶಿಕ್ಷೆಯಾಗುತ್ತದೆ' ಎಂದು ತಾಕೀತು ಮಾಡಿತು. ಮೊದಲಿಗೆ ಸಿಂಹ ಜೋಕ್ ಹೇಳಲು ಮಂಗನನ್ನು ಆಹ್ವಾನಿಸಿತು.ಮಂಗ ಎಲ್ಲರ ಮುಂದೆ ನಿಂತು ತನ್ನ ಚೇಷ್ಟೆಯೊಂದಿಗೆ ಜೋಕ್ ಹೇಳಿತು. ಎಲ್ಲರೂ ಬಿದ್ದು ಬಿದ್ದು ನಕ್ಕರು. ಕತ್ತೆ ಮಾತ್ರ ನಗಲಿಲ್ಲ. ಕೋಪಗೊಂಡ ರಾಜ ಮಂಗ (ಕಪಿ)ನಿಗೆ ಕಠಿಣವಾದ ಶಿಕ್ಷೆ ವಿಧಿಸಿದ.
'ಈಗ ನರಿ ಜೋಕ್ ಹೇಳಲಿ' ಎಂದು ಸಿಂಹರಾಜ ಆದೇಶವಿತ್ತ. ನರಿ ಭಯದಿಂದಲೇ ಬಂದು ನಿಂತು ಯೋಚಿಸತೊಡಗಿತು. ಸ್ವಲ್ಪ ಹೊತ್ತಾದ ಮೇಲೆ ಕತ್ತೆ ಜೋರಾಗಿ ನಗಲು ಪ್ರಾರಂಭಿಸಿತು.
ಇನ್ನೂ ಜೋಕ್ ಹೇಳಲೇ ಇಲ್ಲ, ಏಕೆ ನಗುವೆ? ಎಂದು ಸಿಂಹರಾಜ ಕೇಳಿದ.
ನನಗೆ ಈಗ ಮಂಗನ ಜೋಕ್ ಅರ್ಥವಾಯಿತು ಎಂದಿತು ಕತ್ತೆ.ಟಿ
= ಡಿ. ಗುರುಮಲ್ಲಪ್ಪ, ದೊಡ್ಡಪುರ