ಫಸ್ಚ್ವೋಟ್
ಹಿಂದೆ ಇದ್ದ ರಾಜಕೀಯ ಇಂದು ಬದಲಾಗಿ ಅರಾಜಕೀಯ ಆಗಿಬಿಟ್ಟಿದೆ. ಎಲ್ಲೆಲ್ಲೂ ಹೆಣ್ಣು, ಹೊನ್ನು, ಮಣ್ಣಿಗಾಗಿ ತಮ್ಮ ವೋಟನ್ನು ಮಾತ್ರವಲ್ಲ ತಮ್ಮನ್ನೇ ಮಾರಿಕೊಳ್ಳಲೂ ರೆಡಿಯಾಗಿಬಿಟ್ಟಿದ್ದಾರೆ ಈ ನಮ್ಮ ಜನ. ನನಗೂ ಮೊದಲು ಈ ಅರಾಜಕೀಯವನ್ನು ನೋಡಿ ನೋಡಿ ಸಾಕಾಗಿ ವೋಟರ್ ಐ.ಡಿ ಪಡೆಯೋದೆ ಬೇಡ ಎಂದುಕೊಂಡು ಸುಮ್ಮನೆ ಕೂತಿದ್ದೆ. ಆದ್ರೇ ಹೀಗೆ ಎಷ್ಟು ದಿನಾ ಅಂತಾ ಕೈ ಚೆಲ್ಲಿ ಕೂರೋದು? ಬದಲಾವಣೆ ಅನ್ನೋದು ಈ ಜಗದ ನಿಯಮ ಅಲ್ವಾ? ಹಾಗಾಗಿ ಈ ಬಾರಿ ಈ ದೇಶವನ್ನ, ಅರಾಜಕತೆಯನ್ನ ಬದಲಾವಣೆ ಮಾಡೋ ನಾಯಕನನ್ನ ಆರಿಸಬೇಕು ಅಂತ ತೀರ್ಮಾನಿಸಿ ವೋಟರ್ ಐ.ಡಿ ಮಾಡಿಸಿ ಮೊಟ್ಟಮೊದಲ ಬಾರಿಗೆ ಮತ ಚಲಾಯಿಸುತ್ತಿದ್ದೇನೆ. ಈ ನನ್ನ ಮೊದಲ ಮತ ದೇಶದ ಮುಂದಿನ ಭವಿಷ್ಯವನ್ನು ರೂಪಿಸುವಂತಾಗಲಿ. ನಿಮ್ಮೆಲ್ಲರಿಗೂ ನಾನು ಹೇಳೋದು ಇಷ್ಟೆ. ಯಾರು ಈ ದೇಶದ ಗೌರವಕ್ಕಾಗಿ, ಅಭಿವೃದ್ಧಿಗಾಗಿ ಶ್ರಮಿಸಲು ಸಿದ್ಧರಾಗಿದ್ದಾರೋ ಅಂಥವರಿಗೆ ಮತ ಹಾಕಿ.
-ನಂದಳ್ಳಿ ಸುನಿ, ಬಿ.ಎಡ್, ವಿದ್ಯಾರ್ಥಿನಿ. ಮಂಡ್ಯ,
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.