ವೀಣಾವಾದನ
ಶ್ರೀ ರಾಮೋತ್ಸವದ ಅಂಗವಾಗಿ ಎನ್.ಆರ್. ಕಾಲೊನಿ ಶ್ರೀರಾಮ ಮಂದಿರವು ಡಾ. ಸುಮಾ ಸುಧೀಂದ್ರ ಅವರ ವೀಣಾವಾದನವನ್ನು ಏರ್ಪಡಿಸಿದೆ. ಏಪ್ರಿಲ್ 15ರಂದು ಶ್ರೀರಾಮ ಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಸುಮಾ ಸುಧೀಂದ್ರ ಅವರಿಗೆ ಸಾಥ್ ನೀಡುವವರು- ವಯೋಲಿನ್ನಲ್ಲಿ ಎನ್.ಎನ್. ಗಣೇಶ್ಕುಮಾರ್, ಮೃದಂಗದಲ್ಲಿ ಆನೂರು ಅನಂತಕೃಷ್ಣ ಶರ್ಮಾ, ಘಟಂನಲ್ಲಿ ಎಸ್.ಎನ್. ನಾರಾಯಣಮೂರ್ತಿ.
ದಿನಾಂಕ: 15.04.2014, ಸಮಯ: ಸಂಜೆ 6.30, ಸ್ಥಳ: ಶ್ರೀರಾಮ ಮಂದಿರ, ಮೊದಲನೇ ಮುಖ್ಯರಸ್ತೆ, ಎನ್.ಆರ್. ಕಾಲೋನಿ, ಬಸವನಗುಡಿ, ಬೆಂಗಳೂರು-560004.
ವ್ಯಂಗ್ಯಚಿತ್ರ ಪ್ರದರ್ಶನ
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕಾರ್ಟೂನಿಸ್ಚ್ಸ್ ಅವರು ಹಿರಿಯ ವ್ಯಂಗ್ಯಚಿತ್ರಕಾರ ರಂಜನ್ ಸೋಮಯ್ಯ ಅವರ ರಾಜಕೀಯದ ಈಗಿನ ಚುನಾವಣೆಯನ್ನು ವಿಮರ್ಶಿಸುವ ವ್ಯಂಗ್ಯಚಿತ್ರಗಳ ಪ್ರದರ್ಶನವನ್ನು ಪ್ರಾರಂಭಿಸಿದ್ದಾರೆ. ಈ ಪ್ರದರ್ಶನ ಏಪ್ರಿಲ್ 12 ರಿಂದ ಪ್ರಾರಂಭವಾಗಿದ್ದು ಏಪ್ರಿಲ್ 26ರವರೆಗೂ ಪ್ರದರ್ಶಿಸಲ್ಪಡುತ್ತದೆ. ಅಲಯನ್ ಫ್ರಾಂಸಿಸ್ಕೋದ ಚಿರಂಜೀವಿ ಸಿಂಗ್ ಅವರು ಮತ್ತು ಹಿರಿಯ ಕಲಾವಿದ ಬಾಲನ್ ನಂಬಿಯಾರ್ ಅವರು ಈ ಪ್ರದರ್ಶನಕ್ಕೆ ಸಾಕ್ಷಿಯಾಗಿದ್ದಾರೆ. ಭಾನುವಾರಗಳನ್ನು ಬಿಟ್ಟು ಮಿಕ್ಕದಿನಗಳಲ್ಲಿ ಆಸಕ್ತರು ವೀಕ್ಷಿಸಬಹುದಾಗಿದೆ. ಸ್ಥಳ- ಇಂಡಿಯನ್ ಕಾರ್ಟೂನ್ ಗ್ಯಾಲರಿ, ಮಿಡ್ಫೋಡರ್ ಗಾರ್ಡನ್, ಬಿಗ್ ಕಿಡ್ಸ್ಕೆಂಪ್ ಹತ್ತಿರ, ಟ್ರಿನಿಟಿ ಸರ್ಕಲ್, ಎಂ.ಜಿ.ರಸ್ತೆ, ಬೆಂಗಳೂರು.ಟಿ
-ವೀಣಾವಾದನ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.