ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಫಸ್ಟ್‌ವೋಟ್

Lingaraj Badiger
Updated On : 15 Apr 2014, 5:00 am

ಮೊದಲನೆ ಬಾರಿಗೆ ಮತದಾನ ಮಾಡಲು ಹೋದ ನನ್ನ ಅನುಭವ ವಿಶೇಷವಾದ್ದು. ಮೊದಲ ಮತದಾನದ ದಿನ ಅಲ್ಲಿನ ಭದ್ರತಾ ವ್ಯವಸ್ಥೆ, ವಾತಾವರಣ ಎಲ್ಲವೂ ಹೊಸ ಅನುಭವ. ಮತ ಹಾಕಿ ಹೊರಬಂದಾಗ ನಾನು ಒಬ್ಬ ಹೆಮ್ಮೆಯ ಭಾರತೀಯ ಎಂಬ ಭಾವನೆ! ಮೊದಲ ಬಾರಿಯ ವೋಟಿಂಗ್ ಜಸ್ಟ್ ಒಂದು ಥ್ರಿಲ್ ಎಂಬಂತಿತ್ತು. ಆಗ  ರಾಜಕೀಯದ ವಿಷಯಗಳಲ್ಲಿ ಆಸಕ್ತಿ ತೋರಿರಲಿಲ್ಲ. ಆದರೆ ಈ ಬಾರಿ ಒಬ್ಬ ಅಭ್ಯರ್ಥಿಯನ್ನು ನಾನು ಆಯ್ಕೆ ಮಾಡಬೇಕಾದ ಏನೆಲ್ಲಾ ತಿಳುವಳಿಕೆ ಹಾಗೂ ಜವಾಬ್ದಾರಿ  ಇರಬೇಕು ಎಂಬುದನ್ನು ಅರಿತಿದ್ದೇನೆ.  ಅಭ್ಯರ್ಥಿಗಳ, ಪಕ್ಷಗಳ,  ಈ ಹಿಂದಿನ ಸಾಧನೆಗಳನ್ನು, ಕೆಲಸಗಳನ್ನು ಮತ್ತು ಅವರ ನಾಯಕತ್ವ ಗುಣಗಳನ್ನು ತಿಳಿದುಕೊಳ್ಳುತ್ತಿದ್ದೇನೆ. ನಾನು  ನನ್ನ ಆಯ್ಕೆಯ ಅಭ್ಯರ್ಥಿಗೆ ಮತ ಹಾಕಿದಾಗ ಬೆರಳಿಗೆ ಇಂಕ್ ಬೀಳುತ್ತೆ. ಆದರೆ ಅದು ಯಾವತ್ತೂ ನಮ್ಮ ಮುಖಕ್ಕೆ ಅಂಟಿಕೊಂಡ ಮಸಿಯಂತಾಗಬಾರದು ಎಂಬ ಅರಿವಿನೊಂದಿಗೆ ಸೂಕ್ತ ಅಭ್ಯರ್ಥಿಗೆ ಮತ ನೀಡುತ್ತಿದ್ದೇನೆ.
- ಸುಕೇಶ್.ಎಸ್.ಸಿ
ಚಾರ್ಟರ್ಡ್ ಅಕೌಂಟಿಂಗ್ ವಿದ್ಯಾರ್ಥಿ, ಮೈಸೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments