ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ವೋಟಿಂಗ್ ಸ್ಟಾರ್

Lingaraj Badiger
Updated On : 15 Apr 2014, 5:01 am

ನಿಜ ಹೇಳಬೇಕಂದ್ರೆ ನನಗೆ ರಾಜಕೀಯ ವಿಷಯಗಳ ಬಗ್ಗೆ ಆಸಕ್ತಿ ಕಮ್ಮಿ. ಆದರೆ ಅದರರ್ಥ ದೇಶದ ಬಗ್ಗೆ ಕಾಳಜಿ ಅಥವಾ ಜವಾಬ್ದಾರಿ ಇಲ್ಲ ಅಂತಲ್ಲ. ಇಲ್ಲಿನ ವೃತ್ತಿಪರತೆ ಇಲ್ಲದ  ಸ್ವಾರ್ಥ ರಾಜಕಾರಣದ ಬಗ್ಗೆ ಬೇಸರವಿದೆ. ಸಿನಿಮಾ ರಂಗದ ವ್ಯಕ್ತಿಗಳೂ ರಾಜಕೀಯ ಪ್ರವೇಶಿಸಿರುವುದು ನನ್ನ ಮಟ್ಟಿಗೆ ಒಂದು ಕುತೂಹಲ ಹುಟ್ಟಿಸಿದೆ. ಅದು ಸೋಲುಗೆಲುವಿನ ಬಗೆಗೆ ಮಾತ್ರವಲ್ಲ. ಚುನಾವಣೆಯ ನಂತರ ಅವರ ನಡೆ ಹೇಗಿರುತ್ತದೆ ಎಂಬುದನ್ನು ಗಮನಿಸುವ ಆಸಕ್ತಿ. ನನಗೆ ವೈಯಕ್ತಿಕವಾಗಿ ಯಾವ ಮಹಾನ್ ಸಮಸ್ಯೆಗಳೂ ಇಲ್ಲದಿರಬಹುದು. ಆದರೆ ಸಾಮಾಜಿಕವಾಗಿ ಇಲ್ಲಿ ಬಹಳಷ್ಟು ಸಮಸ್ಯೆಗಳಿವೆ. ಅವುಗಳಿಗೂ ನನಗೂ ಸಂಬಂಧವಿದೆ. ಆ ಕಾರಣಕ್ಕಾಗಿ ನಾನು ಜನಪ್ರತಿನಿಧಿಗಳನ್ನು ಪ್ರಶ್ನಿಸಬೇಕಿದೆ. ಹಾಗೆ ಪ್ರಶ್ನಿಸಲು ನಾನು ನನ್ನ ಮತದಾನದ ಕರ್ತವ್ಯವನ್ನು ನಿಭಾಯಿಸಬೇಕಿದೆ. ಇದನ್ನು ಹಕ್ಕು ಅಂದುಕೊಳ್ಳೋದಕ್ಕಿಂತ ಕರ್ತವ್ಯ ಎಂದುಕೊಂಡು ಎಲ್ಲರೂ ಮತದಾನ ಮಾಡಬೇಕಿದೆ. ಯಾಕಂದ್ರೆ ಇಲ್ಲಿ ನಮ್ಮ ಹಕ್ಕುಗಳ ಬಗೆಗೆ ನಮಗೆ ನಿರ್ಲಕ್ಷ್ಯ ಹೆಚ್ಚು. ಕಡ್ಡಾಯವಾದಾಗಲೇ ಎಲ್ಲರೂ ತಮ್ಮ ಕೆಲಸವನ್ನು ಮಾಡುವುದು. ನನ್ನ ಪ್ರಕಾರ ರಕ್ತದಾನ, ಅನ್ನದಾನ, ನೇತ್ರದಾನ ಇವೆಲ್ಲವುಗಳಷ್ಟೇ ಶ್ರೇಷ್ಠತೆ ಮತದಾನಕ್ಕೂ ಇದೆ. ಆದರೆ ಇದರ ಪಾವಿತ್ರತೆಯನ್ನು ಮತದಾರರು ಮಾತ್ರ ಅರಿತರೆ ಸಾಲದು, ರಾಜಕಾರಣಿಗಳೂ ಅರಿಯಬೇಕು. ವಾರ್ತಾವಾಹಿನಿಗಳಲ್ಲಿ ಈ ನಾಯಕರ ಕಚ್ಚಾಟ ನೋಡಿದರೆ ಅಸಹ್ಯವಾಗುತ್ತದೆ. ತಮ್ಮ ಸಾಧನೆಗಳ ಬಗ್ಗೆ, ತಮ್ಮ ಮುಂದಿನ ಯೋಜನೆಗಳ ಬಗ್ಗೆ ಮಾತಾಡುವ ಬದಲು ಪರಸ್ಪರ ದೂಷಣೆಯಲ್ಲೇ ಇವರು ಕಾಲ ಕಳೆಯುತ್ತಿರೋದು ದುರದೃಷ್ಟಕರ. ಇಂಥವರಿಂದ ದೇಶದ ಅಭಿವೃದ್ಧಿ ನಿರೀಕ್ಷಿಸೋದಾದರೂ ಹೇಗೆ ಎಂಬ ಆತಂಕವಿದೆ. ಆದರೂ ನಾವು ಯುವಜನತೆ ಮತದಾನದಿಂದ ವಿಮುಖರಾಗಕೂಡದು. ನಾನು ಹದಿನೇಳಕ್ಕೆ ಊರಿಗೆ ಹೋಗೋದಿದೆ. ಆದರೆ ವೋಟ್ ಮಾಡಿದ ನಂತರವೇ ನನ್ನ ಪಯಣ.
-ಕಾವ್ಯಾ ಶಾ  
ಚಲನಚಿತ್ರ ಹಾಗೂ ಕಿರುತೆರೆ ನಟಿ,  ನೃತ್ಯಪಟು, ಕಂಠದಾನ ಕಲಾವಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement