ಪ್ರಧಾನಿಯೇ ಸರಿ
ದೇಶದ ಅಭಿವೃದ್ಧಿಯ ಒಳಿತಿಗಾಗಿ, ಭ್ರಷ್ಟತೆ ಹೋಗಲಾಡಿಸಿ ಸುಭದ್ರತೆಯ ಸರ್ಕಾರ ರಚಿಸಲು, ನವ ಭಾರತವನ್ನು ನಿರ್ಮಿಸಲು ನಾವು ಪ್ರಧಾನಿಯನ್ನು ಪರಿಗಣಿಸಿ ಮತ ಹಾಕುವುದೇ ಒಳಿತು. ಒಂದು ಮನೆಗೆ ಉತ್ತಮ ಯಜಮಾನನಿದ್ದಂತೆ ನಮ್ಮ ದೇಶಕ್ಕೆ ಆಧಾರ ಸ್ತಂಭ ಪ್ರಧಾನಿ. ಸ್ಥಳೀಯ ಅಭ್ಯರ್ಥಿಯನ್ನು ಪರಿಗಣಿಸಿದರೆ ಕೇವಲ ಕ್ಷೇತ್ರದ ಯಾವುದೋ ಒಂದು ಭಾಗದಲ್ಲಿ ಅಥವಾ ಯಾವುದೋ ಒಂದು ಪಂಗಡಕ್ಕೆ ಮಾತ್ರ ಒಳಿತಾಗಬಹುದೇ ವಿನಃ ಎಲ್ಲರಿಗೂ ಅಲ್ಲ. ಅದೇ ಉತ್ತಮ ಪ್ರಧಾನಿ ಅಭ್ಯರ್ಥಿಯನ್ನು ಪರಿಗಣಿಸಿ ಆಯ್ಕೆ ಮಾಡಿ ದರೆ ಸಮಸ್ತ ದೇಶ ಸುಭದ್ರವಾಗುವುದು ಹಾಗೂ ಅಭಿವೃದ್ಧಿಯಾಗುವುದು.
-ಶುಭಾ. ಆರ್, ಉಂಗ್ರ, ಕುಣಿಗಲ್
ಸ್ಥಳೀಯ ಅಭ್ಯರ್ಥಿಯ ಆಯ್ಕೆ ಆಗಲಿ
ನಾವು ಹಾಕುವ ಒಂದು ಮತದಿಂದ ದೇಶದ ಪ್ರಧಾನಿಯನ್ನು ಆಯ್ಕೆ ಮಾಡಬಹುದು ಅಂತಹ ಹಕ್ಕು ನಮಗಿದೆ. ಆದರೆ ಅದನ್ನು ದುರುಪಯೋಗ ಅಥವಾ ವ್ಯರ್ಥ ಮಾಡಿಕೊಳ್ಳಬಾರದು. ಕೇಂದ್ರ ಸರ್ಕಾರದಿಂದ ಕ್ಷೇತ್ರಕ್ಕೆ ಬಿಡುಗಡೆಯಾಗುವ ಹಣವನ್ನು ತೆಗೆದುಕೊಂಡು ಸದುಪಯೋಗವಾಗುವಂತೆ ಉಪಯೋಗಿಸುವ ಸ್ಥಳೀಯ ಅಭ್ಯರ್ಥಿ ಬೇಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸ್ಥಳೀಯ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ಹಹಿಸಬೇಕು. ಇದರಿಂದ ನಮ್ಮ ಕ್ಷೇತ್ರ ಹಾಗೂ ದೇಶ ಎರಡೂ ಅಭಿವೃದ್ಧಿಯಾಗುವುದು ಖಚಿತ. ಪ್ರಧಾನಿಯು ತೇರಾದರೆ, ಅಭ್ಯರ್ಥಿಯು ಆ ರಥವನ್ನು ಎಳೆಯುವ ಹಗ್ಗವಾಗಿದ್ದಾರೆ ಅದನ್ನ ಜಾಗರೂಕತೆಯಿಂದ ಎಳೆಯುವ ಸಾಮರ್ಥ್ಯ ಮತದಾರನಿಗೆ ಇರಬೇಕು.
-ವಿಜಯಕುಮಾರ್, ಬೊಮ್ಮನಕಟ್ಟೆ
ಸ್ಥಳೀಯರ ಆಯ್ಕೆ ಮುಖ್ಯ
ಈ ಚುನಾವಣೆಯಲ್ಲಿ ಒಂದು ಪುಟ್ಟ ಗ್ರಾಮದ ಸಮಸ್ಯೆಯನ್ನು ಲೋಕಸಭೆಯಲ್ಲಿ ಚರ್ಚೆ ಮಾಡಲು ಮುಖ್ಯವಾಗಿ ಸ್ಥಳೀಯ ವ್ಯಕ್ತಿ ಬೇಕು. ಪ್ರಧಾನವಾಗಿ ನಮಗೆ ಬೇಕಾಗಿರುವುದು ಸ್ಥಳೀಯ ಸಮಸ್ಯೆಗಳನ್ನು ಅರಿತು ಅವುಗಳಿಗೆ ಪರಿಹಾರವನ್ನು ಹುಡುಕುವ ವ್ಯಕ್ತಿ. ಈ ಉದ್ದೇಶದಿಂದ ಸ್ಥಳೀಯವಾಗಿ ಉತ್ತಮ ವ್ಯಕ್ತಿಯನ್ನು ಪರಿಗಣಿಸುವುದು ಮುಖ್ಯವಾಗುತ್ತದೆ. ಗ್ರಾಮೀಣ ಜನರ ಸಮಸ್ಯೆಯನ್ನು ಅರಿತು. ಅವರ ಬೇಡಿಕೆಗಳು ಏನು ಎಂದು ತಿಳಿದು ಅವುಗಳನ್ನು ಪರಿಹರಿಸುವಂತಹ ಚಾಣಾಕ್ಷ ಸ್ಥಳೀಯ ಅಭ್ಯರ್ಥಿಯ ಆಯ್ಕೆಯಾಗಬೇಕಿದೆ. ಅದನ್ನು ಬಿಟ್ಟು ಪ್ರಧಾನಿ ಅಭ್ಯರ್ಥಿಗೆ ಮಾನ್ಯತೆ ನೀಡಿದರೆ ನಮ್ಮ ಸಮಸ್ಯೆಗೆ ಅವರ ಬಳಿ ಹೋಗಿ ಹೇಳುವುದಾದರೂ ಸಾಧ್ಯವೇ?
-ಚಳ್ಳಕೆರೆ ವೀರೇಶ್
'ಜಗುಲಿ'ಯಲ್ಲಿ ಈ ಸಲದ ವಿಷಯ 'ಪೂರ್ಣ ಬಹುಮತದ ಸರ್ಕಾರ ಒಳ್ಳೆಯದೋ? ಸಮ್ಮಿಶ್ರ ಸರ್ಕಾರ ಒಳ್ಳೆಯದೋ?' ಈ ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: ಛಟಿಜ್ಞಛಛಿಣ2ಅ್ಜಟಛ್ಝಟ.್ಛ್ಟಟ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.