ನ್ಯಾನೋ ಕತೆಗಳು
ಕಾಲೇಜಿನಲ್ಲಿ ಜಿರಳೆ, ಕಪ್ಪೆಗಳನ್ನು ಕೊಯ್ದು ಪಾಠ ಮಾಡುವ ಪ್ರೊಫೆಸರ್ 'ಪ್ರಾಣಿದಯಾ ಸಂಘ'ದ ಅಧ್ಯಕ್ಷರೂ ಆಗಿದ್ದರು!
ಕುರಿ, ಕೋಳಿಗಳನ್ನು ಕೊಂದು ಅಡುಗೆ ಮಾಡಿ ಮಾರುವ ಹೋಟೆಲ್ನ ಹೆಸರು 'ಪ್ರೀತಿ ಹೋಟೆಲ್'!
ಬದುಕಿದ್ದಾಗ ತನ್ನ ತಾಯಿಗೆ ತಿನ್ನಲು ಸರಿಯಾಗಿ ಕೊಡದೆ ಆಕೆ ಸತ್ತಳು. ಸತ್ತ ಮೇಲೆ ತಿಥಿಗೆ ವಿವಿಧ ಭಕ್ಷ್ಯಗಳನ್ನು ಮಾಡಿದ್ದರು.
'ಅಹಿಂಸಾ ತತ್ವ'ವನ್ನು ನಂಬಿದ ವನೊಬ್ಬ ಸೊಳ್ಳೆಯನ್ನೂ ಹೊಡೆಯದೇ ಹಾಗೇ ಬಿಟ್ಟ. ಕೆಲವು ದಿನಗಳಲ್ಲಿ 'ಡಂಗ್ಯೂ ಜ್ವರ' ದಿಂದ ಸತ್ತ.
ತಾಯಿಯೇ ಪ್ರತ್ಯಕ್ಷ ದೇವರು ಎಂದು ಹಲವೆಡೆ ಉಪನ್ಯಾಸ ಮಂಡಿಸಿ ಹೆಸರಾಗಿದ್ದ ಉಪನ್ಯಾಸಕರ ತಾಯಿ ವೃದ್ಧಾಶ್ರಮದಲ್ಲಿದ್ದಳು.
-ಕೃಷ್ಣಮೂರ್ತಿ ಎಚ್.ಆರ್. ತುಮಕೂರು
ಇದೊಂದು ವರ್ಷ ಚೆನ್ನಾಗಿ ಓದು ಮುಂದಿನ ವರ್ಷ ಆರಾಮವಾಗಿ ಪಾಸ್ ಆಗಬಹುದು ಎಂದು
ಅವರಮ್ಮ ಕಳೆದ ಆರು ವರ್ಷದಿಂದ ಹೇಳುತ್ತಿದ್ದರು.
- ಪ್ರಕಾಶ್ ಮರಗಾಲ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.