ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಯಾಕೆ ಕಚ್ಚುತ್ತಿರುವೆ?

ಅವರು ಸಾಮಗರು. ಹಾಗೆಂದರೆ ಗೊತ್ತಲ್ಲ, ಸಾಮವೇದವನ್ನು ಅರೆದು ಕುಡಿದ ಪಂಡಿತರು. ವೈದಿಕ ಕ್ರಿಯಾವಿಧಿಗಳ ವೇಳೆ...

Rashmi Kasaragodu
Updated On : 22 Apr 2014, 1:41 am

ಅವರು ಸಾಮಗರು. ಹಾಗೆಂದರೆ ಗೊತ್ತಲ್ಲ, ಸಾಮವೇದವನ್ನು ಅರೆದು ಕುಡಿದ ಪಂಡಿತರು. ವೈದಿಕ ಕ್ರಿಯಾವಿಧಿಗಳ ವೇಳೆ ಸಾಮಗಾನವನ್ನು ಹಾಡುವುದಕ್ಕೆ ಅವರೇ ಆಗಬೇಕು. ಇನ್ನೂ ತರುಣ. ಪಾಪ, ಸಾಮಗಾನ ಬಿಟ್ಟರೆ, ಲೌಕಿಕವಾದ ಸಂಗತಿಗಳನ್ನು ಇನ್ನೂ ಕಲಿಯಬೇಕಷ್ಟೇ. ಇಂಥವನಿಗೆ ಮದುವೆ ನಿಕ್ಕಿಯಾಯಿತು.
ಸಾಮವೇದಿಗೆ ಪಾಪ, ಪ್ರಣಯಕಲೆ ಕೂಡ ಹೊಸತು. ವಧುವಾದರೋ ಸ್ವಲ್ಪ ಪಳಗಿದವಳೇ. ಮದುವೆ ಮಂಟಪದಲ್ಲೂ ಜೋರಾಗಿಯೇ ಇದ್ದಳು. ಈತನಿಗೇನೇನೂ ಗೊತ್ತಿಲ್ಲ ಎಂಬುದು ಆಕೆಗೆ ಗೊತ್ತಾದದ್ದೇ ತಡ, ಪ್ರಸ್ತದ ಮಂಚದಲ್ಲೂ ತಾನೇ ಸೈನ್ಯವನ್ನು ಮುನ್ನಡೆಸಲು ಮುಂದಾದಳು. ಆಕೆಯ ಉತ್ಸಾಹ ಉದ್ರೇಕಗಳನ್ನು ಕಂಡು ತರುಣ ಪಂಡಿತ ತಬ್ಬಿಬ್ಬಾದ. ಹೇಳಿದ:

ಸಾಮಗಾಯನಪೂತಂ ಮೇ
ನೋಚ್ಛಿಷ್ಟಮಧರಂ ಕುರು
ಉತ್ಕಂಠಿತಾಪಿ ಚೇದ್ ಭದ್ರೇ
ವಾಮಂ ಕರ್ಣಂ ದಶಸ್ವ ಮೇ

ಎಲೆ ತರುಣಿ, ನನ್ನ ತುಟಿಗಳನ್ನು ಯಾಕೆ ಕಚ್ಚುತ್ತಿರುವೆ? ಅವು ಸಾಮಗಾನವನ್ನು ಕಲಿತು, ಮನನ ಮಾಡಿ, ಹಾಡಿ ಪವಿತ್ರವಾಗಿರುವ ತುಟಿಗಳು. ಅವುಗಳನ್ನು ಮಲಿನ ಮಾಡಬೇಡ. ಕಚ್ಚಲೇಬೇಕೆಂದು ತೀಟೆಯಾಗುತ್ತಿದ್ದರೆ ಇಕೋ, ನನ್ನ ಎಡದ ಕಿವಿಯನ್ನು ಬೇಕಾದಷ್ಟು ಕಚ್ಚಿಕೋ!
ಅಮಾಯಕ ಪಂಡಿತ, ಪವಿತ್ರವಾದದ್ದನ್ನೆಲ್ಲ ಮಲಿನ ಮಾಡುವುದೇ ಸುರತಕೇಳಿಯ ಉದ್ದೇಶ ಎಂಬುದು ಅವನಿಗೆ ಗೊತ್ತಿಲ್ಲ. ನವವಧು ಆತನಿಗೆ ಆಮೇಲೆ ಹೇಳಿಕೊಟ್ಟಿರಬಹುದು ಬಿಡಿ.


ಹರಿಹರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement