ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಡಿವಿಡಿ ಬಿಡುಗಡೆ

ಬೆಟ್ಟದ ಜೀವ, ಭಾರತ್ ಸ್ಟೋರ್ಸ್, ಕೂರ್ಮಾವತಾರ ಮತ್ತು ಸರಸಮ್ಮನ ಸಮಾಧಿ ಈ ನಾಲ್ಕು ಚಲನಚಿತ್ರಗಳ...

Rashmi Kasaragodu
Updated On : 25 Apr 2014, 3:22 am

ಬೆಟ್ಟದ ಜೀವ, ಭಾರತ್ ಸ್ಟೋರ್ಸ್, ಕೂರ್ಮಾವತಾರ ಮತ್ತು ಸರಸಮ್ಮನ ಸಮಾಧಿ ಈ ನಾಲ್ಕು ಚಲನಚಿತ್ರಗಳ ಡಿವಿಡಿಯನ್ನು 'ಟೋಟಲ್ ಕನ್ನಡ' ಹೊರತಂದಿದೆ. ಸಮಾರಂಭದ ಮುಖ್ಯ ಅತಿಥಿಯಾಗಿ ವಾರ್ತಾ ಇಲಾಖೆ ನಿರ್ದೇಶಕ ಎನ್. ಆರ್. ವಿಶುಕುಮಾರ್. ಗಿರೀಶ್ ಕಾಸರವಳ್ಳಿ, ಪಿ. ಶೇಷಾದ್ರಿ, ಬಸಂತ್ ಕುಮಾರ್ ಪಾಟೀಲ್, ಕುಂ. ವೀರಭದ್ರಪ್ಪ, ಕೆ.ಎನ್.ಟಿ. ಶಾಸ್ತ್ರಿ, ಎಚ್.ಜಿ. ದತ್ತಾತ್ರೇಯ ಉಪಸ್ಥಿತರಿರುವರು. 26-04-2014, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ಸಭಾಂಗಣ, ಬಿ.ಪಿ ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು - 560004. ಮಾಹಿತಿಗೆ: 9986222402.

ಸೂರ್ಯಾಸ್ತ ನಾಟಕ
ಅಂತರಂಗ ಅಭಿನಯಿಸುವ 2014ರ ಹೊಸ ನಾಟಕ 'ಸೂರ್ಯಾಸ್ತ'. ಜಯವಂತ ದಳ್ವಿ ಅವರ ಮರಾಠಿ ಮೂಲದ ಕಥೆಯನ್ನು ಕನ್ನಡಕ್ಕೆ ಶಾ. ಮಂ. ಕೃಷ್ಣರಾಯ ಅವರು ತಂದಿದ್ದಾರೆ. ಅರ್ಚನಾ ಶ್ಯಾಂ ನಿರ್ದೇಶನದ ಈ ನಾಟಕ ಪ್ರದರ್ಶನ ಏಪ್ರಿಲ್ 27 ರಂದು ಸಂಜೆ: 7-00ಕ್ಕೆ. ಸ್ಥಳ: ಪರಂಪರ, ನಂ.8, 8ನೇ ಅಡ್ಡರಸ್ತೆ, 3ನೇ ಮುಖ್ಯರಸ್ತೆ, ಚನ್ನಮ್ಮನಕರೆ ಅಚ್ಚುಕಟ್ಟು, ಬನಶಂಕರಿ 3ನೇ ಹಂತ. ಬೆಂಗಳೂರು. ವಿವರಗಳಿಗೆ- 9880914509 ಮತ್ತು 9886624687.

ಖಾಲಿ ಶಿಲುಬೆ ಬಿಡುಗಡೆ
ಚಕ್ರವರ್ತಿ ಚಂದ್ರಚೂಡ್ ರಚಿಸಿದ 'ಯಾವ ಗೋರಿಯ ಮೇಲೆ ಅರಳಿದ ಹೂವಿಗೂ ಹೆಣದ ವಾಸನೆ ಇರುವುದಿಲ್ಲ' ಇಂತಹ ಪದ್ಯಗಳನ್ನೊಳಗೊಂಡ 'ಖಾಲಿ ಶಿಲುಬೆ'(ಪಾಪಿಯೊಬ್ಬನ ಪ್ರೇಮ ಪದ್ಯಗಳು) ಏಪ್ರಿಲ್ 27 ರಂದು ಸಂಜೆ 4.30ಕ್ಕೆ ಸಲಾಫಿ, ಕವ್ವಾಲಿ, ಹಿಂದೂಸ್ಥಾನಿ ಖ್ಯಾತ ಗಾಯಕ ಹರಿಕೃಷ್ಣ ಪಾವಾಜೀ ಗಾಯನ, ಬೊಳುವಾರು ಮಹಮ್ಮದ್ ಕುಂಞ ಿ ಅವರಿಂದ ಬಿಡುಗಡೆ. ಅತಿಥಿಗಳಾಗಿ ಸಮರ್ ಚಿತ್ ಲಂಕೇಶ್, ಛೋಟಾ ಉಸ್ತಾದ್, ಹಿಂದೂಸ್ಥಾನಿ ಗಾಯಕ ಸಮೀರ್ ಆತ್ರೇಯ. ಸ್ಥಳ: ಜಿಂಕೆ ಪಾರ್ಕ್ ಪಕ್ಕದ ರುದ್ರಭೂಮಿ, ಟಿ.ಆರ್. ಮಿಲ್ ಬಳಿ, ಚಾಮರಾಜಪೇಟೆ, ಬೆಂಗಳೂರು.


ರಂಗಶಂಕರದಲ್ಲಿ ಕಿತ್ತಳೆಮನೆ ಕಾವೇರಿ
ಕ್ರಿಯೇಟಿವ್ ಥಿಯೇಟರ್ ಪ್ರಸ್ತುತಪಡಿಸುತ್ತಿರುವ, 'ಕಿತ್ತಳೆಮನೆ ಕಾವೇರಿ' ಸಿಂಗಪುರದ  ಸುಪ್ರಸಿದ್ಧ ಲೇಖಕಿ, ಸ್ಟೆಲ್ಲಾ ಕಾನ್‌ರ 'ಎಮಿಲಿ ಆಫ್ ಎಮರಲ್ಡ್ ಹಿಲ್‌' ನಾಟಕದ ಕನ್ನಡ ಅನುವಾದ. ಕೊಡವ ಸಂಸ್ಕೃತಿ ಹಿನ್ನೆಲೆಯಲ್ಲಿ ರಚಿಸಲಾಗಿರುವ 'ಕಿತ್ತಳೆಮನೆ ಕಾವೇರಿ' ನಾಟಕವನ್ನು ಲಕ್ಷ್ಮಿ ಚಂದ್ರಶೇಖರ್ ರಚಿಸಿ ಅಭಿನಯಿಸುವರು. ಸೌಮ್ಯ ವರ್ಮ ನಿರ್ದೇಶನ. 26-04-2014, ಸಂಜೆ 3.30ಕ್ಕೆ, ರಂಗಶಂಕರದಲ್ಲಿ. ಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement