ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಸ್ನಾನ ಮಾಡುವ ಕಾರು

ಬೇಸಿಗೆಯಲ್ಲಿ ಮನುಷ್ಯನಿಗೆ ಸ್ನಾನ ಮಾಡಲಿಕ್ಕೇ ನೀರಿರುವುದಿಲ್ಲ. ಇನ್ನು ಸ್ವಂತ ಕಾರಿದ್ದರೆ, ಅದನ್ನು ಶುಚಿಗೊಳಿಸುವುದು ..

Rashmi Kasaragodu
Updated On : 27 Apr 2014, 4:24 am

ಬೇಸಿಗೆಯಲ್ಲಿ ಮನುಷ್ಯನಿಗೆ ಸ್ನಾನ ಮಾಡಲಿಕ್ಕೇ ನೀರಿರುವುದಿಲ್ಲ. ಇನ್ನು ಸ್ವಂತ ಕಾರಿದ್ದರೆ, ಅದನ್ನು ಶುಚಿಗೊಳಿಸುವುದು ಹೇಗೆ? ಗ್ಲಾಸೆಲ್ಲ ಧೂಳೆದ್ದು ಹೋಗಿದೆ, ಬಾನೆಟ್ಟಂತೂ ಹಕ್ಕಿಗಳ ಪಿಕ್ಕೆಯಿಂದ ಗಲೀಜೆದ್ದು ಹೋಗಿದೆ. ಒಂದು ಬಕೆಟ್ ನೀರನ್ನು ಯಾರ ಮನೆಯಿಂದ ತರೋದು?
ಬಿರು ಬೇಸಿಗೆಯಲ್ಲಿ ನಗರಗಳ ಕಾರು ಮಾಲೀಕರೆಲ್ಲ ಇದೇ ತಲೆಬಿಸಿಯಲ್ಲಿರುತ್ತಾರೆ. ಇವತ್ತು ಗಾಡಿ ವಾಶ್ ಮಾಡೇ ಇಲ್ಲ ಅಂತ ಕೊರಗುತ್ತಾರೆ. ಕೆಲವರಿಗೆ ಸ್ನಾನ ಮಾಡುವುದೇ ಉದಾಸೀನದ ಕೆಲಸ. ಇನ್ನು ವಾಹನಗಳನ್ನು ತೊಳೆಯುವ ಮಾತೆಲ್ಲಿ?
ಈಗ ಬ್ಯುಸಿ ಮತ್ತು ಲೇಝಿ ಜನರ ಮುಖವರಳುವ ಸಂದರ್ಭ ಕೂಡಿಬಂದಿದೆ. ನಿಸ್ಸಾನ್ ಕಾರು ಕೊಂಡರೆ ತೊಳೆಯುವ ಕೆಲಸವೇ ಇಲ್ಲ! ಕಾರನ್ನು ಎಲ್ಲೇ ಕೊಂಡೊಯ್ದರೂ ಶುಭ್ರವಾಗಿರುತ್ತದೆ. ಆಗಷ್ಟೇ ಶೋ ರೂಂನಿಂದ ಬಂದ ಗಾಡಿಯಂತೆ ಥಳಥಳಿಸುತ್ತದೆ. ಹಾಗಾದರೆ, ಈ ಕಾರಿನ ಸೀಕ್ರೆಟ್ ಏನು ಎಂಬ ಪ್ರಶ್ನೆಯೇ?
ತುಂಬಾ ಸಿಂಪಲ್, ನಿಸ್ಸಾನ್ ಕಾರು ತಾನಾಗಿಯೇ ಶುಭ್ರವಾಗುತ್ತದೆ! ಇದು ತನ್ನ ಬಾಡಿಯನ್ನು ತಾನೇ ತೊಳೆದುಕೊಳ್ಳುತ್ತದೆ. ಅಂದಹಾಗೆ, ಜಗತ್ತಿನಲ್ಲೇ ಮೊದಲ ಬಾರಿಗೆ ಇಂಥ ಕಾರನ್ನು ಪರಿಚಯಿಸಲಾಗಿದೆ. ಈ ಕೀರ್ತಿ ಜಪಾನೀಸ್ ಕಾರಾದ ನಿಸ್ಸಾನ್‌ಗೆ ಸಲ್ಲುತ್ತದೆ.
ನಿಸ್ಸಾನ್ ಕಾರಿನಲ್ಲಿ ನ್ಯಾನೋ ಬಣ್ಣದ ತಂತ್ರಜ್ಞಾನ ಬಳಸಲಾಗಿದೆ. ಸೂಪರ್ ಹೈಡ್ರೋಫೋಬಿಕ್ ಮತ್ತು ಒಲಿಯೋಫೋಬಿಕ್ ಪೇಂಟ್ ಬಳಸುವುದರಿಂದ ನೀರು ಮತ್ತು ಎಣ್ಣೆಯಂಶ ವಿಕರ್ಷಿಸುತ್ತದೆ. ಹಾಗಾಗಿ ಎಷ್ಟೇ ಕೆಸರಾದರೂ ತಾನಾಗಿಯೇ ಶುಭ್ರವಾಗುತ್ತದೆ. 'ಸುಂದರ್‌ಲ್ಯಾಂಡ್ ಬಿಲ್ಟ್ ನಿಸ್ಸಾನ್‌' ಹೇಳುವಂತೆ ಅಕ್ಟೋಬರ್ ವೇಳೆಗಿದು ಭಾರತಕ್ಕೆ ಕಾಲಿಡಲಿದೆಯಂತೆ. ಹೀಗಾಗಿ, ಈ ಬೇಸಿಗೆಯನ್ನು ಹೇಗಾದರೂ ಕಷ್ಟಪಟ್ಟು ಕಳೆದು, ಮುಂದಿನ ಬೇಸಿಗೆ ನಿಸ್ಸಾನ್ ಜೊತೆ ಆಚರಿಸಿ. ಈ ಸ್ವಯಂ ಸ್ವಯಂ ಸ್ವಚ್ಛತಾ ಕಾರಿನ ಆರಂಭದ ಬೆಲೆ: 7.20 ಲಕ್ಷ ರುಪಾಯಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement