ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಈಕೆ ಬ್ರಹ್ಮಸೃಷ್ಟಿಯೆ?

ಪುರಾಣಿಕರು (ಪುರಾಣ ಕಥೆ ಹೇಳುವವರು) ತಮ್ಮ ಮುಂದೆ ನೆರೆದ ಭಕ್ತಾದಿಗಳಿಗೆ ಭಾರಿ ಉತ್ಸಾಹದಲ್ಲಿ ಸೃಷ್ಟಿ ಪುರಾಣವನ್ನು...

Rashmi Kasaragodu
Updated On : 28 Apr 2014, 2:53 am

ಪುರಾಣಿಕರು (ಪುರಾಣ ಕಥೆ ಹೇಳುವವರು) ತಮ್ಮ ಮುಂದೆ ನೆರೆದ ಭಕ್ತಾದಿಗಳಿಗೆ ಭಾರಿ ಉತ್ಸಾಹದಲ್ಲಿ ಸೃಷ್ಟಿ ಪುರಾಣವನ್ನು ವಿವರಿಸುತ್ತಿದ್ದರು. ಆದಿಮಾಯೆ, ಆಕೆಯಿಂದ ಉದಿಸಿದ ತ್ರಿಮೂರ್ತಿಗಳು, ಮೂವರಿಗೂ ಕಾರ್ಯಗಳ ಹಂಚಿಕೆ, ನಂತರ ಅವರ ವಾಗ್ವಾದ. ಬ್ರಹ್ಮನ ಸೃಷ್ಟಿಯ ಕಾರ್ಯವನ್ನು ಪುರಾಣಿಕರು ವಿವರವಾಗಿಯೇ ವರ್ಣಿಸಿದರು. ಕೋಟ್ಯಂತರ ಸಸ್ಯಜಾತಿಗಳು, ಲಕ್ಷಾಂತರ ಪ್ರಾಣಿಜಾತಿಗಳು, ಸಾವಿರಾರು ದೇವತೆಗಳು ಎಲ್ಲವೂ ಸೃಷ್ಟಿಯಾದವು.
ಅಷ್ಟರಲ್ಲಿ ಅಲ್ಲಿಗೆ ಪುರಾಣಿಕರ ಮಗಳು ಬರಬೇಕೆ? ಆಕೆಯೋ ಅಮಿತ ಸೌಂದರ್ಯವತಿ. ಅವಳನ್ನು ನೋಡಿ ಮೊದಲೇ ಚಿತ್ತದಲ್ಲಿ 'ಚಿತ್‌' ಆಗಿದ್ದ ತರುಣನೊಬ್ಬ ಕೂತಲ್ಲೇ ಕವಿತೆ ರಚಿಸಿಬಿಟ್ಟ.  

ಅಧರದ್ಯುತಿರಸ್ತಪಲ್ಲವಾ ಮುಖಶೋಭಾ ಶಶಿಕಾಂತಿಲಂಘಿನೀ
ತನುರಪ್ರತಿಮಾ ಚ ಸುಭ್ರುವೋ ನ ವಿಧೇರಸ್ಯ ಕೃತಿಂ ವಿವಕ್ಷತಿ

ಆಹಾ, ಈ ತರುಣಿಯ ತುಟಿಗಳ ಚೆಲುವು ಎಳೆಯ ಮಾವಿನ ಚಿಗುರುಗಳನ್ನು ಮೀರಿಸುವಂತಿದೆ. ಇವಳ ಮುಖದ ಕಾಂತಿಯನ್ನು ನೋಡಿ ಚಂದ್ರನೇ ಮುಖ ಮುಚ್ಚಿಕೊಂಡಿದ್ದಾನೆ. ಸುಂದರ ಹುಬ್ಬುಗಳು ಬಿಲ್ಲಿನಂತಿವೆ. ಈಕೆಯ ಶರೀರವನ್ನು ಶ್ಲಾಘಿಸಲು ಸೃಷ್ಟಿಯಲ್ಲಿ ತುಲನೆ ಮಾಡಬಹುದಾದ ಸಂಗತಿಗಳೇ ಇಲ್ಲ. ಹಾಗಾಗಿ ಈಕೆಯ ಸೃಷ್ಟಿಯನ್ನು ಬ್ರಹ್ಮನು ಮಾಡಿರಲಿಕ್ಕಿಲ್ಲ!
ಬ್ರಹ್ಮನು ಮಾಡಿರಲಾರ ಯಾಕೆಂದರೆ, ತನ್ನ ಸೃಷ್ಟಿಯನ್ನು ನಾಚಿಸುವ ಇನ್ನೊಂದು ಸೃಷ್ಟಿಯನ್ನು ಅವನಾದರೂ ಮಾಡಲು ಹೇಗೆ ಸಾಧ್ಯ? ಆದ್ದರಿಂದ ಈಕೆಯನ್ನು ಮನ್ಮಥನೋ ವಸಂತನೋ ಜಯಂತನೋ ಸೃಷ್ಟಿ ಮಾಡಿರಬೇಕು ಎಂಬುದೇ ಇಲ್ಲಿನ ತಾತ್ಪರ್ಯ. ಹೀಗೆ ಬ್ರಹ್ಮಸೃಷ್ಟಿಯ ಪುರಾಣಿಕರ ಪುಂಗಿ ಅವರ ಮಗಳಿಂದಲೇ ಬಂದ್ ಆಯ್ತು.ಟಿ


-ಹರಿಹರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement