ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಬಹುಮತದ ಸರ್ಕಾರ ಒಳ್ಳೆಯದು

ನಮ್ಮ ದೇಶದಲ್ಲಿ ಇದುವರೆಗೂ ಆಳ್ವಿಕೆ ಸಮ್ಮಿಶ್ರ ಸರ್ಕಾರದಲ್ಲಿ ಕಾಣಿಸಿಕೊಂಡ ಬಿರುಕುಗಳನ್ನು ಗಮನಿಸಿದಾಗ ಪೂರ್ಣ...

Rashmi Kasaragodu
Updated On : 28 Apr 2014, 2:52 am

ನಮ್ಮ ದೇಶದಲ್ಲಿ ಇದುವರೆಗೂ ಆಳ್ವಿಕೆ ಸಮ್ಮಿಶ್ರ ಸರ್ಕಾರದಲ್ಲಿ ಕಾಣಿಸಿಕೊಂಡ ಬಿರುಕುಗಳನ್ನು ಗಮನಿಸಿದಾಗ ಪೂರ್ಣ ಬಹುಮತದ ಸರ್ಕಾರವಿರುವುದೇ ಉತ್ತಮವೆನಿಸುತ್ತದೆ. ಏಕೆಂದರೆ ಒಂದೇ ಪಕ್ಷ ಬಹುಮತ ಪಡೆದಲ್ಲಿ ಹೊಂದಾಣಿಕೆಯ ಕೊರತೆಯಿರದು. ಎಲ್ಲರೂ ಒಂದೆಡೆ ಸೇರಿ ಪರಿಸ್ಥಿತಿಗೆ ಪರಿಹಾರ ಕಂಡುಕೊಳ್ಳಬಲ್ಲರು. ಸಮ್ಮಿಶ್ರವಾದಲ್ಲಿ ಒಂದೊಂದು ಪಕ್ಷದ್ದು ಒಂದೊಂದು ಸಿದ್ಧಾಂತ ಹೀಗಾಗಿ ಸಮನ್ವಯದ ಕೊರತೆಯಿಂದ ಆಡಳಿತ ನಡೆಸುವಲ್ಲಿ ಅನೇಕ ಎಡರು ತೊಡರುಗಳು ಸಂಭವಿಸುತ್ತವೆ. ಇವಲ್ಲವನ್ನು ಗಮನಿಸಿದಾಗ ಪೂರ್ಣ ಬಹುಮತದ ಸರ್ಕಾರವೇ ಒಳ್ಳೆಯದು ಅನಿಸದೇ ಇರದು.
ಟವೈ. ಬಿ. ಕಡಕೋಳ, ಮುನವಳ್ಳಿ
ಬಹುಮತದವಿಲ್ಲದ ಸರ್ಕಾರಕ್ಕೆ ಉಳಿಗಾಲವಿಲ್ಲ
ಸಮ್ಮಿಶ್ರ ಸರ್ಕಾರಗಳು ಜನರ ಭರವಸೆ ಕಳೆದುಕೊಂಡಿವೆ. ದೇಶದಲ್ಲಿ ಇದುವರೆಗೆ ಅನೇಕ ಸಮಿಶ್ರ ಸರ್ಕಾರಗಳು ಆಡಳಿತ ನಡೆಸಿವೆಯಾದರೂ ಯಾವ ಸರ್ಕಾರವೂ ಸುಲಲಿತವಾಗಿ ಆಡಳಿತ ನಡೆಸಿದ ಉದಾಹರಣೆಗಳಿಲ್ಲ. ಇದು ದೇಶದ ಆಂತರಿಕ ವ್ಯವಸ್ಥೆಗೆ ಧಕ್ಕೆ ತರುವುದು. ಕೇವಲ ತಮ್ಮ ಪಕ್ಷದ ಮತ್ತು ರಾಜ್ಯದ ಹಿತಾಸಕ್ತಿ ಕಾಪಾಡಲು ದೇಶದ ಮತ್ತು ರಾಜ್ಯದ ಹಿತ ಬಲಿ ಕೊಡುವ ಸಂದರ್ಭ ಎದುರಾಗುತ್ತದೆಯಾಗಲಿ ಯಾವುದೇ ತರಹದ ಅಭಿವೃದ್ಧಿ ಕೆಲಸಗಳು ಆಗುವುದಿಲ್ಲ. ಬಹುಮತದ ಸರ್ಕಾರವಿಲ್ಲದಿದ್ದರೆ ಪಕ್ಷಗಳು ವ್ಯವಸ್ಥೆಯ ಮೇಲೆ ದಬ್ಬಾಳಿಕೆ ನಡೆಸುತ್ತವೆ. ಕಾರಣ ತಮ್ಮ ಸ್ವಾರ್ಥಕ್ಕಾಗಿ ಆಡಳಿತವನ್ನು ಪತನಗೊಳಿಸಿ ಮರು ಚುನಾವಣೆಗೆ ಅನುವು ಮಾಡಿಕೊಡುತ್ತದೆ. ಇದರಿಂದ ಶ್ರೀಸಾಮಾನ್ಯರ ಮೇಲೆ ಚುನಾವಣೆಯ ಹೊರೆ ಬೀಳುತ್ತದೆ.
ಟರಮೇಶ. ಎಸ್. ಎಂ, ಗುಲ್ಬರ್ಗಾ
ಏಕಪಕ್ಷ ಸರ್ಕಾರ ಕನಸಿನ ಮಾತು
ಕೇಂದ್ರದಲ್ಲಿ ಐದು ವರ್ಷ ಸಶಕ್ತವಾಗಿ ಸರ್ಕಾರ ನಡೆಸುವಂತಾಗಲು ಸಮ್ಮಿಶ್ರ ಸರ್ಕಾರದಿಂದಲೇ ಸಾಧ್ಯ. ಆದರೆ ಇಲ್ಲಿರುವವರು ತಮ್ಮ ಕಾಲಾವಧಿಯಲ್ಲಿ ದೇಶಕ್ಕೆ ಹಾಗೂ ಜನಕ್ಕೆ ತಮ್ಮ ಕೈಲಾದ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಡುತ್ತೇವೆ ಎಂಬ ಧೈಯವನ್ನು ಹೊಂದಿರಬೇಕು. ಇದಲ್ಲದೇ ಒಂದೇ ಪಕ್ಷಕ್ಕೆ ಬಹುಮತ ನೀಡಿದಲ್ಲಿ ಯಾರದೆ ಲಂಗು ಲಗಾಮಿಲ್ಲದೆ ಏಕಪಕ್ಷೀಯ ತೀರ್ಮಾನ ತೆಗೆದುಕೊಳ್ಳುವ ಸಂಭವಗಳೇ ಜಾಸ್ತಿ. ಗಟ್ಟಿಯಾದ ವಿರೋಧ ಪಕ್ಷದ ಅವಶ್ಯಕತೆ ತುಂಬಾ ಇರುತ್ತದೆ. ಯಾವುದೇ ಒಂದು ಪಕ್ಷ ಈಗ ಅವಶ್ಯ ಮ್ಯಾಜಿಕ್ ನಂಬರ್-272 ಗಳಿಸುವುದೇ ಕಷ್ಟವೆನಿಸಿದೆ. ಲಂಚಕೋರ ಸರ್ಕಾರಗಳು ನಮಗೆ ಬೇಡವೇ ಬೇಡ. ಸುಭದ್ರ ಹಾಗೂ ನೆಮ್ಮದಿ ನೀಡುವಂತಹ ಸರ್ಕಾರದ ಅವಶ್ಯಕತೆಯಿದೆ.
ಟರೊ. ಡಾ. ಡಿ. ಎಸ್. ವಿಜಯಕುಮಾರ್, ಹಾಸನ


'ಜಗುಲಿ'ಯಲ್ಲಿ ಈ ಸಲದ ವಿಷಯ 'ಪೂರ್ಣ ಬಹುಮತದ ಸರ್ಕಾರ ಒಳ್ಳೆಯದೋ? ಸಮ್ಮಿಶ್ರ ಸರ್ಕಾರ ಒಳ್ಳೆಯದೋ?' ಈ ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement