ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ತ್ಯಾಗದ ಸೋಗಿಗೆ ತಲೆಬಾಗದ ಮುಂಗುಸಿ

ತ್ಯಾಗ ಎಂದರೆ ಏನು ಎಂಬುದನ್ನು ಸ್ವಾಮಿ ವಿವೇಕಾನಂದರು ದೃಷ್ಟಾಂತದ ಮೂಲಕ ಹೃದಯಂಗಮವಾಗಿ ಹೇಳುತ್ತಾರೆ...

Rashmi Kasaragodu
Updated On : 30 Apr 2014, 3:01 am

ತ್ಯಾಗ ಎಂದರೆ ಏನು ಎಂಬುದನ್ನು ಸ್ವಾಮಿ ವಿವೇಕಾನಂದರು ದೃಷ್ಟಾಂತದ ಮೂಲಕ ಹೃದಯಂಗಮವಾಗಿ ಹೇಳುತ್ತಾರೆ.
ಒಂದು ಕಾಡಿನಲ್ಲಿ ಮುಂಗುಸಿಯೊಂದು ವಾಸವಾಗಿತ್ತು. ಅದರ ಶರೀರದ ಅರ್ಧಭಾಗ ಹೊಂಬಣ್ಣವೂ, ಇನ್ನರ್ಧಭಾಗ ಕಂದುಬಣ್ಣವೂ ಆಗಿತ್ತು. ಮುದುಕನೊಬ್ಬ ಆ ಮುಂಗುಸಿಯನ್ನು ನೋಡಿ, ಇದೇಕೆ ಹೀಗೆ? ಎಂದು ಕೇಳಿದ. ಆಗ ಮುಂಗುಸಿ, ನಿಸ್ವಾರ್ಥದಿಂದ ಮಹಾತ್ಯಾಗ ಮಾಡಿದ ಸ್ಥಳದಲ್ಲಿ ಹೊರಳಾಡಿದ್ದರಿಂದ ನನ್ನ ದೇಹದ ಅರ್ಧಭಾಗ ಹೊಂಬಣ್ಣವಾಗಿದೆ. ಇನ್ನರ್ಧ ಹೊಂಬಣ್ಣವಾಗಿಸಲು ಅಂತಹ ಸ್ಥಳಕ್ಕಾಗಿ ಹುಡುಕುತ್ತಿದ್ದೇನೆ ಎಂದಿತು. ತಕ್ಷಣ ಮುದುಕ, ಮಹಾಭಾರತ ಯುದ್ಧ ಮುಗಿದಿದೆ. ಪಾಂಡವರು ದಯಾಶೀಲರಾಗಿ ತಮ್ಮ ರಾಜ್ಯದ ಬಡವರಿಗೆಲ್ಲ ತಮಗೇನೂ ಇಟ್ಟುಕೊಳ್ಳದೆ ನೀಡಿದ್ದಾರೆ. ಅವರು ನಿಜವಾಗಿಯೂ ನಿಸ್ವಾರ್ಥಿಗಳು, ಮಹಾತ್ಯಾಗಿಗಳು. ಇಂತಹ ಮಹಾತ್ಯಾಗವನ್ನು ಜಗತ್ತು ಹಿಂದೆಂದೂ ಕಂಡಿಲ್ಲ  ಎಂದನು. ಕೂಡಲೇ ಮುಂಗುಸಿಯು ಆ ಮುದುಕನೊಡನೆ ಆ ಮಹಾಸ್ಥಳಕ್ಕೆ ನಡೆಯಿತು. ಇದು ಅಂತಹ ದೊಡ್ಡ ತ್ಯಾಗವೇನು? ಈಗ ಅವರಿಗೆ ಏನೂ ಉಳಿದಿಲ್ಲವೇನು? ಇದು ನಿಜವಾದರೆ ನಾನು ಈ ನೆಲದ ಮೇಲೆ ಹೊರಳಾಡಿದ ಬಳಿಕ ನನ್ನ ಶರೀರದ ಉಳಿದರ್ಧ ಭಾಗವೂ ಹೊಂಬಣ್ಣವಾಗುವುದು ಎಂದು ಹೇಳಿದ ಮುಂಗುಸಿ ನೆಲದ ಮೇಲೆ ಹೊರಳಾಡಿತು. ಆದರೆ ಅದರ ಮೈಬಣ್ಣದಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ. ಅರ್ಧ ಕಂದುಬಣ್ಣ ಹಾಗೆಯೇ ಇತ್ತು. ಆಗ ಮುಂಗುಸಿಯು, ಇದು ತ್ಯಾಗವೇ ಅಲ್ಲ ಎಂದುಬಿಟ್ಟಿತು. ಆಶ್ಚರ್ಯಗೊಂಡ ಮುದುಕ ಕುತೂಹಲಿಯಾಗಿ, ಹಾಗಾದರೆ ನಿನ್ನ ದೇಹದ ಅರ್ಧ ಭಾಗ ಹೊಂಬಣ್ಣವಾಗಲು ಕಾರಣವಾದ ಆ ಮಹಾತ್ಯಾಗ ಯಾವುದು? ಎಂದು ಕೇಳಿದ...

-ಆನಂದ ಎಸ್.ಎನ್.
anandsn193@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement