ಬನ್ನಿಮಂಟಪ
ಶ್ರೀ ಸದ್ಗುರು ಮ್ಯೂಜಿಕ್ ಅಕಾಡೆಮಿಯ ವತಿಯಿಂದ 'ಶತಗಾಯನ ಸಂಗೀತೋತ್ಸವ' ಫೆಬ್ರವರಿ 9ರಂದು ನಡೆಯುತ್ತಿದೆ.
ಜಯನಗರದ ಶ್ರೀ ಶಿವರಾತ್ರೀಶ್ವರ ಕೇಂದ್ರದಲ್ಲಿ ಸಂಜೆ 5.30ಕ್ಕೆ ರಾಗಮಾಲಿಕೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಪ್ರಾರಂಭ. ಪೇಜಾವರ ವಿಶ್ವೇಶತೀರ್ಥ ಶ್ರೀಪಾದರು ಮತ್ತು ರವಿಶಂಕರ ಗುರೂಜಿ ಅವರ ದಿವ್ಯ ಸಾನಿಧ್ಯ. ನಾಡೋಜ ಪ್ರೊ.ಜಿ. ವೆಂಕಟಸುಬ್ಬಯ್ಯ, ಶರಣಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೊ.ರು. ಚನ್ನಬಸಪ್ಪ ಮತ್ತು ಹಿಂದೂಸ್ತಾನಿ ಗಾಯಕ ಪರಮೇಶ್ವರ ಹೆಗಡೆ ಉಪಸ್ಥಿತಿ, ಪಂ.ಸತೀಶ್ ಹಂಪಿಹೊಳಿ ಅಧ್ಯಕ್ಷತೆ. ಕಾರ್ಯಕ್ರಮದ ಆಕರ್ಷಣೆ ನೂರು ಕಲಾವಿದರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಹನ್ನೊಂದು ರಾಗಗಳ ಪ್ರಸ್ತುತಿ. ರಾಗಮಾಲಿಕೆಯ ಪರಿಕಲ್ಪನೆ ಮತ್ತು ನಿರ್ದೇಶನ ಸ್ನೇಹಾ ಹಂಪಿಹೊಳಿ.
ಸಂಗೀತ ಸಂಸ್ಥೆಗಳಾದ ಸದ್ಗುರು ಮ್ಯೂಜಿಕ್ ಅಕಾಡೆಮಿ, ಶ್ರೀರಾಮ ಭಕ್ತಾನುಗ್ರಹ ಸಂಗೀತ ವಿದ್ಯಾಲಯ, ಸ್ವರ ಸಂಗೀತಾಲಯ ಮತ್ತು ಗುರುಕುಮಾರ ಪಂಚಾಕ್ಷರೇಶ್ವರ ಸಂಗೀತ ಕಲಾವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿವೆ. ಪೂರ್ಣಾ ಆಚಾರ್ ನಿರ್ದೇಶನದಲ್ಲಿ ಅಲಂಕೃತಾ ನೃತ್ಯ ತಂಡದವರಿಂದ ನೃತ್ಯರೂಪಕ ನಡೆಯಲಿದೆ. (ಸಂಪರ್ಕ: 9845196382).
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.