ಹಿನ್ನುಡಿ
ಇದೀಗ ನನ್ನ ಮನೆಯ ಮುಂದೆ ನೂರಾರು ಜನ ಜಮಾಯಿಸಿದ್ದಾರೆ. ಅಳುತ್ತಿರುವ ನನ್ನ ಮಕ್ಕಳನ್ನು, ತಂದೆ- ತಾಯಿಯನ್ನು ಸಂತೈಸುತ್ತಿದ್ದಾರೆ...
ಇದೀಗ ನನ್ನ ಮನೆಯ ಮುಂದೆ ನೂರಾರು ಜನ ಜಮಾಯಿಸಿದ್ದಾರೆ. ಅಳುತ್ತಿರುವ ನನ್ನ ಮಕ್ಕಳನ್ನು, ತಂದೆ- ತಾಯಿಯನ್ನು ಸಂತೈಸುತ್ತಿದ್ದಾರೆ. ತಂಡೋಪತಂಡವಾಗಿ ಊರಜನ ನನ್ನ ಮನೆಯತ್ತ ಬರುತ್ತಲೇ ಇದ್ದಾರೆ.
ಕಳೆದ ರಾತ್ರಿ ಹತ್ತು ಗಂಟೆಯ ಸಮಯದಲ್ಲಿ ಹೈವೇಯಲ್ಲಿ ಪ್ರಯಾಣಿಸುತ್ತಿದ್ದಾಗ ನನ್ನ ಬೈಕು ಟ್ರಕ್ಕೊಂದಕ್ಕೆ ಢಿಕ್ಕಿ ಹೊಡೆದು, ನಾನು ನೆಲಕ್ಕುರುಳಿದೆ. ಭಾರವಾದ ಬೈಕು, ನನ್ನ ಹೊಟ್ಟೆಯ ಮೇಲುರುಳಿ, ದೇಹದಿಂದ ಧಾರಾಕಾರವಾಗಿ ನೆತ್ತರು ಹರಿಯಿತು. ಜ್ಞಾನತಪ್ಪಿರ ಲಿಲ್ಲವಾದ್ದರಿಂದ 'ಸೇವ್ ಮೀ, ಸೇವ್ ಮೀ' ಎಂದು ಬೊಬ್ಬಿಡುತ್ತಿದ್ದೆ. ಸುತ್ತಮುತ್ತಲಿನ ಅಂಗಡಿ ಮುಂಗಟ್ಟಿನ ಜನ ಬಂದು ಸೇರಿದರು. ರಕ್ತ ಸಿಕ್ತವಾದ ನನ್ನ ಕೈಯಿಂದ ಕಿಸೆಯಲ್ಲಿದ್ದ ಸೆಲ್ಫೋನ್ಅನ್ನು ಹೊರತೆಗೆದು, ಸ್ನೇಹಿತನಿಗೆ ಕಾಲ್ ಮಾಡುವಂತೆ ಎದುರು ನಿಂತವನಲ್ಲಿ ಅಂಗಲಾಚಿದೆ. 'ಏಯ್, ಪೊಲೀಸ್, ಎನ್ಕ್ವೇರಿ ಅಂತೆಲ್ಲಾ ಕಿರಿಕಿರಿ ಬೇಡ, ಬಾ ಮಾರಾಯಾ' ಯಾರೋ ಗುಂಪಿನಲ್ಲಿ ರುವಾತ ಹೇಳಿದಾಗ, ಗೊಣಗುಟ್ಟುತ್ತಾ ಎಲ್ಲರೂ ಜಾಗ ಖಾಲಿ ಮಾಡಿದ್ದರು. ನಾನು ಯಮಯಾತನೆಯಿಂದ ನರಳಾಡುತ್ತಾ ಪ್ರಾಣಬಿಟ್ಟಿದ್ದೆ.
ಈಗ, ನೂರಾರು ಜನ ಸಂತಾಪ ಸೂಚಿಸಲು ಸೇರುವ ಬದಲು, ಕಳೆದ ರಾತ್ರಿ ಒಬ್ಬನಾದರೂ ನನ್ನನ್ನು ಮಾನವೀಯತೆಯಿಂದ ಆಸ್ಪತ್ರೆಗೆ ಕರೆದೊಯ್ದಿದ್ದರೆ, ನಾನು ಬದುಕು ಳಿಯುತ್ತಿದ್ದೆ. ಎಂದೂ ಸಾಯಲು ಬಯಸಿರಲ್ಲಿಲ್ಲ.
-ಕೇವೇಟಿ ಮೇಗೂರು
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.