ಕಾರಂಜಿ ಆರಂಭ
ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿಯೊಂದು ಆರಂಭವಾಗುತ್ತಿದೆ. ಸೋಮವಾರದಿಂದ ಶನಿವಾರ ವರೆಗೆ ಸಂಜೆ 6.30ಕ್ಕೆ ...
ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿಯೊಂದು ಆರಂಭವಾಗುತ್ತಿದೆ. ಸೋಮವಾರದಿಂದ ಶನಿವಾರ ವರೆಗೆ ಸಂಜೆ 6.30ಕ್ಕೆ ಪ್ರಾರಂಭವಾಗುವ ಈ ಧಾರಾವಾಹಿ ಹೆಸರುಯ 'ಕಾರಂಜಿ'. ಅನನ್ಯ ಮತ್ತು ದಾಮಿನಿ ಎನ್ನುವ ಹುಡುಗಿಯರ ಸುತ್ತ ಹೆಣೆದಿರುವ ಕಥೆ ಇದಾಗಿದ್ದು, ಎ.ಜಿ. ಶೇಷಾದ್ರಿ ಅವರ ನಿರ್ದೇನವಿದೆ. ಇವರು ಈ ಹಿಂದೆ ಡಾ.ರಾಜ್ಕುಮಾರ್ ಅಭಿನಯದ 'ಶಬ್ಧವೇದಿ' ಚಿತ್ರಕ್ಕೆ ಸಂಭಾಷಣೆ ಹಾಗೂ 'ಹೃದಯಾ ಹೃದಯಾ' ಚಿತ್ರಕ್ಕೆ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದರು. ತುಂಬಾ ವರ್ಷಗಳ ನಂತರ ಕಿರುತೆರೆಗೆ ಪ್ರವೇಶವಾಗುತ್ತಿದ್ದಾರೆ. ಈಗಾಗಲೇ ಮೂಡಿಬರುತ್ತಿರುವ ಹಲವು ಅತ್ಯುತ್ತಮ ಧಾರಾವಾಹಿಗಳ ಜೊತೆ 'ಕಾರಂಜಿ' ಕೂಡ ಒಂದಾಗಲಿದೆ ಎಂಬುದು ಸುವರ್ಣ ವಾಹಿನಿಯ ಬ್ಯುಸಿನೆಸ್ ಹೆಡ್ ಅನೂಪ್ ಶೇಖರನ್ ಮಾತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.