ಮೇಘ ಮಯೂರಿ
ಜೀ ಕನ್ನಡ ವಾಹಿನಿಯಲ್ಲಿ ಇತ್ತೀಚೆಗಷ್ಟೆ ಆರಂಭವಾದ 'ಮೇಘ ಮಯೂರಿ' ಧಾರಾವಾಹಿ ಕಿರುತೆರೆ ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಯಶಸ್ವಿಯಾಗಿದೆ...
ಜೀ ಕನ್ನಡ ವಾಹಿನಿಯಲ್ಲಿ ಇತ್ತೀಚೆಗಷ್ಟೆ ಆರಂಭವಾದ 'ಮೇಘ ಮಯೂರಿ' ಧಾರಾವಾಹಿ ಕಿರುತೆರೆ ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಯಶಸ್ವಿಯಾಗಿದೆ. ಗೋಕರ್ಣದ ಹುಡುಗಿ ಮೇಘ, ಬೆಂಗಳೂರಿನ ಬೆಡಗಿ ಮಯೂರಿ ನಡುವೆ ನಡೆಯುವ ಈ ಕಥೆ, ಸೋಮವಾರದಿಂದ ಶನಿವಾರದವರೆಗೆ ಪ್ರತಿ ದಿನ ರಾತ್ರಿ 7.30ಕ್ಕೆ ಪ್ರಸಾರವಾಗುತ್ತಿದೆ. ಈಗಾಗಲೇ ಜೀ ವಾಹಿನಿಯಲ್ಲಿ ಮೂಡಿ ಬರುವ ಹಲವು ಧಾರಾವಾಹಿಗಳ ನಡುವೆ 'ಮೇಘ ಮಯೂರಿ' ಟಿಆರ್ಪಿ ಏರಿಕೆಯಾಗಿದೆ. ಈ ಹಿಂದೆ 'ರಾಧಾ ಕಲ್ಯಾಣ' ಹಾಗೂ 'ಬಾ ನನ್ನ ಸಂಗೀತ' ಧಾರಾವಾಹಿಗಳಲ್ಲಿ ಕೆಲಸ ಮಾಡಿರುವ ತ್ರಿಶೂಲ್ 'ಮೇಘ ಮಯೂರಿ' ಧಾರಾವಾಹಿಯ ನಿರ್ದೇಶಕರು.
ಮೆಟ್ರೋ ಸಿಟಿಯಲ್ಲಿ ಬೆಳೆಯುವ ಇಬ್ಬರು ಹುಡುಗಿಯರ ಕಥೆಯನ್ನು ಇಟ್ಟುಕೊಂಡು ಮಾಡಿರುವ ಈ ಧಾರಾವಾಹಿಗೆ ಹಿಂದಿಯ 'ಸ್ವಪ್ನೆ ಸುಹಾನೆ ಲಡ್ಕೆ' ಎನ್ನುವ ಧಾರಾವಾಹಿ ಪ್ರೇರಣೆ. ಕಾರ್ತಿಕ್ ಇದಕ್ಕೆ ಕಥೆ ಹಾಗೂ ಚಿತ್ರಕಥೆ ಬರೆದಿದ್ದು, ಅಮೃತಾ ಹಾಗೂ ಹರ್ಷಿತಾ ಮುಖ್ಯಪಾತ್ರಧಾರಿಗಳಾಗಿದ್ದಾರೆ. ವಿಶೇಷ ಅಂದರೆ, 'ರಾಮಾಚಾರಿ' ಮತ್ತು 'ಯುಗಪುರುಷ' ಚಿತ್ರಗಳಲ್ಲಿ ನಟಿಸಿರುವ ಹಿರಿಯ ನಟಿ ಜ್ಯೋತಿ ಇಲ್ಲಿ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.