ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಅವಳ ಕಣ್ಸನ್ನೆ

Mainashree
Updated On : 18 Feb 2014, 12:45 pm

ಪ್ರೇಮಕ್ಕೆ ಅಡೆತಡೆಗಳಿವೆ. ಪ್ರೇಮ ಕುರುಡಾಗಿರಬಹುದು, ಆದರೆ ಪ್ರೇಮಿಗಳು ಬೇಲಿ ಹಾರುವಾಗ ಎಚ್ಚರಾಗಿಯೇ ಇರಬೇಕಾಗುತ್ತದೆ. ಪ್ರೇಮಿಗಳು ಭೇಟಿಯಾಗಲು ಇರುವ ಮೊದಲ ಅಡ್ಡಿಯೇ ಅವರ ಹೆತ್ತವರು. ಹರೆಯದ ಹುಡುಗಿಯನ್ನು ಆಕೆಯ ಅಪ್ಪ- ಅಮ್ಮ ಬಲು ಎಚ್ಚರದಿಂದ ಕಾಯುತ್ತಾರಾದರೂ, ಅವರ ಕಣ್ಣು ತಪ್ಪಿಸಿ ಜಿಗಿದು ಪಾರಾಗಲೂ ಹರೆಯ ಕಾತರಿಸುತ್ತಲೇ ಇರುತ್ತದೆ. ಅದಕ್ಕೆ ತಕ್ಕ ಉಪಾಯಗಳನ್ನೂ ಹುಡುಕಿಕೊಳ್ಳುತ್ತದೆ.  

ಗಚ್ಛೇತ್ಯುನ್ನತಯಾ ಭ್ರುವೈವ ಗದಿತಂ ಮಂದಂ ವಲಂತ್ಯಾ ತಥಾ
ತೇನಾಪ್ಯಂಚಿತಲೋಚನದ್ವಯಪುಟೇನಾಜ್ಞಾ ಗೃಹೀತಾ ಶನೈಃ
ಸಂಕೇತಾಯ ವಲದ್ದ ೃಶಾ ಪಿಶುನಿತಾ ಜ್ಞಾತಾ ಚ ದಿಕ್ಪ್ರೇಯಸಾ
ಗೂಢಃ ಸಂಗಮನಿಶ್ಚಯೋ ಗುರುಪುರೋಪ್ಯೇವಂ ಯುವಾಭ್ಯಾಂ ಕೃತಃ
ಹತ್ತಿರದಲ್ಲೇ ಗುರು ಹಿರಿಯರಿದ್ದಾರೆ. ಸರಸ ಸಲ್ಲಾಪಕ್ಕೆ ಅಲ್ಲಿ ಅವಕಾಶವಿಲ್ಲ. ಪ್ರಿಯತಮನಾದರೋ ಸ್ವಲ್ಪ ಅವಸರದವನು. ಮೇಲೆ ಬಿದ್ದು ಮಾತನಾಡಿಸಲು ಬರುತ್ತಾನೆ. ಆದರೆ ತರುಣಿ ಮರ್ಯಾದೆಗಂಜುವವಳು. ಹೀಗಾಗಿ ಆಕೆ ತನ್ನ ಕಣ್ಣಿನ ನೆಟ್ಟ ನೋಟ, ಹುಬ್ಬನ್ನು ಎತ್ತರಿಸಿ ಸಂಕೋಚಿಸುವ ಚಲನೆಯ ಮೂಲಕ ನಲ್ಲನಿಗೆ 'ಇಲ್ಲಿಂದ ಹೋಗು' ಎಂದಪ್ಪಣೆ ನೀಡಿದಳು. ಹಾಗೆ ಕಣ್ಸನ್ನೆ ಮಾಡುವಾಗಲೇ, ಯಾವ ದಿಕ್ಕಿಗೆ ಹೋಗಬೇಕೆಂಬುದನ್ನೂ ಕಣ್ಣೋಟದಿಂದಲೇ ಸೂಚಿಸಿದಳು. ಅವನು ಜಾಣ. ಆ ಸಂಕೇತವನ್ನು ಅರ್ಥ ಮಾಡಿಕೊಂಡು ಅಲ್ಲಿಂದ ತೆಪ್ಪಗೆ ತೆರಳುತ್ತಾನೆ. ಹೀಗೆ ಅವರಿಬ್ಬರೂ ಮತ್ತೆ ಭೇಟಿಯಾಗುವ ಗುಪ್ತಸ್ಥಾನವನ್ನು ಮಾತಿಲ್ಲದೆ ನಿಶ್ಚಯಿಸಿಕೊಳ್ಳುತ್ತಾರೆ.
ಬಾಯ್‌ಫ್ರೆಂಡ್ ಹೆಸರನ್ನು ಗೆಳತಿಯ ಹೆಸರಿನಲ್ಲಿ ಮೊಬೈಲ್‌ನಲ್ಲಿ ಸೇವ್ ಮಾಡಿಕೊಳ್ಳುವ ಹುಡುಗಿಯರು ಇದೇ ಕೆಟಗರಿಗೆ ಸೇರಿದವರು.

= ಹರಿಹರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments