ಗಮನವಿದ್ದರೆ ಗಾಯನ, ಇಲ್ಲದಿದ್ದರೆ ರೋದನ
ಮಾಡುವ ಕೆಲಸದ ಮೇಲೆ ಗಮನವಿಲ್ಲದಿದ್ದರೆ ಆಗುವ ಪರಿಣಾಮವನ್ನು ಈ ಗಾದೆ ವಿವರಿಸುತ್ತದೆ. ತರಗತಿಯಲ್ಲಿದ್ದಾಗ ಮನಸ್ಸಿಲ್ಲದಿದ್ದರೆ, ಪುರಾಣ ಕೇಳುವಾಗ ಗಮನ ಎಲ್ಲೋ ಇದ್ದರೆ, ಏನು ಪ್ರಯೋಜನ? ಅರ್ಥ ಮಾಡಿಕೊಳ್ಳುವ ಶಕ್ತಿಯಿಲ್ಲದವರ ಓದಿನಿಂದ, ಕೇಳಿಸಿಕೊಳ್ಳುವಿಕೆಯಿಂದ ಯಾವ ಪ್ರಯೋಜನವೂ ಆಗುವುದಿಲ್ಲ ಎನ್ನುತ್ತದೆ ಈ ಸಾರವಚನ.
- ಸಂಪಟೂರು