ನೃತ್ಯ - ಸ್ಪಂದನ
ಅಚ್ಚಿ ಶಾಸ್ತ್ರೀಯ ನೃತ್ಯ ಕೇಂದ್ರ ಸಹಯೋಗದೊಂದಿಗೆ, ಅಸ್ತಿತ್ವ 'ನೃತ್ಯ - ಸ್ಪಂದನ'ವನ್ನು ಫೆ.22ರಂದು ಬೆಂಗಳೂರಿನ ಗಾಯನ ಸಮಾಜದಲ್ಲಿ ಪ್ರಸ್ತುತಪಡಿಸುತ್ತಿದೆ. ಮುಖ್ಯ ಅತಿಥಿಯಾಗಿ ಹೋಲಿ ಕಾನ್ವೆಂಟ್‌ನ ಪ್ರಾಂಶುಪಾಲರಾದ ಶೋಭಾ ಸತೀಶ್, ಗೌರವ ಅತಿಥಿಯಾಗಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಅಶ್ವಿನ್ ಕಾರ್ತಿಕ್ .ಎಸ್. ಎನ್. ಭಾಗವಹಿಸಲಿದ್ದಾರೆ.
ಸ್ಥಳ: ಗಾಯನ ಸಮಾಜ, ಕೆ.ಆರ್. ರಸ್ತೆ, ಬೆಂಗಳೂರು. ಸಮಯ - ಸಂಜೆ 6 ಗಂಟೆಗೆ.
ಕ್ರಿಸ್ತ ಕಾವ್ಯ
ಶಿವಮೊಗ್ಗದ ಶ್ರೀವಿಜಯ ಕಲಾನಿಕೇತನ, ಬೆಂಗಳೂರಿನ ಆಕಾಶವಾಣಿ, ಅನನ್ಯ ಜಿ.ಎಂ.ಎಲ್. ಕಲ್ಚರಲ್ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ 'ಕ್ರಿಸ್ತ ಕಾವ್ಯ' (ಏಸು ಕ್ರಿಸ್ತನ ಜೀವನ- ಬೋಧನೆಗಳನ್ನು ಭರತನಾಟ್ಯ ಮತ್ತು ಕನ್ನಡ ಸಾಹಿತ್ಯಗಳ ಹಿನ್ನೆಲೆಯಲ್ಲಿ ಪರಿಶೋಧಿಸುವ ನೃತ್ಯರೂಪಕ)ವನ್ನು ಫೆ.23ರಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿದೆ. ಪರಿಕಲ್ಪನೆ ಮತ್ತು ನೃತ್ಯ ಪ್ರಸ್ತುತಿ - ಡಾ. ಕೆ.ಎಸ್. ಪವಿತ್ರ. ಸಾಹಿತ್ಯ ಕೃಪೆ ವಿಲಿಯಂ ಸಂಪಾದಿತ ಕ್ರಿಸ್ತಕಾವ್ಯ ಮತ್ತು ಡಾ. ಎ.ಜಿ. ಗೋಪಾಲಕೃಷ್ಣ ಕೊಳ್ತಾಯ.
ಸ್ಥಳ: ಸೇವಾಸದನ ರಂಗಮಂದಿರ, ಮಲ್ಲೇಶ್ವರ, ಬೆಂಗಳೂರು. ದಿನಾಂಕ: ಫೆ. 23ರಂದು ಸಮಯ: ಸಂಜೆ 6 ಗಂಟೆಗೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.