ರೇಷ್ಮೆ ಕಮಾಲ್!
ಇಲ್ಲಿಯ ತನಕ 'ರೇಷ್ಮೆಹುಳು'ಗಳನ್ನಷ್ಟೇ ಕೇಳಿದ್ದೀರಿ. 'ರೇಷ್ಮೆ ಬೆಡಗಿಯರು' ಬಹುಶಃ ನಿಮಗೆ ಗೊತ್ತಿಲ್ಲ. ಆ ಮಾಡೆಲ್ಗಳು ಮೈಮೇಲೆ ಹೊದ್ದಿದ್ದೆಲ್ಲ ರೇಷ್ಮೆ ವಸ್ತ್ರಗಳು. ಬೆಂಗಳೂರಿನ ಡ್ಯೂ ಡ್ರಾಪ್ ಹೋಟೆಲ್ನಲ್ಲಿ ಅವರೆಲ್ಲ ಶಿಸ್ತುಬದ್ಧವಾಗಿ ಕ್ಯಾಟ್ವಾಕ್, ಅಲ್ಲಲ್ಲ 'ಸಿಲ್ಕ್'ವಾಕ್ ಮಾಡಿದರು. ಕಾರಣ ಅದು, 'ಸಿಲ್ಕ್ ಮಾರ್ಕ್ ಎಕ್ಸ್ಪೋ-2014' ಫ್ಯಾಶನ್ ಶೋನ ಪ್ರಾತ್ಯಕ್ಷಿಕೆ!
ಸೆಂಟ್ರಲ್ ಸಿಲ್ಕ್ ಬೋರ್ಡ್ನ ಅಂಗಸಂಸ್ಥೆ ಸಿಲ್ಕ್ ಮಾರ್ಕ್ ಆರ್ಗನೈಸೇಷನ್ ಆಫ್ ಇಂಡಿಯಾ ಬೆಂಗಳೂರಿನ ಶಿಕ್ಷಕರ ಸದನದಲ್ಲಿ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಹಮ್ಮಿಕೊಂಡಿದೆ. ಈ ಪ್ರಯುಕ್ತ ವನ್ಯ ರೇಷ್ಮೆಯ ವಿವಿಧ ಉಡುಪು ಧರಿಸಿ ರೂಪದರ್ಶಿಯರು ರೇಷ್ಮೆ ಮೇಳಕ್ಕೆ ಕಳೆತಂದರು. ಕಸೂತಿ ಸೀರೆ, ಪಶ್ಚಿಮ ಬಂಗಾಳದ ಕಂತಾ, ಕಾಶ್ಮೀರದ ಚಿಫನ್ಸ್ ಮತ್ತು ಚಿನ್ನೋನ್ಸ್, ಮದುವೆ ವಿಶೇಷಗಳಾದ ಕಾಂಚೀವರಂ, ಬನಾರಸ್, ಪೋಚಾಮಪಲ್ಲೀ, ಧರ್ಮ್ವರಂ, ಉಪ್ಪಡ, ಕಲಂಕರಿ ಉಡುಪುಗಳು ರೇಷ್ಮೆ ಮೇಳದಲ್ಲಿ ಸಿಗಲಿವೆ.
ನಟಿ ರಾಜೇಶ್ವರಿ, 'ಮಿಸ್ ಕೇರಳ' ದೀಪಿಕಾ, ರಕ್ಷಿತ, ರಿಂಕು, ಸಂಧ್ಯಾ, ಕಾವ್ಯ, 'ಮಿಸ್ಟರ್ ಬೆಂಗಳೂರು' ಚೈತನ್ಯ ಹಾಗೂ ದರ್ಶನ್ ರ್ಯಾಂಪ್ನಲ್ಲಿ ಹೆಜ್ಜೆಹಾಕಿದರು. ನಟಿ ರಾಣಿ ಗೌಡ ಮಾಡೆಲ್ಗಳಿಗೆ ಸಾತ್ ನೀಡಿದ್ದು ವಿಶೇಷವಾಗಿತ್ತು. ಸುಧಿ ಶೆಟ್ಟಿ ಕೊರಿಯೋಗ್ರಫಿ ಗಮನಸೆಳೆಯಿತು.
ವನ್ಯ ರೇಷ್ಮೆ ಹುಳುಗಳ ಸಂಗ್ರಹ, ಕಸುಬು ನೂಲು ರೇಖಾಚಿತ್ರ, ರೇಷ್ಮೆ ಕೃಷಿ ಮತ್ತು ರೇಷ್ಮೆ ನೇಯ್ಗೆ ನಮ್ಮ ಪರಂಪರೆಯ ಭಾಗ. ಸಾವಿರಾರು ಬುಡಕಟ್ಟು ಜನರು ಜೀವನೋಪಾಯ ಕಂಡುಕೊಂಡಿದ್ದಾರೆ. ವನ್ಯ ರೇಷ್ಮೆ, ತಸಾರ್, ಎರಿ ಮತ್ತು ಮುಗಾ ರೇಷ್ಮೆಗಳು ವಾಣಿಜ್ಯ ಮೌಲ್ಯ ಹೊಂದಿವೆ.
- ಟಿ.ವಿ. ಮಾರುತಿ , ಸಿಲ್ಕ್ ಮಾರ್ಕ್ ಆರ್ಗನೈಸೇಷನ್ ಆಫ್ ಇಂಡಿಯಾ ಅಧ್ಯಕ್ಷ
-ಎಲ್ಕೆ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.