ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಅರಿತು ನಡೆದರೆ ಸಾವಿರ ದಾರಿ ಮರೆತು ನಡೆದರೆ ಸಾವಿಗೆ ದಾರಿ

Vishwanath S
Updated On : 24 Feb 2014, 1:22 am

ವಿವೇಕಾನಂದರು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ದಿಗ್ವಿಜಯ ಸಾಧಿಸಿ ಕೊಲ್ಕತ್ತಾಕ್ಕೆ ಮರಳಿದ್ದರು. ಅವರ ಗೌರವಾರ್ಥ ಭಾರೀ ಸಮಾರಂಭ ಏರ್ಪಡಿಸಲಾಗಿತ್ತು. ಆಗ ಸ್ವಾಮೀಜಿಯ ಬಾಲ್ಯ ಸ್ನೇಹಿತ ಪ್ರಿಯನಾಥ ಸಿನ್ಹ, 'ಈಗ ಬಂಗಾಳದಲ್ಲೆಲ್ಲ ಬರಗಾಲ ಬಡಿದಿದೆ. ಹಾಗಿರುವಾಗ ನಿನ್ನ ಸನ್ಮಾನಕ್ಕಾಗಿ ಅದ್ಧೂರಿಯ ಸಮಾರಂಭ ಏರ್ಪಡಿಸಿದ್ದಾರಲ್ಲ? ನಾನೆಣಿಸಿದ್ದೆ, ಸಮಾರಂಭಕ್ಕಾಗಿ ಸಂಗ್ರಹವಾದ ಹಣವನ್ನೆಲ್ಲ ಬರ ಪರಿಹಾರಕ್ಕಾಗಿ ಉಪಯೋಗಿಸಿ ಬಿಡಿ ಅಂತ ನೀನು ತಂತಿ ಕಳಿಸುತ್ತೀ ಅಂತ.' ಅದಕ್ಕೆ ಸ್ವಾಮೀಜಿ, 'ನೋಡು, ಸ್ವಲ್ಪ ಗಲಭೆ ಗದ್ದಲ ಆಗಬೇಕು ಎನ್ನು ವುದೇ ನನ್ನ ಉದ್ದೇಶ. ಏಕೆಂದರೆ, ಹಾಗಾದರೂ ಜನರಿಗೆ ರಾಮಕೃಷ್ಣರ ವಿಷಯ ಸ್ವಲ್ಪ ತಿಳಿಯಲಿ. ಅವರ ದಿವ್ಯ ಜೀವಿತೋದ್ದೇಶ ಎಲ್ಲರ ಗಮನ ಸೆಳೆಯುವಂತಾಗಲಿ ಎಂದು. ಅಷ್ಟಲ್ಲದೆ, ಈ ಸನ್ಮಾನಗಳಿಂದ ನನಗೆ ಬಂದ ಭಾಗ್ಯವೇನು? ನಾನು ಹಿಂದಿಗಿಂತ ದೊಡ್ಡ ಮನುಷ್ಯನಾಗಿಬಿಟ್ಟೆ ಅಂತ ನಿನಗನಿಸುತ್ತದೆಯೆ?
ನೋಡು, ಇತರ ದೇಶಗಳಲ್ಲಿ ಕ್ಷಾಮಗಳು ಅಪರೂಪ. ಭಾರತದಲ್ಲಿ ಮಾತ್ರ ಇವು ಮರುಕಳಿಸುತ್ತಲೇ ಇರುತ್ತವೆ. ಅದಕ್ಕೆ ಕಾರಣ ಇತರ ದೇಶಗಳಲ್ಲಿಯ ಜನ ಮನುಷ್ಯರಾಗಿದ್ದಾರೆ. ಆದರೆ ಇಲ್ಲಿಯವರಿನ್ನೂ ಮೃತಪ್ರಾಯರಾಗಿಯೇ ಇದ್ದಾರೆ. ಇಲ್ಲಿ ಚಟುವಟಿಕೆಯೇ ಕಾಣುವುದಿಲ್ಲ. ಮೊದಲು ಭಾರತೀಯರು ಶ್ರೀರಾಮಕೃಷ್ಣರ ವಿಷಯವನ್ನು ತಿಳಿದುಕೊಂಡು ತನ್ಮೂಲಕ ತಮ್ಮ ಸ್ವಾರ್ಥಬುದ್ಧಿಯನ್ನು ಕಳೆದುಕೊಳ್ಳಲಿ, ಪರಸ್ಪರ ಸಹಕಾರದಿಂದ ಬದುಕುವುದನ್ನು ಕಲಿಯಲಿ. ಆಗ ಕ್ಷಾಮಡಾಮರಗಳನ್ನೇ ತಡೆಗಟ್ಟುವಂತಹ ಪ್ರಯತ್ನ ಮಾಡಲು ಜನರಿಗೆ ಸಾಧ್ಯವಾಗುತ್ತದೆ. ನಾನು ಆ ದಿಸೆಯಲ್ಲಿ ಕಾರ್ಯಮಗ್ನನಾಗಿರುವೆನು.' ಇದನ್ನು ಕೇಳಿ ಪ್ರಿಯನಾಥನು 'ನರೇನ್, ನಿಜಕ್ಕೂ ನೀನು ದೇವರೇ ಆಗಿದ್ದೀಯೆ' ಎಂದುಕೊಂಡ. 


-ಆನಂದ ಎಸ್.ಎನ್.
anandsn193@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement