ವಾಟ್ಸ್ ಆ್ಯಪ್
ಫೇಸ್ಬುಕ್ಗೆ ಹೋಲಿಸಿದರೆ ವಾಟ್ಸ್ ಆ್ಯಪ್ ವೈಯಕ್ತಿಕ. ಗ್ರೂಪ್ನಲ್ಲಿ ಅಪ್ಪಿತಪ್ಪಿ ಏನಾದ್ರೂ ಪೋಸ್ಟ್ ಆದ್ರೂ ಅದನ್ನು ಗ್ರೂಪ್ನ ಸದಸ್ಯರು ಮಾತ್ರ ವೀಕ್ಷಿಸಬಹುದು. ಪೋಸ್ಟ್ ಬಹಿರಂಗವಾಗುವುದಿಲ್ಲ.
ಇದು ಫೇಸ್ಬುಕ್ಗಿಂತ ಹೆಚ್ಚು ಸುರಕ್ಷಿತ. ಬಳಕೆದಾರರ ಅಜಾಗರೂಕತೆಯಿಂದ ಅಕೌಂಟ್ ಹ್ಯಾಕ್ ಆಗಬಹುದು. ಆದರೆ ಫೇಸ್ಬುಕ್ನಲ್ಲಿ ನಮ್ಮ ತಪ್ಪಿನಿಂದಲೇ ಹ್ಯಾಕ್ ಆಗುವ ಸಾಧ್ಯತೆ ಹೆಚ್ಚು.
ವಾಟ್ಸ್ ಆ್ಯಪ್ನಲ್ಲಿ ಮೆಸೇಜ್ ಕಳುಹಿಸಿದ ವ್ಯಕ್ತಿಗೆ ನೇರವಾಗಿ ಹೋಗುತ್ತದೆ. ಜತೆಗೆ ಆ ವ್ಯಕ್ತಿ ಆನ್ಲೈನ್ನಲ್ಲಿ ಇದ್ದಾನೋ ಹೇಗೆ? ಕೊನೆಯ ಬಾರಿ ಬಳಕೆ ಮಾಡಿದ ದಿನಾಂಕ, ಸಮಯ ತಿಳಿಯಬಹುದು.
ವಾಟ್ಸ್ ಆ್ಯಪ್ನಲ್ಲಿ ಮೋಸ ಸಾಧ್ಯವಿಲ್ಲ. ನಿಮ್ಮ ಅಕೌಂಟ್ ನಿಮ್ಮದೇ ಆಗಿರುತ್ತದೆ. ಇಮೇಲ್ ಐಡಿ, ಪಾಸ್ವರ್ಡ್ನ ಅಗತ್ಯವಿಲ್ಲ, ಫೋನ್ ನಂಬರ್ ಒಂದಿದ್ದರೆ ಸಾಕು ಅಕೌಂಟ್ ಕ್ರಿಯೇಟ್ ಮಾಡಬಹುದು.
ವಾಟ್ಸ್ ಆ್ಯಪ್ ಆರಂಭಗೊಂಡದ್ದು 2009ರಲ್ಲಿ. ಯಾಹೂ ಕಂಪೆನಿಯ ಮಾಜಿ ಉದ್ಯೋಗಿಗಳಾದ ಅಮೆರಿಕದ ಬ್ರಿಯಾನ್ ಆಕ್ಟನ್, ಉಕ್ರೇನಿನ ಜನ್ಕೌಮ್ ಆರಂಭಿಸಿದ್ದರು.
ಈ ಕಂಪನಿಯಲ್ಲಿ ಒಟ್ಟು 55 ಮಂದಿ ಉದ್ಯೋಗಿಗಳಿದ್ದಾರೆ. ಇದರ ಕೇಂದ್ರ ಕಚೇರಿ ಕ್ಯಾಲಿಫೋರ್ನಿಯಾದ ಮೌಂಟನ್ವ್ಯೂನಲ್ಲೇ ಇರಲಿದೆ. ಇದರ ಮುಖ್ಯಸ್ಥ ಮಾರ್ಕ್ ಜುಕರ್ಬರ್ಗ್.
ಮೆಸೇಜ್, ವಿಡಿಯೊ, ಫೋಟೊ, ವಾಯ್ಸ್ ಮೆಸೇಜ್ಗಳನ್ನು ಕಳುಹಿಸಬಹುದಾದ ವಾಟ್ಸ್ ಆ್ಯಪ್ ಅನ್ನು ವಿಶ್ವದಲ್ಲಿ 45 ಕೋಟಿ ಜನರು ಬಳಸುತ್ತಿದ್ದಾರೆ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.