ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ನೈಜ ಗುರುವಿನ ನಿಜಪಾಠದ ಪರಿ

Vishwanath S
Updated On : 25 Feb 2014, 1:22 am

ವಿವೇಕಾನಂದರು ಗುರುಭಾಯಿಗಳನ್ನು ಕಾರ್ಯರಂಗಕ್ಕೆ ಇಳಿಸಲು ಉತ್ಸುಕರಾಗಿದ್ದರು. ಪ್ರತಿಯೊಬ್ಬ ಗುರುಭಾಯಿಯ ಜ್ಞಾನ, ಸ್ವಭಾವ, ಸಾಮರ್ಥ್ಯಗಳನ್ನು ಗ್ರಹಿಸುವುದು, ಅವರ ವ್ಯಕ್ತಿತ್ವಕ್ಕನುಗುಣವಾಗಿ ಕಾರ್ಯಕ್ಷೇತ್ರವನ್ನು ಸಿದ್ಧಗೊಳಿಸುವುದು, ನಂತರ ಅವರನ್ನು ತರಬೇತಿಗೊಳಿಸಿ ಮುನ್ನಡೆಸುವ ಪರಿ ನಿಜವಾಗಿಯೂ ಗುರು ಎನಿಸಿಕೊಂಡಿರುವವನು ತನ್ನ ಶಿಷ್ಯರನ್ನು ಹೇಗೆ ನಿರ್ಮಾಣ ಮಾಡಬೇಕೆಂಬ ಅದ್ಭುತ ಪಾಠವನ್ನು ಕಲಿಯಬಹುದಾಗಿದೆ.
ಸ್ವಾಮೀಜಿ ಮತ್ತೊಮ್ಮೆ ಪಶ್ಚಿಮದೇಶಗಳತ್ತ ಪಯಣಿಸಲು ನಿರ್ಧರಿಸಿದ್ದರು. ತಮ್ಮೊಡನೆ ಗುರುಭಾಯಿ ತುರೀಯಾನಂದರನ್ನು ಕರೆದೊಯ್ಯಬೇಕೆಂದು ತೀರ್ಮಾನಿಸಿದ್ದರು. ತುರೀಯಾನಂದರು ಸ್ವಭಾವತಃ ಧ್ಯಾನಶೀಲರು. ಅಂತ ರ್ಮುಖಿ ವ್ಯಕ್ತಿತ್ವದ ಅವರನ್ನು ಸಾರ್ವಜನಿಕ ರಂಗಕ್ಕೆ ಕರೆ ತರಲು ಸ್ವಾಮೀಜಿ ನಿಶ್ಚಯಿಸಿದರು. ಒಂದು ದಿನ ಅವರಿಬ್ಬರಿಗೂ ಈ ವಿಷಯವಾಗಿ ವಾಗ್ವಾದ ಪ್ರಾರಂಭವಾಯಿತು. ಕಡೆಗೆ ಸ್ವಾಮೀಜಿ ತುರೀಯಾನಂದರ ಕೊರಳ ಸುತ್ತ ತಮ್ಮ ತೋಳುಗಳನ್ನು ಬಳಸಿ ತಲೆಯನ್ನು ಅವರ ಎದೆಯ ಮೇಲೊರಗಿಸಿ ಕಣ್ಣೀರ ಕೋಡಿ ಹರಿಸುತ್ತಾ ನುಡಿದರು, ಪ್ರಿಯ ಹರಿಭಾಯ್, ನಾನು ನಮ್ಮ ಗುರುದೇವರ ಕಾರ್ಯಗಳನ್ನು ಪೂರೈಸುವುದಕ್ಕಾಗಿ ನನ್ನ ಕೊನೆಯುಸಿರಿನವರೆಗೂ ತೇಯುತ್ತಿರುವುದು? ಈ ಮಹಾಭಾರದಲ್ಲಿ ನೀನು ಒಂದಿಷ್ಟನ್ನಾದರೂ ಹೊರಲಾರೆಯಾ?
ಈ ಮಾತನ್ನು ಕೇಳಿ ತುರೀಯಾನಂದರು ಕರಗಿಹೋದರು. ಸ್ವಾಮೀಜಿ ತಮಗೆ ಯಾವ ಕೆಲಸವನ್ನು ಒಪ್ಪಿಸುವರೋ ಅದನ್ನು ಮರುಮಾತಿಲ್ಲದೆ ಮಾಡುವುದಾಗಿ ಪ್ರತಿಜ್ಞೆ ಮಾಡಿದರು. ಅಂದಿನಿಂದಲೇ ಅವರು ತಮ್ಮ ಸೋದರ ಸಂನ್ಯಾಸಿಗಳೊಂದಿಗೆ ಕೆಲಸಕಾರ್ಯಗಳ ಹೊಣೆಗಾರಿಕೆಯನ್ನು ವಹಿಸಿಕೊಳ್ಳತೊಡಗಿದರು.


-ಆನಂದ ಎಸ್.ಎನ್.
anandsn193@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement