ನ್ಯಾನೋಕಥೆ
ಸದಾ ಯಂತ್ರೋಪಕರಣಗಳ ನಡುವೆ ಕೆಲಸ ಮಾಡುತ್ತಿದ್ದ ಕಾರ್ಮಿಕ, ವನವಿಹಾರಕ್ಕೆ ಹೋದಾಗ ಹಕ್ಕಿ ಪಕ್ಷಿಗಳ ಕಲರವಕ್ಕೆ ಕಿವುಡನಾಗಿದ್ದ.
=
ಚಿಕ್ಕ ಮರಿಯಾಗಿದ್ದಾಗಿನಿಂದ ಸಾಕಿ ಬೆಳೆಸಿದ ಮನೆ ಮಾಲಿಕನ ನಾಯಿ ಅಕ್ಕರೆಯಿಂದ ಕರೆದು ಮೈ ಸವರಿ ಬಿಸ್ಕೆಟ್ ಹಾಕುತ್ತಿದ್ದ ಬಾಡಿಗೆದಾರನ ಬಳಿಯೇ ಹೆಚ್ಚು ಹೊತ್ತು ಕಳೆಯುತ್ತಿತ್ತು.
=
ಆತ ತನ್ನ ಶತ್ರುವನ್ನು ಕೊಲ್ಲಲು ಹೋದ. ಶತ್ರುವಿನ ಹೆಗಲ ಮೇಲಿದ್ದ ಹಸುಗೂಸಿನ ನಿರ್ಮಲ ನಗುವಿಗೆ ಶರಣಾದ. ಕೈಯಲ್ಲಿದ್ದ ಖಡ್ಗ ಜಾರಿತು. ಮಗುವಿಗೆ ವಂದಿಸಿ ಹಿಂದಿರುಗಿದ.
=
ಹೆಚ್ಚು ಹಣಗಳಿಸುವ ಸಲುವಾಗಿ ಮರಗಳ ಉರುಳಿಸಿ ಮನೆಕಟ್ಟಿಸಿದ ಶ್ರೀಮಂತನೊಬ್ಬ ಉಸಿರಾಡುವ ಗಾಳಿಗೂ ಹಣ ವ್ಯಯಿಸುತ್ತಿದ್ದಾನೆ ಆಸ್ಪತ್ರೆಯಲ್ಲಿ.
=
ಸ್ತ್ರೀ ಸಬಲೀಕರಣದ ಬಗ್ಗೆ ಭಾಷಣ ಮಾಡಲು ಬಂದಿದ್ದ ಪುಢಾರಿ, ತನ್ನ ಹೆಂಡತಿಯನ್ನೇ ಗೃಹ ಬಂಧನದಲ್ಲಿಟ್ಟಿದ್ದ.
=
ಕನ್ನಡ ಪ್ರೇಮಿ, ಕನ್ನಡ ಕಟ್ಟಾಳು ಎಂದು ಸ್ವಯಂ ಘೋಷಿಸಿಕೊಂಡ ಯುವಕ ಅನ್ಯ ಭಾಷೆಯ ಹುಡುಗಿಯ ಪ್ರೇಮ ಪಾಶಕ್ಕೆ ಸಿಲುಕಿ 'ನಾನು ಭಾರತೀಯ' ಎಂದು ಹೇಳುತ್ತಿದ್ದಾನೆ.
- ಗಂಗಾಚಾರಿ, ಬೆಂಗಳೂರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.